Viral Video: ಟ್ರಾಫಿಕ್ ಇರಲಿ, ಗದ್ದಲವಿರಲಿ ಈ ಆಟೋ ಚಾಲಕನ ಸಂಗೀತಕ್ಕೆ ತಡೆಯೇ ಇಲ್ಲ!ವಿಡಿಯೊ ವೈರಲ್
ಮುಂಬೈ ರಸ್ತೆಯ ಟ್ರಾಫಿಕ್ ಸಿಗ್ನಲ್‍ನಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋವನ್ನು ಓಡಿಸುವುದು ಮಾತ್ರವಲ್ಲದೆ ಹಾಡು ಹಾಡುತ್ತಾ ತನ್ನ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ, ಏಳು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.
![ಮುಂಬೈ ರಸ್ತೆಗಳಲ್ಲಿ ಈ ಆಟೋ ರಿಕ್ಷಾದ್ದೇ ಹವಾ! ಭಾರೀ ವೈರಲಾಗ್ತಿದೆ ಈ ವಿಡಿಯೊ](https://cdn-vishwavani-prod.hindverse.com/media/original_images/auto_viral_video.jpg)
ಕರೋಕೆ ಆಟೋರಿಕ್ಷಾ
![Profile](https://vishwavani.news/static/img/user.png)
ಮುಂಬೈ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಆಟೋರಿಕ್ಷಾಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರುತ್ತವೆ. ಇತ್ತೀಚೆಗಷ್ಟೇ ಆಟೋದ ಹಿಂದೆ ಅಕ್ವೇರಿಯಂ, ಹಾಗೇ ಹೆಂಡತಿ ತವರಿಗೆ ಹೋಗಿದ್ದಾಳೆ ಎಂಬ ಖುಷಿಗೆ ಬಿಸ್ಕೇಟ್ ಹಂಚಿದ ಸುದ್ದಿಗಳು ವೈರಲ್ ಆಗಿತ್ತು. ಇದೀಗ ಮುಂಬೈ ಮೂಲದ ಆಟೋ ಚಾಲಕನೊಬ್ಬ ತನ್ನ ಗ್ರಾಹಕರಿಗೆ ಸಂಗೀತದ ಮೂಲಕ ಖುಷಿ ಹಂಚುವ ಕಾಯಕ ಮಾಡಿದ್ದಾನೆ. ಆತ ಆಟೋ ಓಡಿಸುವುದರ ಜೊತೆಗೆ ಹಾಡು ಹಾಡುತ್ತಾ ತನ್ನ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ವೈರಲ್ ಆದ ವಿಡಿಯೊದಲ್ಲಿ ಚಾಲಕ ತನ್ನ ಮೈಕ್ರೊಫೋನ್ ಹಿಡಿದು ಬಾಲಿವುಡ್ ಹಾಡನ್ನು ಹಾಡುವ ಮೂಲಕ ಪ್ರದರ್ಶನ ನೀಡಿದ್ದಾನೆ. ಕರೋಕೆ ಸಿಸ್ಟಮ್ ಅಳವಡಿಸಿದ ಈ ಆಟೋವನ್ನು ಜುಹುವಿನ ರಸ್ತೆಯಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಟ್ರಾಫಿಕ್ ಕಾರಣದಿಂದ ಆಟೋ ನಿಲ್ಲಿಸಿದ ಈ ಚಾಲಕ ಹಾರ್ನ್ ಮಾಡುವ ಬದಲು ಖುಷಿಯಿಂದ ಹಾಡು ಹಾಡಿದ್ದಾನಂತೆ. ಈತನ ಹಾಡನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿ ನೆಟ್ಟಿಗರ ಗಮನವನ್ನು ಸೆಳೆದಿದೆ.
ಇನ್‌ಸ್ಟಾಗ್ರಾಂ ಬಳಕೆದಾರ ಮನೋಜ್ ಬಾಡ್ಕರ್ ಹಂಚಿಕೊಂಡಿರುವ ಈ ವಿಡಿಯೊವನ್ನು ಏಳು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರು ಚಾಲಕನನ್ನು ಹೊಗಳಿದ್ದಾರೆ. ಒಬ್ಬರು "ನೀವು ಕೆಲಸ ಮತ್ತು ಉತ್ಸಾಹ ಎರಡನ್ನೂ ಸಮತೋಲನಗೊಳಿಸುತ್ತಿದ್ದೀರಿ ಎಂದರೆ, ಇನ್ನೊಬ್ಬರು, “ಅವರ ಕೆಲಸ ಉತ್ಸಾಹದಿಂದ ಬದುಕುವುದು ಮತ್ತು ರಿಕ್ಷಾ ಓಡಿಸುವುದು. ಏಕೆಂದರೆ ಉತ್ಸಾಹಕ್ಕೆ ಬಿಲ್‍ಗಳನ್ನು ಪಾವತಿಸಬೇಕಿಲ್ಲ. ಅದು ಅವರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಹೆಂಡ್ತಿ ತವರಿಗೆ ಹೋಗಿದ್ದಾಳೆ ಎಂದು ಆಟೋದಲ್ಲಿ ಬಿಸ್ಕೆಟ್ ಹಂಚಿದ ಚಾಲಕ!
ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿ "ಹೆಂಡತಿ ತವರಿಗೆ ಹೋಗಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ" ಎಂದು ಚೀಟಿ ಬರೆದು ಅದನ್ನು ಆಟೋದ ಸೀಟಿಗೆ ಅಂಟಿಸಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಲದೆನ್ನುವಂತೆ ಹೆಂಡತಿ ತವರಿಗೆ ಹೋಗಿದ್ದಕ್ಕೆ ಖುಷಿಯಾಗಿ ಆತ ತನ್ನ ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬಿಸ್ಕೇಟ್ ಹಂಚಿದ್ದಾನಂತೆ.
ಆಟೋ ಚಾಲಕನ ಸೀಟಿನ ಹಿಂದೆ ಬರೆದ ಈ ಪೋಸ್ಟ್ ಅನ್ನು ಗಮನಿಸಿದ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಬಿಸ್ಕೇಟ್ ಪ್ಯಾಕ್ ವಿತರಣೆ ಮತ್ತು ಟಿಪ್ಪಣಿಯನ್ನು ಒಳಗೊಂಡಿರುವ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ 'ಸ್ಮೈಲ್' ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. "ಇಷ್ಟೊಂದು ಖುಷಿ?" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ವಾಹ್, ಅವನು ತನ್ನ ಸ್ವಾತಂತ್ರ್ಯವನ್ನು ಆನಂದಿಸುತ್ತಿದ್ದಾನೆ" ಎಂದು ಇನ್ನೊಬ್ಬರು ಹೇಳಿದ್ದಾರೆ.