ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾಷ್ಟ್ರಗೀತೆ ವೇಳೆ ಮುಖ್ಯಮಂತ್ರಿಯೇ ಹೀಗಾಡಿದ್ರೆ ಹೇಗೆ? ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಬಿಹಾರದ ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮಾರ್ಚ್‌ 20ರಂದು ನಡೆದ ಸೆಪಕ್‌ ಟಕ್ರಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆ ಹಾಡುತ್ತಿರುವ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಗುತ್ತಿರುವ ಮತ್ತು ಮಾತನಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಪ್ರತಿಪಕ್ಷದವರು ಅವರನ್ನು ಟೀಕಿಸಿದ್ದಾರೆ.

ರಾಷ್ಟ್ರಗೀತೆ ವೇಳೆ ಬಿಹಾರ ಸಿಎಂ ಹೀಗಾ ಮಾಡೋದು?

Profile pavithra Mar 21, 2025 11:34 AM

ಪಾಟ್ನಾ: ಸಾಮಾನ್ಯವಾಗಿ ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಒಂದು ನಿಮಿಷ ಸುಮ್ಮನೆ ನಿಂತುಕೊಳ್ಳುತ್ತಾರೆ. ಇದು ದೇಶಕ್ಕೆ ನಾವು ನೀಡುವಂತಹ ಗೌರವವನ್ನು ಸೂಚಿಸುತ್ತದೆ. ಆದರೆ ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ನಡೆದ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುತ್ತಿರುವ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್( Nitish Kumar) ನಗುತ್ತಿರುವ ಮತ್ತು ಮಾತನಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಬಿಹಾರದ ಸಿಎಂ ಈ ಘಟನೆಯ ನಂತರ ಮತ್ತೆ ಪ್ರತಿಪಕ್ಷಗಳ ದಾಳಿಗೆ ಗುರಿಯಾಗಿದ್ದಾರೆ. ಮಾನ್ಯ ಮುಖ್ಯಮಂತ್ರಿ ರಾಷ್ಟ್ರವನ್ನು ಅವಮಾನಿಸಿದ್ದಾರೆ ಎಂದು ಪ್ರತಿಪಕ್ಷದವರು ಆರೋಪಿಸಿದ್ದಾರೆ.

ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮಾರ್ಚ್‌ 20ರಂದು ನಡೆದ ಸೆಪಕ್‌ ಟಕ್ರಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನಿತೀಶ್ ಕುಮಾರ್ ಅವರು ಐಎಎಸ್ ಅಧಿಕಾರಿ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಅವರೊಂದಿಗೆ ನಗುತ್ತಾ ಮಾತನಾಡುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರು ಅಧಿಕಾರಿಯ ಭುಜವನ್ನು ತಟ್ಟಿ ಅವರ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಒಂದು ಹಂತದಲ್ಲಿ, ಅವರು ಎಲ್ಲರನ್ನು ನೋಡಿ ಮುಗುಳ್ನಕ್ಕಿದ್ದಾರೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್‌ ಆಗಿದೆ.

ನಿತೀಶ್‌ ಕುಮಾರ್‌ ನಗುತ್ತಿರುವ ವಿಡಿಯೊ ಇಲ್ಲಿದೆ ನೋಡಿ



ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ, ಪ್ರತಿಪಕ್ಷಗಳು ಸೋಶಿಯಲ್ ಮಿಡಿಯಾಗಳಲ್ಲಿ ಟೀಕೆಗಳ ಸುರಿಮಳೆಯನ್ನು ಹರಿಸಿದ್ದಾರೆ. "ಮಾನ್ಯ ಮುಖ್ಯಮಂತ್ರಿಗಳೇ, ದಯವಿಟ್ಟು ರಾಷ್ಟ್ರಗೀತೆಗೆ ಅವಮಾನ ಮಾಡಬೇಡಿ. ನೀವು ಪ್ರತಿದಿನ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರನ್ನು ಅವಮಾನಿಸುತ್ತೀರಿ. ಕೆಲವೊಮ್ಮೆ ನೀವು ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ಕೂಡ ಚಪ್ಪಾಳೆ ತಟ್ಟುತ್ತೀರಿ ಮತ್ತು ಅವರ ಹುತಾತ್ಮತೆಯನ್ನು ಅಣಕಿಸುತ್ತೀರಿ, ಮತ್ತು ಕೆಲವೊಮ್ಮೆ ನೀವು ರಾಷ್ಟ್ರಗೀತೆಗೆ ಚಪ್ಪಾಳೆ ತಟ್ಟುತ್ತೀರಿ" ಎಂದು ಯಾದವ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಕೆಲವು ಸೆಕೆಂಡುಗಳ ಕಾಲವೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಥಿರವಾಗಿರಲು ಆಗದ ನೀವು ಅಂತಹ ಪ್ರಜ್ಞಾಹೀನ ಸ್ಥಿತಿಯಲ್ಲಿ ಈ ಸ್ಥಾನದಲ್ಲಿರುವುದು ರಾಜ್ಯಕ್ಕೆ ಹೆಚ್ಚಿನ ಕಾಳಜಿಯ ವಿಷಯವಾಗಿದೆ. ಬಿಹಾರವನ್ನು ಮತ್ತೆ ಮತ್ತೆ ಈ ರೀತಿ ಅವಮಾನಿಸಬೇಡಿ" ಎಂದು ಅವರು ಹೇಳಿದ್ದಾರೆ.

