"ಗೃಹಿಣಿಯರ ಶ್ರಮಕ್ಕೆ ಬೆಲೆ ಕಟ್ಟಲಾಗದು": ಮನೆ ಕೆಲಸ ವಹಿಸಿಕೊಂಡ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸರ್ಕಾರಿ ಅಧಿಕಾರಿ
Viral News: ಇಲ್ಲೊಬ್ಬ ಸರ್ಕಾರಿ ಉದ್ಯೋಗಿ ತನ್ನ ಮನೆಯನ್ನು ಮುನ್ನಡೆಸುವ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸುದ್ದಿಯೊಂದು ಭಾರಿ ವೈರಲ್ ಆಗಿದೆ. ಇವರು ತನ್ನ ಗೃಹಿಣಿ ಪತ್ನಿಗೆ ಏನಾದರೂ ಅಗತ್ಯವಿದ್ದಾಗ ಮಾತ್ರ ಹಣವನ್ನು ನೀಡುವ ಬದಲು, ಮನೆಯಲ್ಲಿ ಮಾಡುವ ಕೆಲಸಕ್ಕೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೀಡುತ್ತಾರೆ.
ಮೆಟಾ ಎಐ ರಚಿತ ಚಿತ್ರ -
ನವದೆಹಲಿ, ಸೆ. 3: ಮನೆಯನ್ನು ನಿಭಾಯಿಸುವ ಗೃಹಿಣಿಯರ ಶ್ರಮಕ್ಕೆ ಯಾವತ್ತೂ ಬೆಲೆ ಕಟ್ಟಲಾಗದು. ಅಡುಗೆ, ಸ್ವಚ್ಛತೆ ಎಂದು ಮನೆಯ ಜವಾಬ್ದಾರಿಯನ್ನು ನಿಭಾಯಿಸುವಲ್ಲೇ ಸಮಯ ಕಳಯುವ ಅನೇಕ ಮಹಿಳೆಯರು ಇದ್ದಾರೆ. ಇಲ್ಲೊಬ್ಬ ಸರ್ಕಾರಿ ಉದ್ಯೋಗಿ ತನ್ನ ಮನೆಯನ್ನು ಮುನ್ನಡೆಸುವ ಪತ್ನಿಗೆ ಪ್ರತಿ ತಿಂಗಳು ವೇತನ ನೀಡುವ ಸುದ್ದಿಯೊಂದು ಭಾರಿ ವೈರಲ್ (Viral News) ಆಗಿದೆ. ಇವರು ತನ್ನ ಗೃಹಿಣಿ ಪತ್ನಿಗೆ ಅಗತ್ಯವಿದ್ದಾಗ ಮಾತ್ರ ಹಣವನ್ನು ನೀಡುವ ಬದಲು, ಮನೆಯಲ್ಲಿ ಮಾಡುವ ಕೆಲಸಕ್ಕೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೀಡುತ್ತಾರೆ.
ಈ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದೆ. ಉದ್ಯೋಗಿಯೊಬ್ಬರು ಗೃಹಿಣಿ ಪತ್ನಿಗೆ ಮನೆಯ ಕೆಲಸಕ್ಕಾಗಿ ಮಾಸಿಕ ಮೊತ್ತವನ್ನು ನೀಡುತ್ತಾರೆ. ವರದಿಯ ಪ್ರಕಾರ, ಇವರು ಮನೆಯ ಎಲ್ಲ ದೈನಂದಿನ ವೆಚ್ಚ ದಿನಸಿ, ಸಾಮಗ್ರಿಗಳ ಬಿಲ್ ಹಾಗೂ ಇತರ ವೆಚ್ಚಗಳನ್ನು ತಾವೇ ಪಾವತಿಸುತ್ತಾರೆ. ಇದನ್ನು ಹೊರತು ಪಡಿಸಿ ಇಡೀ ಮನೆಯನ್ನು ನಿರ್ವಹಿಸುವ ಪತ್ನಿಯ ಶ್ರಮಕ್ಕೆ ಪ್ರತ್ಯೇಕವಾಗಿ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ನೀಡುತ್ತಾರೆ.
ಪತ್ನಿಗೆ ವೇತನ ನೀಡುವ ಪತ್ನಿ:
My brother pays his housewife wife a monthly "salary" for household work. What do you think about this?
by u/bait_rage in TwentiesIndia
ಅವರ ಪತ್ನಿ ಅಡುಗೆ, ಮನೆ ಕ್ಲೀನಿಂಗ್ ಮತ್ತು ಇತರ ದೈನಂದಿನ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಅವರು ಪತ್ನಿಗೆ ನೀಡುವ ಮಾಸಿಕ ಮೊತ್ತವು ಅವರಿಗೆ ಮಾತ್ರ ಮೀಸಲಾಗಿರುತ್ತದೆ. ಅವರು ಅದನ್ನು ಹೇಗೆ ಬೇಕಾದರೂ ಬಳಸಬಹುದು. ಇದೇ ಕೆಲಸಕ್ಕೆ ಹೊರಗಿನಿಂದ ಅಡುಗೆಯವರನ್ನು ಕರೆಸಿದಾಗ ಅವರು ನಿಗದಿಪಡಿಸಿದ ಹಣ ನೀಡಬೇಕಾಗುತ್ತದೆ. ಪತ್ನಿ ಕೆಲಸ ಮಾಡಿದ ತಕ್ಷಣ ಆ ಶ್ರಮಕ್ಕೂ ಬೆಲೆ ಇಲ್ಲವೇ? ಎಂಬುದು ಪತಿಯ ನಿಲುವು.
ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ
ʼʼಗೃಹಿಣಿಯೊಬ್ಬರಿಗೆ ನಿಗದಿತ ಮಾಸಿಕ ಮೊತ್ತವನ್ನು ನೀಡುವುದರಿಂದ ಅವರು ಆರ್ಥಿಕವಾಗಿ ಸ್ವತಂತ್ರಗುತ್ರಾತಾರೆ ಮತ್ತು ಅವರ ಕೆಲಸವನ್ನು ಮೌಲ್ಯಯುತವಾಗಿ ಮಾಡಲು ಪ್ರೇರೇಪಿಸುತ್ತದೆ. ಪತ್ನಿ ಪತಿಯ ಬಳಿ ಹಣ ಕೇಳಿದಾಗಲೆಲ್ಲ ಪುರುಷನಿಗೆ ಅಹಂಕಾರ ಹೆಚ್ಚುತ್ತೆ. ಸಂಬಳ ನೀಡಿದರೆ ಪತ್ನಿಗೆ ಹೌದು, ಇದು ನನ್ನ ಹಣ, ನಾನು ಇದನ್ನೆಲ್ಲಾ ಸಂಪಾದಿಸಿದ್ದೇನೆ ಎಂಬ ವಿಶ್ವಾಸವನ್ನು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ
ಸಾಮಾನ್ಯವಾಗಿ ಭಾರತೀಯ ದಂಪತಿಯಲ್ಲಿ ಪತ್ನಿ ಕೇಳಿದಾಗ ಪತಿ ಹಣ ನೀಡುತ್ತಾನೆ. ಆದರೆ ಈ ರೀತಿಯ ವ್ಯವಸ್ಥೆ ಇರುವುದು ಕಡಿಮೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ಬಗ್ಗೆನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ಗೃಹಿಣಿಯರ ಕೆಲಸಕ್ಕೂ ಆರ್ಥಿಕ ಮೌಲ್ಯ ಸಿಗುವುದು ಖುಷಿಯ ವಿಷಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.