Viral Video: ಹತ್ತೇ ದಿನಗಳಲ್ಲಿ 21 ಲಕ್ಷ ಸಂಬಳದ ಕೆಲಸಕ್ಕೆ ರಾಜೀನಾಮೆ ಕೊಟ್ಟ ಭೂಪ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಪದವೀಧರರೊಬ್ಬನು ಕೆಲಸಕ್ಕೆ ಸೇರಿದ ಕೇವಲ 10 ದಿನಗಳಲ್ಲಿ 21ಲಕ್ಷ ರೂ. ಸಂಬಳದ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಈ ವಿಚಾರವನ್ನು ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್(Viral Video) ಆಗಿದೆ.


ನವದೆಹಲಿ: ಪದವಿ ಮುಗಿಸಿದರೆ ಸಾಕು ಕೆಲಸ ಹುಡುಕುವುದೇ ಯುವಕರಿಗೊಂದು ತಲೆನೋವಾಗಿರುತ್ತದೆ. ಇನ್ನು ಕೆಲವರಿಗೆ ಎಷ್ಟೇ ಹುಡುಕಿದರೂ ಕೆಲಸವೇ ಸಿಗುವುದಿಲ್ಲ, ಇನ್ನೂ ಕೆಲವರಿಗೆ ಕೆಲಸ ಸಿಕ್ಕರೂ ಸರಿಯಾದ ಸ್ಥಾನ ಹಾಗೂ ಸಂಬಳ ಸಿಗುವುದಿಲ್ಲ. ಹೀಗಿರುವಾಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಪದವೀಧರರೊಬ್ಬನು ಕೆಲಸಕ್ಕೆ ಸೇರಿದ ಕೇವಲ ಹತ್ತು ದಿನಗಳಲ್ಲಿ 21ಲಕ್ಷ ರೂಪಾಯಿ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಈ ವಿಚಾರವನ್ನು ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಆತ ತನ್ನ ಪೋಸ್ಟ್‌ನಲ್ಲಿ ಹೊಸದಾಗಿ ನೇಮಕಗೊಂಡ ಮ್ಯಾನೇಜ್‌ಮೆಂಟ್ ಟ್ರೈನಿಗೆ ತರಬೇತಿ ಪಡೆಯಲು ಹೋದಾಗ ಇನ್‍ಸೈಡ್ ಸೇಲ್ಸ್ ರೆಪ್ರೆಸೆಂಟೆಟಿವ್ ಆಗಿ ಕೆಲಸ ಮಾಡಬೇಕಾದ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ವರ್ಷಕ್ಕೆ 21 ಲಕ್ಷ ರೂ.ಗಿಂತ ಹೆಚ್ಚಿನ ವೇತನ ಪ್ಯಾಕೇಜ್, 2 ಲಕ್ಷ ರೂ.ಗಳ ಬೋನಸ್ ಇಷ್ಟೆಲ್ಲಾ ಇದ್ದರೂ ಕೆಲಸಕ್ಕೆ ಸೇರಿ ಹತ್ತು ದಿನಗಳ ನಂತರ, ಆತ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನಂತೆ.
ಇದಕ್ಕೆ ನೆಟ್ಟಿಗರು ಏಕೆ? ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಆತ, “ಅವರು ನನ್ನನ್ನು ಮಾರ್ಕೆಟಿಂಗ್‍ಗಾಗಿ ನೇಮಿಸಿಕೊಂಡರು ಎಂದು ನಾನು ಭಾವಿಸಿದ್ದೆ. ಆದರೆ ಅವರು ನನ್ನನ್ನು ಒಂದು ವರ್ಷದವರೆಗೆ ಸೇಲ್ಸ್ ರೆಪ್ರೆಸೆಂಟೆಟಿವ್ ಆಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ನನಗೆ ಆ ಕೆಲಸವನ್ನು ಮಾಡಲು ಇಷ್ಟವಿಲ್ಲ. ಹಾಗಾಗಿ ನಾನು ಕೆಲಸಕ್ಕೆ ರಾಜೀನಾಮೆ ನೀಡಿದೆ” ಎಂದು ತಿಳಿಸಿದ್ದಾನೆ. ಹಾಗೇ “ಬಿ-ಸ್ಕೂಲ್ ಪದವೀಧರರಲ್ಲಿ ಇಂತಹ ರಾಜೀನಾಮೆಗಳು ಸಾಮಾನ್ಯವಾಗಿದೆ ಎಂದು ತಮ್ಮ ತಂಡದ ಮುಖ್ಯಸ್ಥರು ಹೇಳಿದರು. ಅವರಲ್ಲಿ ಅನೇಕರು ತಮ್ಮ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳನ್ನು ಮೂರು ತಿಂಗಳೊಳಗೆ ಬಿಡುತ್ತಾರೆ” ಎಂದು ಆತ ಹೇಳಿದ್ದಾನೆ.
ಈತನ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು, "ಹೊಸದಾಗಿ ನೇಮಕಗೊಂಡ ಈ ಐಐಎಂ ಪದವೀಧರರು ಮಾರ್ಕೆಟಿಂಗ್‍ಗೆ ಹೋಗುವ ಮೊದಲು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸೇಲ್ಸ್‌ನಲ್ಲಿ ತರಬೇತಿ ಪಡೆದಿದ್ದರೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಮೃಗಾಲಯದ ಕೀಪರ್ ಆಗಲು ಲಕ್ಷಾಂತರ ರೂ. ಸಂಬಳ ಬರುವ ಕೆಲಸ ಬಿಟ್ಟ ಮಹಿಳೆ!
ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಚೀನಾದ ಮಹಿಳೆ ಮಾ ಯಾ ಶಾಂಘೈ ಮೃಗಾಲಯದಲ್ಲಿ ಕೆಲಸ ಮಾಡಲು ಬಯೋಫಾರ್ಮಾಸ್ಯುಟಿಕಲ್ ವ್ಯವಹಾರದಲ್ಲಿನ ಲಾಭದಾಯಕ ಹುದ್ದೆಯನ್ನು ತೊರೆದಿದ್ದಾಳೆ. ಈಕೆಗೆ ಮೊದಲಿನ ಕಂಪನಿಯಲ್ಲಿ ಸರಾಸರಿ ತಿಂಗಳ ಸಂಬಳವು ಸುಮಾರು 10,000 ಯುವಾನ್ (ಯುಎಸ್ $ 1,400 ಅಂದರೆ 1,22,452 ರೂ.) ಸಿಗುತ್ತಿದ್ದರೆ ಈಗ ಆಕೆಗೆ ಮೃಗಾಲಯದಲ್ಲಿ ಕೆಲಸ ಮಾಡಲು ಅದರ ಅರ್ಧದಷ್ಟು ಸಂಬಳ ಸಿಗಲಿದೆ ಬರುತ್ತದೆ.