Viral News: ವಂದೇ ಭಾರತ್ ರೈಲಿನ ಆಹಾರದ ಮೆನು ನೋಡಿ ಮಲಯಾಳಂ ಬರಹಗಾರ ಕೆಂಡಾಮಂಡಲ; ನೆಟ್ಟಿಗರು ಹೇಳಿದ್ದೇನು?
ಮಲಯಾಳಂ ಬರಹಗಾರ ಎನ್.ಎಸ್.ಮಾಧವನ್ ಇತ್ತೀಚೆಗೆ ಬೆಂಗಳೂರು-ಕೊಯಂಬತ್ತೂರು ಮಾರ್ಗದಲ್ಲಿನ ವಂದೇ ಭಾರತ್ ರೈಲುಗಳಲ್ಲಿನ ಆಹಾರ ಮೆನುವನ್ನು ಪೋಸ್ಟ್ ಮಾಡಿ ಪ್ರಾದೇಶಿಕ ಆಹಾರದ ಆಯ್ಕೆಗಳಿಲ್ಲ ಎಂದು ವಾದಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗಿದೆ.


ಬೆಂಗಳೂರು: ಮಲಯಾಳಂ ಬರಹಗಾರ ಎನ್.ಎಸ್.ಮಾಧವನ್ ಇತ್ತೀಚೆಗೆ ಬೆಂಗಳೂರು-ಕೊಯಂಬತ್ತೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳಲ್ಲಿನ ಆಹಾರ ಮೆನುವನ್ನು ಪ್ರಶ್ನಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಮೆನುವಿನಲ್ಲಿ ಪ್ರಾದೇಶಿಕ ಆಹಾರದ ಆಯ್ಕೆಗಳಿಲ್ಲ ಎನ್ನುವುದು ಅವರ ವಾದ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಹಿಂದಿ ಹೇರಿಕೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ ಮತ್ತೊಂದು ಚರ್ಚೆಯನ್ನು ಆರಂಭಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಉತ್ತರ ಭಾರತದ ಶೈಲಿಯ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ (Viral News) ಆಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನೀಡಲಾದ ತಿಂಡಿಗಳ ಮೆನುವನ್ನು ಮಾಧವನ್ ಹಂಚಿಕೊಂಡಿದ್ದಾರೆ. ಭಾಷಾ ಹೇರಿಕೆಯ ಬಗ್ಗೆ ಮಾತನಾಡುವವರು ಈ ಆಹಾರ ಹೇರಿಕೆಯ ಬಗ್ಗೆ ಮಾತನಾಡಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ತ್ವರಿತವಾಗಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ. ಹೇರಿಕೆ ಕೇವಲ ಭಾಷೆಗೆ ಸೀಮಿತವಾಗಿಲ್ಲ. ಆಹಾರ ಆಯ್ಕೆಗಳಿಗೂ ವಿಸ್ತರಿಸುತ್ತದೆ ಎಂದು ವಾದಿಸಿದ್ದಾರೆ.
They speak about language imposition. What about food imposition. Typical snacks served in South Indian Vande Bharat trains. This one from Bengaluru-Coimbatore VB. pic.twitter.com/z2ZuSo6q7T
— N.S. Madhavan (@NSMlive) April 15, 2025
ಒಬ್ಬರು "ಉತ್ತರದ 99% ರೆಸ್ಟೋರೆಂಟ್‍ಗಳು ಇಡ್ಲಿ-ದೋಸೆಯನ್ನು ಪ್ರಧಾನ ಆಹಾರವಾಗಿ ಪೂರೈಸುತ್ತವೆ. ಇದು ಆಹಾರ ಹೇರಿಕೆ ಸಾರ್" ಎಂದು ಕಾಮೆಂಟ್ ಮಾಡಿದ್ದಾರೆ. "ಹೌದು ಇದು ನಿಜವಾಗಿಯೂ ಕುತೂಹಲಕಾರಿ. ಕೇಂದ್ರ ಸರ್ಕಾರ ಅಥವಾ ರೈಲ್ವೆ ಎಂದಿಗೂ ಈ ಬಗ್ಗೆ ಗಮನ ಹರಿಸಿಲ್ಲ. ಈ ಅಡುಗೆ ಮಾಡುವವರಿಗೆ ಆಹಾರವನ್ನು ಹೇಗೆ ಬೇಯಿಸಬೇಕೆಂದು ತಿಳಿದಿಲ್ಲ. ಹಾಗಾಗಿ ನೀವು ಕೆಟ್ಟ ಆಹಾರದ ರುಚಿ ನೋಡದಿದ್ದರೆ, ಒಮ್ಮೆ ಈ ರೈಲ್ವೆಯಲ್ಲಿ ಹೋಗಿ ಅದನ್ನು ಅನುಭವಿಸಿ. ಇದರಿಂದ ಉತ್ತರದ ಜನರು ದಕ್ಷಿಣ ಭಾರತೀಯರನ್ನು ಹೇಗೆ ಉತ್ತಮರೆಂದುಕೊಳ್ಳುತ್ತಾರೆ? ಅವರು ಉತ್ತರ ಭಾರತವನ್ನು ಏಕೆ ತೊರೆಯುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಯುತ್ತದೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ.
