ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೋರ್ಕ್, ಸ್ಪೂನ್ ಬಳಸಿ ದೋಸೆ ತಿನ್ನಲು ಹೇಳಿಕೊಟ್ಟ ಶಿಕ್ಷಕ: ಫೈವ್ ಸ್ಟಾರ್ ಹೋಟೆಲ್‌ನಲ್ಲೂ ಕೈಯಲ್ಲಿ ತಿಂದ್ರೆನೆ ರುಚಿ ಎಂದ ನೆಟ್ಟಿಗರು!

Viral News: ಶಿಕ್ಷಕನೊಬ್ಬ ಫೋರ್ಕ್ ಸ್ಪೂನ್ ಬಳಸಿ ದೋಸೆ ತಿನ್ನುವುದು ಹೇಗೆ? ಎಂದು ತೋರಿಸಿ ಕೊಟ್ಟಿದ್ದಾನೆ. ಫೋರ್ಕ್ ಮತ್ತು ಸ್ಪೂನ್ ಸಹಾಯದಿಂದ ಮಡಚಿ, ಸಣ್ಣ ತುಂಡುಗಳನ್ನಾಗಿ ದೋಸೆ ಕತ್ತರಿಸಿ ತಿಂದಿದ್ದಾನೆ. ಆದರೆ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರೀ ಟೀಕೆಗೆ ಗುರಿಯಾಗಿದ್ದಾನೆ. ಸಾಂಪ್ರದಾಯಿಕ ಖಾದ್ಯಕ್ಕೆ ಹೊಸ ಊಟದ ನಿಯಮಗಳ ಅಗತ್ಯವಿದೆಯೇ ಎಂದು ಹಲವರು ಪ್ರಶ್ನಿಸಿದ್ದು ಭಾರತೀಯ ಆಹಾರವನ್ನು ಕೈಯಿಂದಲೇ ತಿಂದರೆ ರುಚಿ ಹೆಚ್ಚು ಎಂದಿದ್ದಾರೆ.

ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟು ಟೀಕೆಗೆ ಗುರಿಯಾದ ಶಿಕ್ಷಕ

ಫೋರ್ಕ್ ಹಾಗೂ ಸ್ಪೂನ್ ಬಳಸಿ ದೋಸೆ ತಿನ್ನಲು ಹೇಳಿಕೊಟ್ಟ ಶಿಕ್ಷಕ -

Profile
Pushpa Kumari Aug 19, 2026 1:56 PM

ನವದೆಹಲಿ,ಆ.18: ಸೋಶಿಯಲ್ ಮೀಡಿಯಾದಲ್ಲಿ ಕೆಲವು ಜನರ ವಿಚಿತ್ರ ವರ್ತನೆಗಳು ವೈರಲ್ (Viral Video) ಆಗುತ್ತವೆ. ಇದೀಗ ಶಿಕ್ಷಕನೊಬ್ಬ ಫೋರ್ಕ್ ಸ್ಪೂನ್ ಬಳಸಿ ದೋಸೆ ತಿನ್ನುವುದು ಹೇಗೆ? ಎಂದು ತೋರಿಸಿ ಕೊಟ್ಟಿದ್ದಾನೆ. ಫೋರ್ಕ್ ಮತ್ತು ಸ್ಪೂನ್ ಸಹಾಯದಿಂದ ಮಡಚಿ, ಸಣ್ಣ ತುಂಡುಗಳನ್ನಾಗಿ ದೋಸೆ ಕತ್ತರಿಸಿ ತಿಂದಿದ್ದಾನೆ. ಆದರೆ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರೀ ಟೀಕೆಗೆ ಗುರಿಯಾಗಿದ್ದಾನೆ. ಸಾಂಪ್ರದಾಯಿಕ ಖಾದ್ಯಕ್ಕೆ ಹೊಸ ಊಟದ ನಿಯಮಗಳ ಅಗತ್ಯವಿದೆಯೇ ಎಂದು ಹಲವರು ಪ್ರಶ್ನಿಸಿದ್ದು ಭಾರತೀಯ ಆಹಾರವನ್ನು ಕೈಯಿಂದಲೇ ತಿಂದರೆ ರುಚಿ ಹೆಚ್ಚು ಎಂದಿದ್ದಾರೆ.

ಭಾರತೀಯರ ನೆಚ್ಚಿನ ಉಪಹಾರ ಅಂತ ಬಂದಾಗ ಹೆಚ್ಚಿನವರು ದೋಸೆಯನ್ನು ಆಯ್ಕೆ ಮಾಡು ತ್ತಾರೆ. ಬಿಸಿ ಬಿಸಿಯಾದ ದೋಸೆಗೆ ತುಪ್ಪ ಸವರಿ ಚಟ್ನಿ ಹಾಕಿ ತಿಂದರೆ ರುಚಿಯೇ ಬೇರೆ, ಆದರೆ ಇಲ್ಲೊಬ್ಬ ವೆಸ್ಟರ್ನ್ ಶೈಲಿಯಲ್ಲಿ ದೋಸೆ ತಿನ್ನುವುದು ಹೇಗೆ ಎಂದು ತೋರಿಸಿದ್ದಾನೆ. ಟೇಬಲ್ ಮುಂದೆ ಕುಳಿತು, ತಮ್ಮ ಪ್ಲೇಟ್ ನಲ್ಲಿರುವ ದೋಸೆಯನ್ನು ಫೋರ್ಕ್ ಮತ್ತು ಚಮಚದ ಸಹಾಯದಿಂದ ಸಣ್ಣ ತುಂಡುಗಳಾಗಿ ಕತ್ತರಿಸಿ ತಿಂದು ತೋರಿಸಿದ್ದಾನೆ.

ವಿಡಿಯೋ ನೋಡಿ:

ಇನ್ನೊಂದು ವಿಡಿಯೊದಲ್ಲಿ ವೈದ್ಯರಿಗಾಗಿಯೇ ವಿಶೇಷ 'ದೋಸೆ ತಿನ್ನುವ ಶಿಷ್ಟಾಚಾರ'ದ ತರಬೇತಿ ನೀಡಿದ್ದಾನೆ. ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಆತ್ಮವಿಶ್ವಾಸದಿಂದ ಮತ್ತು ರಾಜ ಮನೆತನದ ಸೊಬಗಿನೊಂದಿಗೆ ದೋಸೆಯನ್ನು ಆನಂದಿಸಿ ಎಂದು ವಿಡಿಯೊದಲ್ಲಿ ಹೇಳಿದ್ದಾನೆ. ಫೋರ್ಕ್ ಮತ್ತು ಚಮಚ ಬಳಸಿ ದೋಸೆ ತಿನ್ನುವುದು ಹೆಚ್ಚು ಶುಚಿಯಾಗಿರುತ್ತದೆ. ಇದು ಉತ್ತಮ ಶಿಷ್ಟಾಚಾರ ಎಂಬುದಾಗಿ ಉಲ್ಲೇಖಿಸಿದ್ದಾನೆ.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ದೋಸೆಯನ್ನು ಫೋರ್ಕ್ ಮತ್ತು ಚಮಚದಿಂದ ತಿನ್ನಬೇಕು ಎಂಬ ಕಲ್ಪನೆಯನ್ನು ಅನೇಕ ಜನರು ಒಪ್ಪುವುದಿಲ್ಲ. ಕೈಗಳನ್ನು ಬಳಸಿ ಖಾದ್ಯವನ್ನು ತಿನ್ನುವುದು ಸಾಮಾನ್ಯ ಮಾರ್ಗವಾಗಿದೆ. ಶಿಷ್ಟಾ ಚಾರದ ಹೆಸರಿನಲ್ಲಿ ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹಲವರು ಮಂದಿ ಕಿಡಿಕಾರಿ ದ್ದಾರೆ. ಯಾವುದೇ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್‌ಗೆ ಹೋದರೂ ನಮ್ಮಿಷ್ಟದಂತೆ ತಿನ್ನುವುದು ಹೆಚ್ಚು ಹಿತಕರ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಬಳಕೆದಾರರೊಬ್ಬರು "ನನಗೆ ತಿಳಿದ ಮಟ್ಟಿಗೆ, ಒಂದು ಕೈಯಲ್ಲಿ ಚಾಕು ಮತ್ತು ಇನ್ನೊಂದು ಕೈಯಲ್ಲಿ ಫೋರ್ಕ್ ಸರಿಯಾದ ವಿಧಾನ, ಆದರೆ ದೋಸೆ ಅಥವಾ ಇಡ್ಲಿಗಳಿಗೆ, ಎರಡೂ ವಸ್ತು ಗಳನ್ನು ಎಸೆದು ನಿಮ್ಮ ಕೈಗಳಿಂದ ತಿನ್ನಿರಿ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಜನರು ತಮ್ಮದೇ ದೇಶದ ಆಹಾರವನ್ನು ತಿನ್ನಲು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಯಾಕೆ ಅನುಸರಿಸಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.