ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ಮೃಗಾಲಯದ ಕೀಪರ್ ಆಗಲು ಲಕ್ಷಾಂತರ ರೂ. ಸಂಬಳ ಬರುವ ಕೆಲಸ ಬಿಟ್ಟ ಮಹಿಳೆ!

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಚೀನಾದ ಮಹಿಳೆ ಮಾ ಯಾ ಶಾಂಘೈ ಮೃಗಾಲಯದಲ್ಲಿ ಕೆಲಸ ಮಾಡಲು ಬಯೋಫಾರ್ಮಾಸ್ಯುಟಿಕಲ್ ವ್ಯವಹಾರದಲ್ಲಿನ ಲಾಭದಾಯಕ ಹುದ್ದೆಯನ್ನು ತೊರೆದಿದ್ದಾಳೆ. ಈಕೆಗೆ ಮೊದಲಿನ ಕಂಪನಿಯಲ್ಲಿ ಸರಾಸರಿ ತಿಂಗಳ ಸಂಬಳವು ಸುಮಾರು 10,000 ಯುವಾನ್ (ಯುಎಸ್ $ 1,400 ಅಂದರೆ 1,22,452 ರೂ.) ಸಿಗುತ್ತಿದ್ದರೆ ಈಗ ಆಕೆಗೆ ಮೃಗಾಲಯದಲ್ಲಿ ಕೆಲಸ ಮಾಡಲು ಅದರ ಅರ್ಧದಷ್ಟು ಸಂಬಳ ಸಿಗಲಿದೆ ಬರುತ್ತದೆ.

ಮೃಗಾಲಯದಲ್ಲಿ ಕೆಲಸ ಮಾಡಲು ಈ ಮಹಿಳೆ ಮಾಡಿದ್ದೇನು?

Profile pavithra Mar 1, 2025 1:57 PM

ಬೀಜಿಂಗ್‌: ಸಾಮಾನ್ಯವಾಗಿ ಎಲ್ಲರೂ ಹೆಚ್ಚಿನ ಸಂಬಳ ಸಿಗುವಂತಹ ಕೆಲಸಕ್ಕಾಗಿ ಹುಡುಕಾಡುತ್ತಾರೆ. ಒಂದು ವೇಳೆ ಹೆಚ್ಚು ಸಂಬಳ ಸಿಗುವಂತಹ ಕೆಲಸ ಸಿಕ್ಕರೆ ಆಗ ಕಡಿಮೆ ಸಂಬಳದ ಕೆಲಸವನ್ನು ಬಿಡುತ್ತಾರೆ. ಆದರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಚೀನಾದ ಮಹಿಳೆಯೊಬ್ಬರು ಶಾಂಘೈ ಮೃಗಾಲಯದಲ್ಲಿ ಕೆಲಸ ಮಾಡಲು ಬಯೋಫಾರ್ಮಾಸ್ಯುಟಿಕಲ್ ವ್ಯವಹಾರದಲ್ಲಿನ ಲಾಭದಾಯಕ ಹುದ್ದೆಯನ್ನು ತೊರೆದಿದ್ದಾಳೆ. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.

ಜಿಯಾಂಗ್ಸು ಪ್ರಾಂತ್ಯದ 25 ವರ್ಷದ ಮಹಿಳೆ ಮಾ ಯಾ ಪ್ರಕಾರ ಆಕೆಗೆ ಸಿಕ್ಕ ಈ ಹೊಸ ಉದ್ಯೋಗದಿಂದ ಜೀವನದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುವಂತೆ ಮಾಡುತ್ತದೆ ಎಂದಿದ್ದಾಳೆ. ಜತೆಗೆ ಅನುಭವದ ದೃಷ್ಟಿಯಿಂದ ಪ್ರತಿಫಲದಾಯಕ ಎಂದು ಹೇಳಿದ್ದಾಳೆ. ವರದಿಗಳ ಪ್ರಕಾರ, ಈಕೆಗೆ ಮೊದಲಿನ ಕಂಪನಿಯಲ್ಲಿ ಸರಾಸರಿ ತಿಂಗಳ ಸಂಬಳವು ಸುಮಾರು 10,000 ಯುವಾನ್ (ಯುಎಸ್ $ 1,400 ಅಂದರೆ 1,22,452 ರೂ.) ಸಿಗುತ್ತಿತ್ತು. ಆದರೆ ಆಕೆಗೆ ಮೃಗಾಲಯದಲ್ಲಿ ಕೆಲಸ ಮಾಡಲು ಅದರ ಅರ್ಧದಷ್ಟು ಸಂಬಳ ಸಿಗಲಿದೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ಮಹಿಳೆ, ಕಡಿಮೆ ಸಂಬಳ ಪಡೆಯವ ಬಗ್ಗೆ ತನಗೆ ಯಾವುದೇ ಬೇಸರವಿಲ್ಲ ಎಂಬುದಾಗಿ ತಿಳಿಸಿದ್ದಾಳೆ. ಮೃಗಾಲಯದಲ್ಲಿ ಕೆಲಸ ಮಾಡುವುದರಿಂದ ಪ್ರಾಣಿಗಳನ್ನು ಹತ್ತಿರದಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಇದು ಪ್ರಾಣಿಗಳ ಆಹಾರ ಮತ್ತು ರೋಗ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಹಾಗೇ ಪ್ರಾಣಿಗಳ ನಡವಳಿಕೆಯ ಮೂಲಕ ಅವುಗಳ ಸಂವಹನದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವಳು ತಿಳಿಸಿದ್ದಾಳೆ. ಮೃಗಾಲಯದಲ್ಲಿ ತಾನು ಸಕ್ರಿಯವಾಗಿ ಕೆಲಸ ಮಾಡುವುದರಿಂದ ಇನ್ನು ತನಗೆ ಆರೋಗ್ಯಕರ ಜೀವನ ಸಿಗಲಿದೆ ಎಂದು ಹೇಳಿದ್ದಾಳೆ.