"ನನಗೆ ಯಾವುದೇ ನಿರ್ದಿಷ್ಟ ಆಹಾರದ ಆದ್ಯತೆಗಳಿಲ್ಲದಿದ್ದರೂ, ನಿರ್ದಿಷ್ಟ ಪ್ರದೇಶಕ್ಕೆ ಸೇವೆ ಸಲ್ಲಿಸುವ ರೈಲುಗಳು ಆ ಪ್ರದೇಶದ ಆಹಾರ ಆದ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ನಾನು ಒಪ್ಪುತ್ತೇನೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಯಾವುದೇ ವಲಯದಲ್ಲಿನ ರೈಲು ಆ ಪ್ರದೇಶದ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ಯಾವುದೇ ಭಾಗದಿಂದ ಯಾರು ಬೇಕಾದರೂ ಪ್ರಯಾಣಿಸಬಹುದು. ಹಾಗಾಗಿ ರೈಲು ಎಲ್ಲರ ರುಚಿಯನ್ನು ಗಮನದಲ್ಲಿಟ್ಟುಕೊಂಡು ತೃಪ್ತಿಪಡಿಸುವ ಆಹಾರವನ್ನು ಒದಗಿಸಬೇಕು. ಯಾರಾದರೂ ಸ್ಥಳೀಯ ಆಹಾರವನ್ನು ಮಾತ್ರ ಹೊಂದಲು ಬಯಸಿದರೆ, ಅಂತವರು ಬಸ್‍ನಲ್ಲಿ ಪ್ರಯಾಣಿಸಲಿ” ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ಹೇರಿಕೆಯ ಬಗ್ಗೆ ಚರ್ಚೆ ಶುರುವಾದ ನಂತರ ಈ ವಿಚಾರ ಸುದ್ದಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಡಿಜಿಟಲ್ ಡಿಸ್ಪ್ಲೇ ಬೋರ್ಡ್‍ಗಳಿಂದ ಹಿಂದಿಯನ್ನು ತೆಗೆದುಹಾಕಲಾಗಿದೆ ಎಂದು ವ್ಯಕ್ತಿಯೊಬ್ಬರು ಪೋಸ್ಟ್‌ನಲ್ಲಿ ಹೇಳಿದ್ದಾರೆ. ನೆಟ್ಟಿಗರು ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅನ್ನು ಮಾತ್ರ ಬಳಸಿಕೊಂಡ ದ್ವಿಭಾಷಾ ನೀತಿಯ ಕಲ್ಪನೆಯನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮತ್ತೆ ಸುದ್ದಿಯಲ್ಲಿದೆ ಡೆಲ್ಲಿ ಮೆಟ್ರೋ! ಈ ಬಾರಿ ಆಗಿದ್ದೇನು ಗೊತ್ತಾ? ಶಾಕಿಂಗ್ ವಿಡಿಯೊ ಇಲ್ಲಿದೆ ನೋಡಿ
ಹಾಗೇ ಈ ವರ್ಷದ ಆರಂಭದಲ್ಲಿ, ಪ್ರಯಾಣಿಕರೊಬ್ಬರು ಆಘಾತಕಾರಿ ವಿಡಿಯೊವನ್ನು ಹಂಚಿಕೊಂಡಿದ್ದು, ಪ್ರಯಾಣಿಕರ ಗುಂಪುಗಳು ತಮಗೆ ಇಷ್ಟವಾಗದ ಆಹಾರ ಟ್ರೇಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸಿಬ್ಬಂದಿಯನ್ನು ಕೇಳುತ್ತಿರುವುದನ್ನು ಈ ವಿಡಿಯೊದಲ್ಲಿ ಸೆರೆಹಿಡಿಯಲಾಗಿತ್ತು. ಈ ವೈರಲ್ ವಿಡಿಯೊವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ರೈಲಿನೊಳಗೆ ನೀಡಲಾಗುವ ಆಹಾರದ ವಾಸನೆ ಇದೆ, ದಾಲ್ ಹಳಸಿದೆ ಎಂದು ಹೇಳಿದ್ದರು.