ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 6 ವರ್ಷ ಕೆಲಸವೇ ಮಾಡದೆ ಸಂಬಳ ತೆಗೆದುಕೊಂಡ ಕಿಲಾಡಿ! ಸತ್ಯ ಬಯಲಾಗಿದ್ದು ಹೇಗೆ?

Viral News: ಸ್ಪ್ಯಾನಿಷ್ ಮೂಲದ ಜೊವಾಕ್ವಿನ್ ಗಾರ್ಸಿಯಾ ಎಂಬಾತ ಕೆಲಸಕ್ಕೆ ದೀರ್ಘಕಾಲ ರಜೆ ಹಾಕಿದ್ದರೂ ಪ್ರತಿ ತಿಂಗಳು ಸಂಬಳ ಮಾತ್ರ ಮಿಸ್‌ ಮಾಡದೇ ಎಣಿಸಿಕೊಳ್ಳುತ್ತಿದ್ದ. ಈ ವಿಚಾರ ಆತನಿಗೆ ಕಂಪನಿಯ ವತಿಯಿಂದ ಪ್ರಶಸ್ತಿ ನೀಡುವಾಗ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಕೆಲಸ ಮಾಡದಿದ್ರೂ ಲಕ್ಷ ಲಕ್ಷ ಸಂಬಳ ಎಣಿಸುತ್ತಿದ್ದ ಕಿಲಾಡಿ!

ಸಾಂದರ್ಭಿಕ ಚಿತ್ರ.