ಹಾಗಾಗಿ ಈ ಮಹಿಳೆ ಕಳೆದ ವರ್ಷ ಫೆಬ್ರವರಿಯಿಂದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆನೆಗಳು, ಹಿಪ್ಪೋಗಳು, ಕೋತಿಗಳು, ಹುಲಿಗಳು ಮತ್ತು ಕೆಂಪು ಪಾಂಡಾಗಳಂತಹ ವಿವಿಧ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದಾಳೆ. ಅವಳು ಪ್ರಸ್ತುತ ಜಿಂಕೆ ಮತ್ತು ಆಡುಗಳನ್ನು ಸಾಕುತ್ತಾಳೆ ಎನ್ನಲಾಗಿದೆ. ಪ್ರಾಣಿಗಳ ವಿಚಿತ್ರ ನಡವಳಿಕೆಗಳು ಅವಳನ್ನು ಯಾವಾಗಲೂ ಆಶ್ಚರ್ಯಗೊಳಿಸುತ್ತಲೇ ಇರುತ್ತದೆ ಎಂದು ಆಕೆ ತಿಳಿಸಿದ್ದಾಳೆ.

ಮೃಗಾಲಯದಲ್ಲಿ ಕೆಲಸ ಮಾಡುವುದರ ಬಗ್ಗೆ ಹಂಚಿಕೊಂಡ ಮಾ ಯಾ, "ಪ್ರಾಣಿಗಳಿಗೆ ಆಹಾರವನ್ನು ನೀಡುವುದರ ಹೊರತಾಗಿ, ಪ್ರಾಣಿಗಳ ಪೋಷಣೆ ಮತ್ತು ಕಾಯಿಲೆಗಳ ಚಿಕಿತ್ಸೆಯ ಬಗ್ಗೆ ಸಮಗ್ರ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ನನಗೆ ಅವಕಾಶವಿದೆ. ನನ್ನ ಅಧ್ಯಯನದ ಸಮಯದಲ್ಲಿ ಇದು ನನ್ನ ಜ್ಞಾನವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಮೃಗಾಲಯದಲ್ಲಿನ ಪ್ರಾಣಿಗಳ ಜತೆ ಇರುವುದರಿಂದ ಅವುಗಳ ಸ್ವಭಾವದ ಬಗ್ಗೆ ನನಗೆ ತಿಳಿಯುತ್ತದೆʼʼ ಎಂದು ಆಕೆ ಹೇಳಿದ್ದಾಳೆ. ಮಾ ಅವಳ ಪೋಷಕರು ಕೂಡ ಅವಳ ವೃತ್ತಿಪರ ಆಯ್ಕೆಗೆ ಬೆಂಬಲ ಸೂಚಿಸಿದ್ದಾರಂತೆ.

ಮಾ ಯಾ ಲಂಡನ್‍ನ ಇಂಪೀರಿಯಲ್ ಕಾಲೇಜಿನಿಂದ ಜೈವಿಕ ವಿಜ್ಞಾನದಲ್ಲಿ ಪದವಿ ಮತ್ತು ಕೇಂಬ್ರಿಡ್ಜ್‌ನಿಂದ ಪಶುವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ.

ಈ ಸುದ್ದಿಯನ್ನೂ ಓದಿ:Viral Video: ಕತ್ತೆಗೇನ್‌ ಗೊತ್ತು ಜಿಬ್ರಾ ಗತ್ತು? ಚೀನಾದ ಝೂನ ಈ ವಿಡಿಯೊ ಭಾರೀ ವೈರಲ್‌

ಇತ್ತೀಚೆಗೆಷ್ಟೇ ನಾಯಿಗಳಿಗೆ ಪಾಂಡಗಳಂತೆ ಬಣ್ಣ ಬಳಿದು ಚೀನಾದ ಮೃಗಾಲಯ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಇದೀಗ ಅಧಿಕಾರಿಗಳು ಮತ್ತದೇ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಈಗ ಕತ್ತೆಗೆ ಜಿಬ್ರಾದಂತೆ ಬಣ್ಣ ಬಳಿದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಜೀಬ್ರಾಗಳನ್ನು ನೋಡಲು ಮೃಗಾಲಯಕ್ಕೆ ಭೇಟಿ ನೀಡಿದ ಜನರು ಮಾರುವೇಷದಲ್ಲಿದ್ದ ಕತ್ತೆಯನ್ನು ನೋಡಿ ಖುಷಿಪಟ್ಟಿದ್ದಾರೆ. ವರದಿ ಪ್ರಕಾರ, ಶಾಂಡೊಂಗ್ ಪ್ರಾಂತ್ಯದ ಜಿಬೊ ಸಿಟಿ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಕತ್ತೆಗೆ ಜೀಬ್ರಾದಂತೆ ಬಣ್ಣ ಬಳಿಯಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಮೃಗಾಲಯದ ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.