Viral Video: ಧೋತಿ ಉಟ್ಟ ಅಜ್ಜನ ಕ್ರಿಕೆಟ್ ಕ್ರೇಜ್‌ಗೆ ಫಿದಾ ಆಗದವರುಂಟೇ? ಈ ವಿಡಿಯೊ ನೋಡಿ
ಅಜ್ಜನೊಬ್ಬ ಧೋತಿ ಧರಿಸಿ ಮಕ್ಕಳ ಜೊತೆ ಬಹಳ ಹುರುಪಿನಿಂದ ಕ್ರಿಕೆಟ್ ಆಡಿದ್ದಾನೆ. ಅಜ್ಜನ ಈ ಕ್ರಿಕೆಟ್ ಪ್ರೇಮ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಅಜ್ಜನನ್ನು ಧೋನಿಗೆ ಹೋಲಿಕೆ ಮಾಡಿದ್ದಾರೆ.


ಕ್ರಿಕೆಟ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಕಣ್ಣರಳಿಸುತ್ತಾರೆ. ಕ್ರಿಕೆಟ್ ಆಡಲು ಮೈದಾನವೇ ಬೇಕೆಂದಿಲ್ಲ. ಸಣ್ಣದೊಂದು ಗಲ್ಲಿ ಇದ್ದರೂ ಸಾಕು. ಇರುವ ಸೌಕರ್ಯದಲ್ಲೇ ಪಂದ್ಯವನ್ನಾಡುತ್ತಾರೆ. ಮಕ್ಕಳು ಕೂಡ ಕೈಯಲ್ಲೊಂದು ಬ್ಯಾಟು, ಚೆಂಡು ಹಿಡಿದುಕೊಂಡು ಕ್ರಿಕೆಟ್ ಆಡುವ ಬಾ...ಎಂದು ಕರೆಯುತ್ತಾರೆ. ಇತ್ತೀಚೆಗೆ ಕುಂಭಮೇಳದಲ್ಲಿ ನಾಗಸಾಧುವೊಬ್ಬ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಡಿದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಈಗ ಇಲ್ಲೊಬ್ಬ ಅಜ್ಜ ಕೂಡ ತಾನೇನು ಕಡಿಮೆ ಇಲ್ಲ ಎಂದು ತೋರಿಸೋದಕ್ಕೆ ಸಾಂಪ್ರದಾಯಿಕ ಧೋತಿ ಹಾಕಿಕೊಂಡು ಮಕ್ಕಳ ಜೊತೆ ಖುಷಿಯಿಂದ ಕ್ರಿಕೆಟ್ ಆಡಿದ್ದಾನೆ. ರನ್‌ಗಾಗಿ ಮೈದಾನದಲ್ಲಿ ಓಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ರನ್ ಗಳಿಸಲು ಅಜ್ಜ ಉತ್ಸಾಹದಿಂದ ಜೋರಾಗಿ ಓಡಾಡುವುದನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕರು ಆ ಅಜ್ಜನನ್ನು ಭಾರತದ ಮಾಜಿ ಕ್ರಿಕೆಟ್ ನಾಯಕ ಎಂಎಸ್ ಧೋನಿಗೆ ಹೋಲಿಕೆ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಅಜ್ಜನು ಬ್ಯಾಟ್ ಹಿಡಿದುಕೊಂಡು ಖುಷಿಯಿಂದ ಕ್ರಿಕೆಟ್ ಆಡುವ ದೃಶ್ಯ ಸೆರೆಯಾಗಿದೆ. ಇಲ್ಲಿ ಅಜ್ಜ ತನ್ನ ವಯಸ್ಸನ್ನು ಮರೆತು ಬ್ಯಾಟ್ ಹಿಡಿದು ಬಾಲ್ ಹೊಡೆಯಲು ಪಕ್ಕಕ್ಕೆ ಬಾಗಿ ಸೂಪರ್ ಆಗಿ ಬ್ಯಾಟಿಂಗ್ ಮಾಡಿ ನಂತರ ರನ್ ಗಳಿಸಲು ಬಹಳ ಉತ್ಸಾಹದಿಂದ ವೇಗವಾಗಿ ಓಡಿದ್ದಾನೆ.ಅಜ್ಜ ಫುಲ್ ಜೋಶ್‌ನಲ್ಲಿ ಕ್ರಿಕೆಟ್ ಆಡುವುದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಅದು ಅಲ್ಲದೇ, ಅಜ್ಜನನ್ನು ಕ್ರಿಕೆಟಿಗ ಧೋನಿಗೆ ಹೋಲಿಸಿದ್ದಾರೆ.
ಅಜ್ಜ ಕ್ರಿಕೆಟ್ ಆಡಿದ ವಿಡಿಯೊ ಇಲ್ಲಿದೆ ನೋಡಿ...
Dhoni bhai last over mein jab 75 runs chahiye ho #CSKvsRCB pic.twitter.com/gueEvR8R0r
— Raja Babu (@GaurangBhardwa1) March 28, 2025
ಈ ವಿಡಿಯೊ ವೈರಲ್ ಆಗಿ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು "ಹೌದು, ಧೋನಿ ಮಾಡುವುದು ಹೀಗೆ.” ಎಂದು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರು “ಪ್ರೇಕ್ಷಕರನ್ನು ಸಂತೋಷಪಡಿಸಲು ಅವರು ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಹೊಡೆಯುತ್ತಾರೆ" ಎಂದು ಬರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದಾಗಿನಿಂದ ಈ ವಿಡಿಯೊ ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 6,000 ಲೈಕ್‍ಗಳೊಂದಿಗೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.ಅಜ್ಜನ ಕ್ರಿಕೆಟ್ ಪ್ರೇಮ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ. 'ದಾದಾ ಜಿ' ಎಂದಾದರೂ ಧೋನಿಯನ್ನು ಭೇಟಿಯಾಗಿದ್ದೀರೊ? ಇಲ್ಲವೋ? ಎಂದು ನೆಟ್ಟಿಗರು ಕೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಈ ಸಂತನಿಗೆ ವಯಸ್ಸು 60... ಕೈಗೊಂಡಿದ್ದು ಬರೋಬ್ಬರಿ 321 ಕಿ.ಮೀ ಯಾತ್ರೆ; ಸಾಲದ್ದಕ್ಕೆ ದಂಡಾವತ್ ಪ್ರಣಾಮ ಬೇರೆ!
ಈ ಹಿಂದೆ ಜನಜಂಗುಳಿಯಿಂದ ಕೂಡಿದ ಬೀದಿಯಲ್ಲಿ ಅಜ್ಜನೊಬ್ಬ ಕ್ರಿಕೆಟ್ ಚೆಂಡನ್ನು ಹೊಡೆದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಇದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.ಅದು ಅಲ್ಲದೇ ಅಜ್ಜನ ಈ ಕ್ರಿಕೆಟ್ ಆಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೆಲವರು ಅಜ್ಜ ಎಲ್ಲಾ ದೇಸಿ ಹುಡುಗರನ್ನು ಮತ್ತು ಆತ ಇಷ್ಟಪಡುವಂತಹ ಕ್ರಿಕೆಟಿಗರನ್ನು ಅನುಕರಣೆ ಮಾಡಿದ್ದಾನೆ ಎಂದು ತಮಾಷೆ ಮಾಡಿದ್ದಾರೆ.