Profile pavithra Mar 18, 2025 6:42 PM

ಮ್ಯಾಡ್ರಿಡ್: ಜೀವನ ನಡೆಸಲು ಪ್ರತಿಯೊಬ್ಬರು ಕೆಲಸ ಮಾಡಿ ಹಣ ಸಂಪಾದಿಸಲೇಬೇಕು. ಯಾರಿಗೂ ಹಣ ಉಚಿತವಾಗಿ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಕೆಲಸಕ್ಕೆ ದೀರ್ಘಕಾಲ ಗೈರಾಗಿದ್ದಾನೆ. ಅದರ ಜತೆಗೆ ರಜಾದಿನದ ಪೂರ್ತಿ ಸಂಬಳ ಕೂಡ ಅವನಿಗೆ ಸಿಕ್ಕಿದೆ! ಹೌದು, ಸ್ಪ್ಯಾನಿಷ್ ಮೂಲದ ಜೊವಾಕ್ವಿನ್ ಗಾರ್ಸಿಯಾ ಆರು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡದಿದ್ದರೂ ಪ್ರತಿ ತಿಂಗಳು ತನ್ನ ಸಂಬಳದ ಚೆಕ್ ಸ್ವೀಕರಿಸಿದ್ದಾನೆ. ಈ ವಿಚಾರ ಸುದೀರ್ಘ ಸೇವೆಗಾಗಿ ಆತನಿಗೆ ಪ್ರಶಸ್ತಿ ನೀಡುವ ವೇಳೆ ಬೆಳಕಿಗೆ ಬಂದಿದೆ. ಇದು ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ಜೊವಾಕ್ವಿನ್ ಗಾರ್ಸಿಯಾ ಸ್ಪೇನ್‍ನ ಕ್ಯಾಡಿಜ್‍ನಲ್ಲಿರುವ ಪುರಸಭೆಯ ವಾಟರ್‌ ಕಂಪನಿಯ ಫ್ಲ್ಯಾಟ್‌ ಸೂಪರ್‌ ವೈಸರ್‌ ಆಗಿ ಕೆಲಸ ಮಾಡಿದ್ದಾನೆ. ಹಾಗಾಗಿ 2010ರಲ್ಲಿ ನಿಗಮವು ಉದ್ಯೋಗಿ ಸಂಸ್ಥೆಯೊಂದಿಗೆ ಸುದೀರ್ಘ ಕಾಲ ಕೆಲಸ ಮಾಡಿದ್ದಕ್ಕಾಗಿ ಆತನನ್ನು ಗೌರವಿಸಲು ಬಯಸಿತು. ಆದರೆ ಈತ ಕೆಲಸಕ್ಕೆ ಗೈರು ಹಾಜರಾಗಿ ಪ್ರತಿ ತಿಂಗಳು ಸಂಬಳ ಎಣಿಸಿಕೊಂಡ ವಿಷಯ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ವಾಟರ್ ಕಂಪನಿಯ ವ್ಯವಸ್ಥಾಪಕರ ನಿರ್ಲಕ್ಷ್ಯದಿಂದ ಅತನಿಗೆ ಸುದೀರ್ಘ ಕಾಲ ಕೆಲಸದಿಂದ ತಪ್ಪಿಸಿಕೊಳ್ಳಲು ಮತ್ತು ಕೆಲಸರಹಿತ ವೇತನವನ್ನು ಪಡೆಯಲು ಸಾಧ್ಯವಾಯಿತು. ಜೊವಾಕ್ವಿನ್ ಗೈರಾಗಿದ್ದರು ಕೂಡ ತನ್ನ ಕೆಲಸದ ಸಂಬಳವಾಗಿ 41,500 ಡಾಲರ್ (36 ಲಕ್ಷ ರೂ.) ವಾರ್ಷಿಕ ವೇತನವನ್ನು ಪಡೆದಿದ್ದಾನೆೆ. ಕ್ಯಾಡಿಜ್ ನಗರದ ಉಪ ಮೇಯರ್ ಆಗಿದ್ದ ಜಾರ್ಜ್ ಬ್ಲಾಸ್ ಫರ್ನಾಂಡಿಸ್ ಈ ಉದ್ಯೋಗಿಯನ್ನು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಮೆಟ್ಟಿಲೇರಿದೆ. ಗಾರ್ಸಿಯಾ ಪರವಾಗಿ ಮಾತನಾಡಿದ ಆತನ ವಕೀಲರು, ಕೆಲಸ ಮಾಡುವಾಗ ಬೆದರಿಕೆಯೊಡ್ಡಿದ್ದೆ ಆತನ ಅನುಪಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಸ್ಥಳದಲ್ಲಿ ಮಾಡಲು ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಅಂತಿಮವಾಗಿ, ನ್ಯಾಯಾಲಯವು ಸರ್ಕಾರದ ಪರವಾಗಿ ತೀರ್ಪು ನೀಡಿದೆ ಮತ್ತು ಆರು ವರ್ಷಗಳ ಕಾಲ ಕೆಲಸಕ್ಕೆ ಗೈರುಹಾಜರಾಗಿದ್ದಕ್ಕಾಗಿ ದಂಡ ವಿಧಿಸಿದೆ. ಜೊವಾಕ್ವಿನ್ ಗೆ 30,000 ಡಾಲರ್ (ಸುಮಾರು 25 ಲಕ್ಷ ರೂ.) ದಂಡ ವಿಧಿಸಲಾಗಿದೆ. ಇದು ಅವನ ವಾರ್ಷಿಕ ಸಂಬಳದ ಒಂದು ವರ್ಷದ ತೆರಿಗೆಯ ನಂತರದ ದಂಡಕ್ಕೆ ಸಮನಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Post: ನನ್ನನ್ನು ಫ್ರೀಯಾಗಿ ಕೆಲಸಕ್ಕೆ ತೆಗೆದುಕೊಳ್ಳಿ! ವೈರಲ್ ಆಯ್ತು ಬೆಂಗಳೂರು ಯುವಕನ ಪೋಸ್ಟ್!

21 ಲಕ್ಷ ರೂ. ಸಂಬಳಕ್ಕೆ ಗುಡ್‌ಬೈ ಹೇಳಿದ ಯುವಕ

ಇತ್ತೀಚೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಪದವೀಧರರೊಬ್ಬನು ಕೆಲಸಕ್ಕೆ ಸೇರಿದ ಕೇವಲ 10 ದಿನಗಳಲ್ಲಿ 21 ಲಕ್ಷ ರೂ. ಸಂಬಳದ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನಂತೆ. ಕಂಪನಿಯವರು ಒಂದು ವರ್ಷದವರೆಗೆ ಸೇಲ್ಸ್‌ ರೆಪ್ರೆಸೆಂಟೆಟಿವ್‍ ಆಗಿ ಕೆಲಸ ಮಾಡುವಂತೆ ಹೇಳಿದ್ದಕ್ಕೆ ಆತ ಆ ಕೆಲಸವನ್ನು ಮಾಡಲು ಇಷ್ಟವಿಲ್ಲವೆಂದು ರಾಜೀನಾಮೆ ನೀಡಿದ್ದಾನಂತೆ.