Viral Video: ನಾಯಿಯ ದಾಳಿಯಿಂದ ಬೆಕ್ಕನ್ನು ರಕ್ಷಿಸಿದ ರಿಯಲ್ ಹೀರೋ; ನೆಟ್ಟಿಗರ ಮನ ಗೆದ್ದ ವಿಡಿಯೊ ಇಲ್ಲಿದೆ
ವ್ಯಕ್ತಿಯೊಬ್ಬ ನಾಯಿಯೊಂದು ಬೆಕ್ಕಿನ ಮೇಲೆ ದಾಳಿ ಮಾಡುವುದನ್ನು ತಡೆದು ಸೋಶಿಯಲ್ ಮಿಡಿಯಾದಲ್ಲಿ ರಿಯಲ್ ಹೀರೊ ಎನಿಸಿಕೊಂಡಿದ್ದಾನೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಆತನ ಸಮಯಪ್ರಜ್ಞೆಯನ್ನು ಹೊಗಳಿದ್ದಾರೆ.


ಬೆಕ್ಕಿನ ಮೇಲೆ ನಾಯಿ ದಾಳಿ ಮಾಡಿ ಕೊಂದುಹಾಕಿದ ಎಷ್ಟೋ ಪ್ರಕರಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ವ್ಯಕ್ತಿಯೊಬ್ಬ ನಾಯಿಯೊಂದು ಬೆಕ್ಕಿನ ಮೇಲೆ ದಾಳಿ ಮಾಡುವುದನ್ನು ತಡೆದು ಸೋಶಿಯಲ್ ಮಿಡಿಯಾದಲ್ಲಿ ರಿಯಲ್ ಹೀರೊ ಎನಿಸಿಕೊಂಡಿದ್ದಾನೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ನಾಯಿಯೊಂದು ವೇಗವಾಗಿ ಓಡಿಬಂದು ಬೆಕ್ಕಿನ ಮೇಲೆ ದಾಳಿ ಮಾಡಲು ಮುಂದಾಗಿದೆ. ಆಗ ಆ ವ್ಯಕ್ತಿ ಕೂಡಲೇ ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮನೆಯೊಳಗೆ ಕರೆದುಕೊಂಡು ಹೋಗಿ ಬೆಕ್ಕನ್ನು ಪಾರು ಮಾಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಆತನನ್ನು ಹೊಗಳಿದ್ದಾರೆ.
ಈ ಪೋಸ್ಟ್ ಈಗಾಗಲೇ 45,000ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ ಮತ್ತು ಈ ದಾಳಿಯನ್ನು ತಡೆದ ವ್ಯಕ್ತಿಯನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಸಾಮಾನ್ಯವಾಗಿ ನಾಯಿ-ಬೆಕ್ಕುಗಳೆರೆಡೂ ಬದ್ಧ ವೈರಿಗಳ ಹಾಗೇ ಕಿತ್ತಾಡುತ್ತವೆ. ಈ ವ್ಯಕ್ತಿಯ ಸಮಯಪ್ರಜ್ಞೆಯಿಂದ ಬೆಕ್ಕಿನ ಜೀವ ಉಳಿದಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಡಿಯೊ ನೋಡಿ...
ಈ ಸುದ್ದಿಯನ್ನೂ ಓದಿ: Viral Video: ಚಲಿಸುವ ರೈಲು ಹತ್ತುವ ಸಾಹಸಕ್ಕೆ ಹೋಗಬಾರದು; ಯಾಕೆ ಎನ್ನುವುದಕ್ಕೆ ಈ ವಿಡಿಯೊ ನೋಡಿ
ನಾಯಿ ಮತ್ತು ಬೆಕ್ಕು ವಿರೋಧಿಗಳಾಗಿದ್ದರೂ ಹೇಗೆ ಸ್ನೇಹಿತರಾಗುತ್ತಾರೆ ಎಂಬುದನ್ನು ತೋರಿಸುವ ವಿಡಿಯೊವೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿತ್ತು.
ಖ್ಯಾತ ಇನ್‌ಸ್ಟಾಗ್ರಾಮರ್ ತನ್ನ ಮನೆಗೆ ಬೆಕ್ಕೊಂದನ್ನು ತಂದು ಸಾಕಿದ್ದಾನೆ. ಬೆಕ್ಕನ್ನು ನೋಡಿ ಇವನ ಸಾಕುನಾಯಿ ಆರಂಭದಲ್ಲಿ ದಾಳಿ ಮಾಡಲು ಪ್ರಯತ್ನಿಸಿತು. ನಂತರ ಅವುಗಳು ಒಟ್ಟಾಗಿ ಓಡಾಡುವುದು, ತಿನ್ನುವುದು ಮತ್ತು ಮಲಗುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದರು. ಇದುವರೆಗೆ, ಶತ್ರುಗಳಾಗಿದ್ದವರು ಸ್ನೇಹಿತರಾಗಿದ್ದು, ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಹಾಗಾಗಿ ಈ ವಿಡಿಯೊಕ್ಕೆ ಒಂದೂವರೆ ಮಿಲಿಯನ್ ವ್ಯೂವ್ಸ್ ಸಿಕ್ಕಿತ್ತು.