ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಎಲ್ಲೆಡೆ ಧೂಳು, ಊಟವೂ ಸರಿ ಇಲ್ಲʼʼ: ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿ 15 ದಿನಕ್ಕೆ ಅಸಮಾಧಾನ ಹೊರಹಾಕಿದ ಬೆಂಗಳೂರಿನ ಯುವಕ

Viral News: ಆಧುನಿಕ ಜೀವನ ಶೈಲಿಯಿಂದ ಹಿಡಿದು ಉತ್ತಮ ವಾತಾವರಣ, ಮೆಟ್ರೋ ಸೌಲಭ್ಯ ಹೀಗೆ ನಾನಾ ಕಾರಣಕ್ಕೆ ಬೆಂಗಳೂರು ಇಷ್ಟ ಪಡುವವರು ಅನೇಕರಿದ್ದಾರೆ. ಇದೀಗ ಯುವಕನೊಬ್ಬ ಕೆಲಸದ ನಿಮಿತ್ತ  ಬೆಂಗಳೂರಿನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದು ಹೊಸ ನಗರಕ್ಕೆ ಬಂದು ಕೇವಲ 15 ದಿನಗಳಲ್ಲೇ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾನೆ. ಹೈದರಾಬಾದ್‌ಗಿಂತ ಬೆಂಗಳೂರು ನಗರವೇ ಉತ್ತಮವಾಗಿದೆ ಎಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾನೆರೆ.

ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಿ 15 ದಿನದಲ್ಲೇ ಪ್ರಾಯಶ್ಚಿತಪಟ್ಟ ಯುವಕ

ಸಾಂದರ್ಭಿಕ ಚಿತ್ರ -

Profile
Pushpa Kumari Oct 6, 2026 7:55 PM

ಹೈದರಾಬಾದ್‌, ಅ. 6: ಟ್ರಾಫಿಕ್ ಕಿರಿಕಿರಿ ಬಿಟ್ಟರೆ ಸಿಲಿಕಾನ್ ಸಿಟಿ ಬೆಂಗಳೂರನ್ನು ಇಷ್ಟಪಡುವವರೇ ಹೆಚ್ಚು. ಆಧುನಿಕ ಜೀವನ ಶೈಲಿಯಿಂದ ಹಿಡಿದು ಉತ್ತಮ ವಾತಾವರಣ, ಮೆಟ್ರೋ ಸೌಲಭ್ಯ ಹೀಗೆ ನಾನಾ ಕಾರಣಕ್ಕೆ ಬಹುತೇಕರಿಗೆ ಬೆಂಗಳೂರು ಇಷ್ಟವಾಗುತ್ತದೆ. ಇದೀಗ ಯುವಕನೊಬ್ಬ ಕೆಲಸದ ನಿಮಿತ್ತ  ಬೆಂಗಳೂರಿನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದು, ಹೊಸ ನಗರಕ್ಕೆ ಬಂದು ಕೇವಲ 15 ದಿನಗಳಲ್ಲೇ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾನೆ. ಹೈದರಾಬಾದ್‌ಗಿಂತ ಬೆಂಗಳೂರು ನಗರವೇ ಉತ್ತಮವಾಗಿದೆ ಎಂದು ಪೋಸ್ಟ್‌ನಲ್ಲಿ (Viral News) ಬರೆದುಕೊಂಡಿದ್ದಾನೆ.

ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿದ ಬೆಂಗಳೂರಿನ ಯುವಕ ಅಲ್ಲಿನ ಧೂಳು, ರಸ್ತೆಗಳು, ಹವಾಮಾನ ಮತ್ತು ಆಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ.‌ ಈ ಪೋಸ್ಟ್  ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ರೆಡ್ಡಿಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಯುವಕ, ʼʼಕೆಲಸಕ್ಕಾಗಿ ಹೈದರಾಬಾದ್ ನಗರಕ್ಕೆ ಬಂದು ಹಫೀಜ್‌ ಪೇಟ್‌ನಲ್ಲಿ ದುಬಾರಿ ಬಾಡಿಗೆಯ ಫ್ಲಾಟ್ ಪಡೆದುಕೊಂಡರೂ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು ನಿರೀಕ್ಷೆಗಿಂತ ಹೆಚ್ಚು ಕಷ್ಟವಾಗಿದೆ. ಭಾರಿ ಹಣ ವೆಚ್ಚ ಮಾಡಿ ಫ್ಲ್ಯಾಟ್ ಖರೀದಿಸಿ, ಅದನ್ನು ನವೀಕರಿಸಿದ್ದರೂ ಕಿರಿಕಿರಿ ತಪ್ಪುತ್ತಿಲ್ಲ. ದೈನಂದಿನ ಕೆಲಸಕ್ಕಾಗಿ ಪ್ರಯಾಣಿಸುವಾಗ ಕಂಡು ಬರುವ ಶಬ್ದ ಮಾಲಿನ್ಯ ಮತ್ತು ಬೇಕಾಬಿಟ್ಟಿ ವಾಹನ ಚಾಲನೆಯಿಂದ ಸುಸ್ತಾಗಿದ್ದೇನೆʼʼ ಎಂದು ಹೇಳಿದ್ದಾನೆ.

ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

ನಗರದಲ್ಲಿ ಒಳ್ಳೆಯದೇನಾದರೂ ಇದೆಯೇ ಎಂದು ಇತರ ನಿವಾಸಿಗಳನ್ನು ಪ್ರಶ್ನಿಸಿರುವ ಆತ ಸಮಸ್ಯೆಗಳು ಕೇವಲ ಮನೆಗೆ ಮಾತ್ರ ಸೀಮಿತವಾಗಿಲ್ಲ. ಹಾಳಾದ ರಸ್ತೆಗಳು, ಕಸ, ತೆರೆದ ಚರಂಡಿ ನೀರಿನಿಂದಾಗಿ ನೆರೆಹೊರೆಯಲ್ಲಿ ಓಡಾಡುವುದೂ ಕಷ್ಟವಾಗಿದೆ. ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರ ನಿಜಕ್ಕೂ ಅಸಹ್ಯವಾಗಿದೆ ಎಂದು ಅವರು ಬರೆದಿದ್ದಾನೆ.

ಝೊಮೆಟೊ, ಸ್ವಿಗ್ಗಿ ಅಥವಾ ಹೋಟೆಲ್‌ಗಳಲ್ಲಿ ಆರ್ಡರ್ ಮಾಡಿದರೂ ತಮಗೆ ಸೂಕ್ತವಾದ, ಕನಿಷ್ಠ ಉತ್ತಮ ಭಾರತೀಯ ಶೈಲಿಯ ಆಹಾರವೂ ಸಿಗುತ್ತಿಲ್ಲ ಎಂದಿದ್ದಾನೆ. ಈ ಪೋಸ್ಟ್‌ಗೆ ಹೈದರಾಬಾದ್ ನಿವಾಸಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ʼʼಹೈದರಾಬಾದ್‌ನಲ್ಲಿ ಸೌಕರ್ಯಗಳ ವಿಚಾರದಲ್ಲಿ ನಿಮ್ಮ ಮಾತು ನಿಜವಿರಬಹುದು. ಆದರೆ ಇಲ್ಲಿನ ಆಹಾರ ಸಂಸ್ಕೃತಿಯನ್ನು ನಿಂದಿಸಿದರೆ ತಾವು ಒಪ್ಪುವುದಿಲ್ಲʼʼ ಎಂದು ಉತ್ತರಿಸಿದ್ದಾರೆ.