ಯಾದವ್ ಅವರ ತಂದೆ ಲಾಲು ಯಾದವ್ ಕೂಡ ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ರಾಷ್ಟ್ರಗೀತೆಗೆ ಅವಮಾನ ಮಾಡುವುದನ್ನು ಭಾರತ ಸಹಿಸುವುದಿಲ್ಲ. ಬಿಹಾರದ ಜನರೇ, ಈಗ ಏನಾದರೂ ಉಳಿದಿದೆಯೇ?” ಎಂದು ಕೇಳಿದ್ದಾರೆ. ನಿತೀಶ್ ಕುಮಾರ್ ಮತ್ತು ಅವರ ಪಕ್ಷವು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಸಂಭಾವ್ಯ ವಿವಾದವನ್ನು ತಪ್ಪಿಸಲು, ಮುಖ್ಯಮಂತ್ರಿ ನಾಳೆ ಬೇಷರತ್ತಾಗಿ ಕ್ಷಮೆಯಾಚಿಸಬಹುದು ಎಂದು ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ ಮೂಲಗಳು ಸೂಚಿಸಿವೆ.

ಎನ್‌ಡಿಎಯಲ್ಲಿ ನಿತೀಶ್ ಕುಮಾರ್ ಅವರ ಮಿತ್ರ ಪಕ್ಷವಾದ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಪ್ರತಿಪಕ್ಷದ ಟೀಕೆಗೆ ತಿರುಗೇಟು ನೀಡಿದ್ದಾರೆ. “ ಬಿಹಾರ ಸೇರಿದಂತೆ ದೇಶವನ್ನು ಅವಮಾನಿಸುವ ಜನರು ಬಿಹಾರದ ಗೌರವಾನ್ವಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ. ನಿತೀಶ್ ಕುಮಾರ್ ಜಿ ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಬಿಹಾರಕ್ಕೆ ಗೌರವ ನೀಡಿದರು. ಒಂದೆಡೆ, ಬಿಹಾರದ ಜನರು ಲಾಲೂಜಿ ಅವರ ಆಡಳಿತದ ನೆನಪಿನಿಂದ ನಡುಗುತ್ತಾರೆ, ಮತ್ತೊಂದೆಡೆ, ನಿತೀಶ್ ಕುಮಾರ್ ನಿನ್ನೆ ಬಿಹಾರದ ನೆಚ್ಚಿನವರಾಗಿದ್ದರು, ಇಂದು ಹಾಗೆಯೇ ಇರುತ್ತಾರೆ ಮತ್ತು ಭವಿಷ್ಯದಲ್ಲಿಯೂ ಹಾಗೆಯೇ ಇರುತ್ತಾರೆ. ನಿತೀಶ್ ಕುಮಾರ್ ಬಿಹಾರದ ಗೌರವ" ಎಂದು ಅವರು ಹೇಳಿದ್ದಾರೆ.‌

ಈ ಸುದ್ದಿಯನ್ನೂ ಓದಿ:Viral Video: ಸನ್ಯಾಸಿಯಾದರೇ ಮಧ್ಯಪ್ರದೇಶದ ಸಚಿವ ಕೈಲಾಶ್‌ ವಿಜಯವರ್ಗೀಯ? ವೈರಲ್‌ ವಿಡಿಯೋ ಹಿಂದಿನ ಅಸಲೀಯತ್ತೇನು?

ಗಂಭೀರ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾಡಿದ ತಪ್ಪು ಇದೇ ಮೊದಲಲ್ಲ. ಈ ವರ್ಷದ ಜನವರಿ 30 ರಂದು, ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಚಪ್ಪಾಳೆ ತಟ್ಟಿ ಟೀಕೆಗೆ ಒಳಗಾಗಿದ್ದರು.