10 ಕೋಟಿ ರುಪಾಯಿಯ ರೋಲ್ಸ್ ರಾಯ್ಸ್ ಕಾರಿಗೆ 10 ರುಪಾಯಿಯ ನಿಂಬೆ-ಮೆಣಸಿನ ರಕ್ಷಣೆ: ಮಾಲಕ ಸಂಪ್ರದಾಯ ಮರೆತಿಲ್ಲ ಎಂದ ನೆಟ್ಟಿಗರು
Viral Video: ಅತಿ ದುಬಾರಿ ಎನಿಸಿಕೊಂಡಿರುವ ರೋಲ್ಸ್ ರಾಯ್ಸ್ ಕಾರ್‌ಗೆ ಯಾರ ಕಣ್ಣು ಬೀಳಬಾರದು ಎಂಬ ಕಾರಣಕ್ಕೆ ಅದರ ಮಾಲಕ ನಿಂಬೆಹಣ್ಣು-ಮೆಣಸಿನಕಾಯಿ ಕಟ್ಟಿರುವ ವಿಡಿಯೊವೊಂದು ವೈರಲ್ ಆಗಿದೆ. ರಸ್ತೆಗಳಲ್ಲಿ ರಾಜ ಗಾಂಭೀರ್ಯದಿಂದ ಸಾಗುವ ಈ ದುಬಾರಿ ಕಾರಿಗೂ 10 ರುಪಾಯಿಯ 'ನಿಂಬೆ-ಮೆಣಸು' ಎಷ್ಟು ಮುಖ್ಯ ಎನ್ನುವುದನ್ನು ಈ ವಿಡಿಯೊ ಸಾರಿ ಹೇಳಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ರೋಲ್ಸ್ ರಾಯ್ಸ್ ಕಾರಿಗೆ 10 ರುಪಾಯಿಯ ನಿಂಬೆ-ಮೆಣಸಿನ ರಕ್ಷಣೆ -
ಬೆಂಗಳೂರು, ಜ. 28: ನಾವು ಎಷ್ಟೇ ಶ್ರಿಮಂತರಾದರೂ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮರೆಯಬಾರದು ಎನ್ನುತ್ತಾರೆ. ಅದರಲ್ಲೂ ಭಾರತೀಯರು ಎಷ್ಟೇ ಕೋಟಿ ಸಂಪತ್ತು ಇದ್ದರೂ ತಮ್ಮ ಮೂಲ ನಂಬಿಕೆ ಮತ್ತು ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಅತೀ ದುಬಾರಿ ಕಾರು ಎನಿಸಿಕೊಂಡಿರುವ ರೋಲ್ಸ್ ರಾಯ್ಸ್ ಕಾರ್‌ಗೆ ಯಾರ ಕಣ್ಣು ಬೀಳಬಾರದು ಎಂಬ ಕಾರಣಕ್ಕೆ ಮಾಲಕ ನಿಂಬೆಹಣ್ಣು-ಮೆಣಸಿನಕಾಯಿ ಕಟ್ಟಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ರಸ್ತೆಗಳಲ್ಲಿ ರಾಜ ಗಾಂಭೀರ್ಯದಿಂದ ಸಾಗುವ ಈ ದುಬಾರಿ ಕಾರಿಗೂ 10 ರುಪಾಯಿಯ 'ನಿಂಬೆ-ಮೆಣಸು' ಎಷ್ಟು ಮುಖ್ಯ ಎನ್ನುವುದನ್ನು ಈ ದೃಶ್ಯ ಹೇಳುವಂತಿದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ದುಷ್ಟರ ಕೆಟ್ಟ ಕಣ್ಣಿನಿಂದ ರಕ್ಷಣೆ ಪಡೆಯಲು ಭಾರತದಲ್ಲಿ ನಿಂಬೆ ಮತ್ತು ಮೆಣಸಿನ ಕಾಯಿಗಳ ಸಂಯೋಜನೆಯನ್ನು ಬಳಸಲಾಗುತ್ತದೆ. ಇವೆರಡನ್ನು ಪೋಣಿಸಿ ತೂಗು