ಇಂಗ್ಲೆಂಡ್ ರಸ್ತೆಯಲ್ಲಿ ಭಾರತೀಯ ಆಟೋ ರಿಕ್ಷಾ: ಅಪರೂಪದ ವಿಡಿಯೊ ಶೇರ್ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ
Viral Video: ಬ್ರಿಟನ್ ರಸ್ತೆಯಲ್ಲಿ ಭಾರತೀಯ ಆಟೋ ರಿಕ್ಷಾವೊಂದು ಓಡಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೊ ಹಂಚಿಕೊಂಡಿದ್ದು, ಬಳಕೆದಾರರು ಇದನ್ನು ತಮಾಷೆಯಾಗಿ ʼರಿವರ್ಸ್ ಕೊಲೊನೈಸೇಶನ್ʼ ಎಂದು ಕರೆದಿದ್ದಾರೆ.
ಇಂಗ್ಲೆಂಡ್‌ನ ಬೀದಿಯಲ್ಲಿ ಭಾರತದ ಆಟೋ ರಿಕ್ಷಾ -
ಲಂಡನ್, ಅ. 6: ಭಾರತೀಯ ಶೈಲಿಯ ಆಟೋ ರಿಕ್ಷಾಗಳು ಈಗ ವಿದೇಶದಲ್ಲೂ ಕಾಣಸಿಗುತ್ತಿವೆ. ಅದಕ್ಕೆ ಉದಾಹರಣೆ ಎನ್ನುವಂತೆ ಬ್ರಿಟನ್‌ನ ರಸ್ತೆಯಲ್ಲಿ ಭಾರತೀಯ ಶೈಲಿಯ ಆಟೋ ರಿಕ್ಷಾವೊಂದು ಓಡಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ. ಆನಂದ್ ಮಹೀಂದ್ರಾ ಈ ವಿಡಿಯೊವನ್ನು ಹಂಚಿಕೊಂಡಿದ್ದು ಆನ್‌ಲೈನ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳಕೆದಾರರು ಇದನ್ನು ತಮಾಷೆಯಾಗಿ ʼರಿವರ್ಸ್ ಕೊಲೊನೈಸೇಶನ್ʼ ಎಂದು ಕರೆದಿದ್ದಾರೆ.
ಸಾಮಾನ್ಯವಾಗಿ ಭಾರತದಲ್ಲಿ ಬಸ್ ಬಿಟ್ಟರೆ ಸ್ಥಳೀಯವಾಗಿ ಓಡಾಡಲು ನಾವು ಆಟೋ ಬಳಕೆ ಮಾಡುತ್ತೇವೆ. ಇದೀಗ ಭಾರತೀಯ ಆಟೋ ರಿಕ್ಷಾವೊಂದು ಅನಿರೀಕ್ಷಿತವಾಗಿ ಇಂಗ್ಲೆಂಡ್ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಕುತೂಹಲ ಹೆಚ್ಚಾಗಿದೆ. ಆನಂದ್ ಮಹೀಂದ್ರಾ ಶೇರ್ ಮಾಡಿದ ವಿಡಿಯೊದಲ್ಲಿ ಭಾರತದ ಆಟೋ ಇಂಗ್ಲೆಂಡ್‌ನ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ.
ವಿಡಿಯೊ ನೋಡಿ:
“UK ma riksha aavi gai chhe… Mahindra ni chhe, aapda” 🙂 (Imported by a hobbyist) https://t.co/RQfw5sBnjJ
— anand mahindra (@anandmahindra) October 5, 2026
ಭಾರತದಲ್ಲಿ ಆಟೋ ರಿಕ್ಷಾಗಳು ದೈನಂದಿನ ಜೀವನದ ಅವಿಭಾಜ್ಯ ಅಂಗ ಎನಿಸಿಕೊಂಡಿದೆ. ಆದಾಗ್ಯೂ ಇಂಗ್ಲೆಂಡ್‌ನ ರಸ್ತೆಗಳಲ್ಲಿ ಇಂತಹ ವಾಹನವನ್ನು ನೋಡುವುದು ಖಂಡಿತವಾಗಿಯೂ ಅಚ್ಚರಿಯ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಈ ಬಗ್ಗೆ ಪೋಸ್ಟ್‌ನಲ್ಲಿ, ʼʼಆಟೋ ರಿಕ್ಷಾವನ್ನು ಹವ್ಯಾಸಕ್ಕಾಗಿ ಯಾರೋ ಬ್ರಿಟನ್‌ಗೆ ಆಮದು ಮಾಡಿಕೊಂಡಿದ್ದಾರೆ. ಇಂಗ್ಲೆಂಡ್‌ಗೂ ನಮ್ಮ ಆಟೋ ರಿಕ್ಷಾ ತಲುಪಿದೆ. ಇದು ಮಹೀಂದ್ರಾ ಕಂಪನಿಯದ್ದುʼʼ ಎಂದು ಬರೆದಿದ್ದಾರೆ.
8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ
ಈ ಬಗ್ಗೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಒಬ್ಬರು "ಮುಂದಿನ ಬಾರಿ ನೀವು ಲಂಡನ್‌ಗೆ ಹೋದಾಗ, ನಿಮ್ಮದೇ ಆದ ರಿಕ್ಷಾದಲ್ಲಿ ಸುತ್ತಾಡಿ" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼವಿದೇಶದಲ್ಲೂ ನಮ್ಮ ಆಟೋ ರಿಕ್ಷಾ ನೋಡಲು ಖುಷಿಯಾಗುತ್ತದೆʼʼ ಎಂದಿದ್ದಾರೆ.