ಕಾಡನ್ನು ರಕ್ಷಿಸಲು ಜೆಸಿಬಿ ಎದುರು ನಿಂತು ಘರ್ಜಿಸಿದ ಒಬ್ಬಂಟಿ ಗಜರಾಜ: ವಿಡಿಯೋ ನೋಡಿ
Viral Video: ಸರಕಾರವು ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೇ ಹಾನಿಗೆಡವುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆನೆಯೊಂದು ಒಬ್ಬಂಟಿಯಾಗಿ ಜೆಸಿಬಿ ಎದುರು ನಿಂತು ಪ್ರತಿಭಟನೆ ಮಾಡಿದ ವಿಡಿಯೊ ವೊಂದು ವೈರಲ್ ಆಗುತ್ತಿದೆ. ಅಸ್ಸಾಂನಲ್ಲಿ ಈ ಘಟನೆ ನಡೆದಿದ್ದು ಅರಣ್ಯ ಪ್ರದೇಶದೊಳಗೆ ನಡೆ ಯುತ್ತಿರುವ ಕೆಲಸವನ್ನು ನಿಲ್ಲಿಸಲು ಜೆಸಿಬಿ ಯಂತ್ರದ ಎದುರು ನೇರವಾಗಿ ನಿಂತಿದೆ.
ಅರಣ್ಯದಲ್ಲಿ ಜೆಸಿಬಿ ಎದುರು ನಿಂತು ಪ್ರತಿಭಟಿಸಿದ ಆನೆ -
ಅಸ್ಸಾಂ,ಜು.17: ಇಂದು ರಸ್ತೆ ಕಾಮಗಾರಿ ಹೆಸರಿನಲ್ಲಿ ಸುತ್ತ ಮುತ್ತಲಿದ್ದ ಗಿಡ ಮರಗಳನ್ನು ನಾಶ ಮಾಡುವಂತಹ ಮಟ್ಟಿಗೆ ಇಳಿದು ಬಿಟ್ಟಿದ್ದೇವೆ. ಸರಕಾರವು ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೇ ಹಾನಿಗೆಡವುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆನೆಯೊಂದು ಒಬ್ಬಂಟಿಯಾಗಿ ಜೆಸಿಬಿ ಎದುರು ನಿಂತು ಪ್ರತಿಭಟನೆ ಮಾಡಿದ ವಿಡಿಯೊವೊಂದು ವೈರಲ್ (Viral Video) ಆಗುತ್ತಿದೆ. ಅಸ್ಸಾಂನಲ್ಲಿ ಈ ಘಟನೆ ನಡೆದಿದ್ದು ಅರಣ್ಯ ಪ್ರದೇಶದೊಳಗೆ ನಡೆಯುತ್ತಿರುವ ಕೆಲಸವನ್ನು ನಿಲ್ಲಿಸಲು ಜೆಸಿಬಿ ಯಂತ್ರದ ಎದುರು ನೇರವಾಗಿ ನಿಂತಿದೆ.
ಕಾಡು ಪ್ರಾಣಿಗಳ ಉಳಿವಿಗಾಗಿ ಅರಣ್ಯವನ್ನು ರಕ್ಷಣೆ ಮಾಡಬೇಕೆ? ಹೊರತು ಹಾನಿ ಮಾಡುವುದಲ್ಲ. ಆದರೆ ಅಸ್ಸಾಂ ಅರಣ್ಯದಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದ್ದಂತೆ ಆನೆಯೂ ತಾನು ಜೀವಿಸುವ ಸ್ಥಳವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಈ ಆಧುನಿಕ ಕಾಲ ಘಟ್ಟದಲ್ಲಿ ಮಾನವೀಯತೆ ಮತ್ತು ಮಾನವಕುಲ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಅನೇಕರು ಈ ಬಗ್ಗೆ ಕಿಡಿಕಾರಿದ್ದಾರೆ.
ವಿಡಿಯೋ ನೋಡಿ:
🚨VIRAL | Elephant stands against JCB to protect its forest in Assam. pic.twitter.com/dYUYEWW74C
— FalconUpdatesHQ (@FalconUpdatesHQ) July 15, 2026
ವೈರಲ್ ಆದ ದೃಶ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಜೆಸಿಬಿ ಮೂಲಕ ಕಾಮಗಾರಿ ಕೆಲಸ ನಡೆಯುತ್ತಿದೆ. ಆದರೆ ಇದ್ದಕ್ಕಿದ್ದಂತೆ ಆನೆ ಯೊಂದು ಜೆಸಿಬಿ ಬಳಿ ಬಂದು ಅಡ್ಡಲಾಗಿ ನಿಂತಿದೆ. ಆನೆಯೂ ತನ್ನ ಆವಾಸಸ್ಥಾನವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಈ ಮೂಕ ಹೋರಾಟ ಜನರ ಮನ ಗೆಲ್ಲುತ್ತಿದೆ. ವೀಕ್ಷಕರು ಆನೆಯ ಈ ದೃಢನಿಶ್ಚಯದ ನಿಲುವನ್ನು ಶ್ಲಾಘಿಸಿದ್ದಾರೆ. ಇದನ್ನು ಈ ವರ್ಷ ಸೆರೆ ಹಿಡಿಯಲಾದ ಅತ್ಯಂತ ಭಾವನಾತ್ಮಕ ವನ್ಯಜೀವಿ ದೃಶ್ಯ ಎಂದು ಕರೆಯಲಾಗಿದೆ.
Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ
ಆದಾಗ್ಯೂ, ವಿಸ್ತರಿಸುತ್ತಿರುವ ರಸ್ತೆಗಳು, ಗಣಿಗಾರಿಕೆ, ಕೃಷಿ ಮತ್ತು ಇತರ ಅಭಿವೃದ್ಧಿ ಚಟುವಟಿಕೆ ಗಳಿಂದ ಅರಣ್ಯವೇ ನಾಶ ಮಾಡುವ ಮಟ್ಟಿಗೆ ನಾವು ಇಳಿದಿದ್ದೇವೆ. ಭಾರತದಾದ್ಯಂತ ಕಾಡುಗಳು ನಾಶ ವಾಗುತ್ತಿರುವುದರಿಂದ ಪ್ರಾಣಿಗಳಿಗೆ ವಾಸಸ್ಥಾನವೇ ಇಲ್ಲದಂತೆ ಆಗಿದೆ. ಈ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು "ಪ್ರಾಣಿಗಳಿಗೆ ಈ ರೀತಿ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಆಕ್ರೋಶ ಹೊರಹಾಕಿದ್ದಾರೆ. ಅಸ್ಸಾಂ ರಾಜ್ಯವು ಭಾರತದಲ್ಲೇ ಅತಿ ಹೆಚ್ಚು ಏಷ್ಯನ್ ಆನೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತಿದೆ.