ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಟ್ಯಾಕ್ಸಿ ಚಾಲಕನಿಂದ ಮಹಿಳೆಗೆ ವಂಚನೆ: 14 ಕಿ.ಮೀ ಪ್ರಯಾಣಕ್ಕೆ 4,000 ರೂ. ವಸೂಲಿ!

Viral News: ಯುಕೆಯಿಂದ ಭಾರತಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಟ್ಯಾಕ್ಸಿ ಚಾಲಕನು ಕೇವಲ14 ಕಿ.ಲೋ ಮೀಟರ್ ಪ್ರಯಾಣಕ್ಕೆ 4,000 ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ. ಆಕೆ ಬರೆದುಕೊಂಡಿರುವ ಪೋಸ್ಟ್‌ನಲ್ಲಿ, ಕ್ಯಾಬ್‌ಗೆ ಹೋಗುವ ಮೊದಲು ಚಾಲಕನನ್ನು ಶುಲ್ಕದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ್ದಾಗಿ ಅವರು ಹಂಚಿಕೊಂಡಿದ್ದಾರೆ.

ಟ್ಯಾಕ್ಸಿ ಹಗರಣ: 14 ಕಿ.ಮೀ ಪ್ರಯಾಣಕ್ಕೆ 4,000 ರೂ. ವಸೂಲಿ ಮಾಡಿದ ಚಾಲಕ

ಸಂಗ್ರಹ ಚಿತ್ರ -

Profile
Pushpa Kumari Aug 31, 2026 3:16 PM

​ಬೆಂಗಳೂರು,ಆ.31: ನಗರ ಪ್ರದೇಶದಲ್ಲಿ ಹೆಚ್ಚಿನವರು ಕ್ಯಾಬ್ ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡುವ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ. ಕೆಲವು ಕ್ಯಾಬ್ ಚಾಲಕರು ಪ್ರಯಾಣದ ಅರ್ಧದಷ್ಟು ಮೊತ್ತ ಡಬಲ್ ಮಾಡಿ ವಂಚನೆಗೊಳಿಸುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಟ್ಯಾಕ್ಸಿ ಚಾಲಕನು ಕೇವಲ14 ಕಿ.ಲೋ ಮೀಟರ್ ಪ್ರಯಾಣಕ್ಕೆ 4,000 ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಬಗ್ಗೆ ಆಕೆ ಪೋಸ್ಟ್‌ ಶೇರ್ ಮಾಡಿದ್ದು ಕ್ಯಾಬ್‌ ನಲ್ಲಿ ಪ್ರಯಾಣಿಸುವ ಮೊದಲು ಚಾಲಕನಲ್ಲಿ ಶುಲ್ಕದ ವಿವರದ ಬಗ್ಗೆ ಮೊದಲೇ ಕೇಳಿದ್ದಾಗಿ ಅವರು ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್‌ ಮೂಲದ ಹೀಲಿಂಗ್ ಕೋಚ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಅಬೀಷ್ನಾ ಎನ್ ಎಂಬ ಮಹಿಳೆ ಈ ಅನುಭವವನ್ನು ಶೇರ್ ಮಾಡಿದ್ದಾರೆ. ಬೆಂಗಳೂರು ಮೂಲತಃ  ತನಗೆ ಅಪರಿಚಿತ ನಗರವಾಗಿತ್ತು. ಇಲ್ಲಿನ ಸಾರಿಗೆ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅರಿವಿಲ್ಲದ ಅವರು, ವಿಮಾನ ನಿಲ್ದಾಣದಿಂದ ಕೇವಲ 14 ಕಿಲೋಮೀಟರ್ ದೂರದ ಸ್ಥಳಕ್ಕೆ ಪ್ರಯಾಣ ಮಾಡಬೇಕಿತ್ತು. ಟ್ಯಾಕ್ಸಿ ಹತ್ತುವ ಮೊದಲೇ "ಮೀಟರ್ ದರದಂತೆಯೇ ದರ ಇರುತ್ತದೆಯೇ?" ಎಂದು ಚಾಲಕನಲ್ಲಿ ವಿಚಾರಿಸಿದಾಗ ಹೌದು ಎಂದು ಒಪ್ಪಿಕೊಂಡಿದ್ದಾನೆ.

ಆದರೆ ತನ್ನ ಇಳಿಯುವ ಸ್ಥಳ ಬಂದಾಗ 14 ಕಿ.ಮೀ ದೂರಕ್ಕೆ 4,000 ರೂಪಾಯಿಯ ಬಿಲ್ ನೀಡಿದ್ದಾನೆ. ಆದರೆ ಇಲ್ಲಿ ಯಾರು ತನಗೆ ಪರಿಚಯ ಇಲ್ಲದ ಕಾರಣ ಚರ್ಚೆ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ಆತ ಹೇಳಿದಷ್ಟು ಹಣ ಪಾವತಿಸಿದೆ ಎಂದು ಹೇಳಿಕೊಂಡಿದ್ದಾರೆ. ಪರಿಚಯವಿಲ್ಲದ ನಗರದಲ್ಲಿ ಪ್ರಯಾಣಿಕರಿಂದ ಎಷ್ಟು ಸುಲಭವಾಗಿ ಚಾಲಕರು ಲಾಭ ಪಡೆಯಬಹುದು ಎಂಬುದು ತನ್ನನ್ನು ಹೆಚ್ಚು ಕಾಡುತ್ತಿತ್ತು ಎಂದು ಅಬೀಷ್ನಾ ಹೇಳಿದ್ದಾರೆ.

“ಇವರು ನನ್ನನ್ನು ಕೊಲ್ಲುತ್ತಾರೆ”: ಹೆರಿಗೆಗೂ ಮುನ್ನ ಹೇಳಿದ್ದ ಮೃತ ಮಹಿಳೆಯ ವಿಡಿಯೊ ವೈರಲ್‌

ಹಾಗಾಗಿ ಟ್ಯಾಕ್ಸಿಯಲ್ಲಿ ಹೋಗುವ ಮೊದಲು, ವಿಶೇಷವಾಗಿ ನಿಮಗೆ ಯಾವುದೇ ನಗರ ಬಗ್ಗೆ ತಿಳಿದಿಲ್ಲದಿದ್ದಾಗ, ಯಾವಾಗಲೂ ದರ ಮತ್ತು ನಿಮ್ಮ ಆಯ್ಕೆಗಳನ್ನು ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿಗಳು ವಸೂಲಿ ಮಾಡುವ ವಿಚಾರದಲ್ಲಿ ಬಹಳಷ್ಟು ಮುಂದಿದೆ. ಅಧಿಕ ಶುಲ್ಕ ವಿಧಿಸುವುದು, ಬಿಲ್‌ಗಳನ್ನು ಹೆಚ್ಚಿಸುವುದು ವರ್ಷಗಳಿಂದ ನಡೆಯುತ್ತಿವೆ‌. ಈ ಬಗ್ಗೆ ಕೇಳೋರು ಯಾರು ಇಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇಂತಹ ವಂಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.