ಹಾಕಲಾಗುತ್ತದೆ. ಹಿಂದಿನಿಂದಲೂ ಈ ನಂಬಿಕೆ ಚಾಲ್ತಿಯಲ್ಲಿದೆ. ಇದೀಗ ದುಬಾರಿ ರೋಲ್ಸ್ ರಾಯ್ಸ್ ಕಾರಿಗೆ ಯಾರ ದೃಷ್ಟಿ ತಗುಲಬಾರದು ಎಂಬ ಕಾರಣಕ್ಕೆ ನಿಂಬೆಹಣ್ಣು-ಮೆಣಸಿನ ಕಾಯಿ ಕಟ್ಟಿರುವ ವಿಡಿಯೊ ಈಗ ಭಾರಿ ಸುದ್ದಿಯಾಗುತ್ತಿದೆ. ಎಷ್ಟೇ ಐಷಾರಾಮಿ ಕಾರ್ ಆಗಿದ್ದರೂ ಈ ವಸ್ತುಗಳು ಎಷ್ಟು ಮುಖ್ಯ ಎನ್ನುವುದನ್ನು ಈ ವಿಡಿಯೊ ಹೇಳಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೊ ನೋಡಿ:
ಇತ್ತೀಚಿಗೆ ರೋಲ್ಸ್ ರಾಯ್ಸ್ ಕಾರು ಟ್ರೆಂಡಿಂಗ್‌ನಲ್ಲಿದೆ. ದುಬಾರಿ ಮೌಲ್ಯದ ಕಾರು ಇದಾಗಿದ್ದು ಇದರ ವಿಂಟೇಜ್ ನೋಟ ಮತ್ತು ಆಧುನಿಕ ಹೊರಭಾಗಗಳು ಹಾಗೂ ಹೈಟೆಕ್ ಒಳಾಂಗಣಗಳು ಉತ್ತಮ ಗುಣಮಟ್ಟ ಹೊಂದಿವೆ. ಇದೀಗ ಕರ್ನಾಟಕದ ನೋಂದಣಿ ಸಂಖ್ಯೆ (KA Registration) ಹೊಂದಿರುವ ಈ ಬಿಳಿ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ರಸ್ತೆಯಲ್ಲಿ ಹೋಗುವಾಗ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಸಣ್ಣ ವಾಹನಗಳಲ್ಲಿ ಕಾಣಸಿಗುವ 'ನಿಂಬೆಹಣ್ಣು-ಮೆಣಸಿನಕಾಯಿ' ಕಟ್ಟಿರುವ ದೃಶ್ಯ ಈ ಬಾರಿ 10 ಕೋಟಿ ರುಪಾಯಿಯ ಕಾರಿನ ಮುಂಭಾಗದಲ್ಲಿಯೂ ಕಂಡುಬಂದಿದೆ.
ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ವೈರಲ್
ರೋಲ್ಸ್ ರಾಯ್ಸ್‌ಗೆ ಜೋಡಿಸಲಾದ ನಿಂಬೆ-ಮೆಣಸಿನಕಾಯಿಗಳ ಕಾಂಬೊದ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಸಂಪ್ರದಾಯ ಮರೆಯದಿದ್ದಕ್ಕಾಗಿ ವಾಹನದ ಮಾಲಕನನ್ನು ಹಲವರು ಮೆಚ್ಚಿದ್ದಾರೆ. ಬಳಕೆದಾರರೊಬ್ಬರು “10 ಕೋಟಿ ರುಪಾಯಿ ಕಾರು, 10 ರುಪಾಯಿಯ ರಕ್ಷಣೆ" ಎಂದಿದ್ದಾರೆ. ಮತ್ತೊಬ್ಬರು ಎಷ್ಟೇ ಮಾಡರ್ನ್ ಆದರೂ ನಮ್ಮ ಸಂಪ್ರದಾಯ ಮರೆಯಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.