ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಗರಿಕ ಪ್ರಜ್ಞೆ ಮರೆತು ದೆಹಲಿ–ಬ್ಯಾಂಕಾಕ್ ವಿಮಾನದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು

Viral Video: ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದ ಗಲಾಟೆಯ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪ್ರಯಾಣಿಕರಿಬ್ಬರು ಭೀಕರವಾಗಿ ಹೊಡೆದಾಡಿಕೊಂಡಿದ್ದಾರೆ. ಮೊದಲಿಗೆ ಇಬ್ಬರಲ್ಲಿ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು ಮತ್ತೆ ಪರಿಸ್ಥಿತಿ ಉಲ್ಬಣಗೊಂಡಿದೆ.

ವಿಮಾನದಲ್ಲಿ ಪರಸ್ಪರ ಹೊಡೆದಾಡಿಕೊಂಡ ಪ್ರಯಾಣಿಕರು: ವಿಡಿಯೊವೈರಲ್‌

ದೆಹಲಿ–ಬ್ಯಾಂಕಾಕ್ ವಿಮಾನದಲ್ಲಿ ಪ್ರಯಾಣಿಕರ ಹೊಡೆದಾಟ -

Profile
Pushpa Kumari Apr 28, 2026 3:37 PM

ದೆಹಲಿ, ಏ. 28: ಇತ್ತೀಚೆಗೆ ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುತ್ತಿದ್ದ ವಿಮಾನವೊಂದರಲ್ಲಿ ಆಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಸಹ ಪ್ರಯಾಣಿಕರಿಬ್ಬರು ಫ್ಲೈಟ್ ಒಳಗೇ ಹೊಡೆದಾಡಿಕೊಂಡಿದ್ದಾರೆ.‌ ಬಳಿಕ ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಪ್ರಯಾಣದ ಸಮಯದಲ್ಲಿ ನಾಗರಿಕರಲ್ಲಿ ಶಿಸ್ತಿನಲ್ಲಿ ಪ್ರಜ್ಞೆ ಕುಸಿಯುತ್ತಿರುವ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗಿದೆ.

ದೆಹಲಿಯಿಂದ ಬ್ಯಾಂಕಾಕ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದ ಗಲಾಟೆಯ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪ್ರಯಾಣಿಕರಿಬ್ಬರು ಭೀಕರವಾಗಿ ಹೊಡೆದಾಡಿ ಕೊಂಡಿದ್ದಾರೆ. ಮೊದಲಿಗೆ ಇಬ್ಬರಲ್ಲಿ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಮತ್ತೆ ಪರಿಸ್ಥಿತಿ ಉಲ್ಬಣಗೊಂಡಿದೆ. ಜಗಳ ಕ್ಷಣಾರ್ಧದಲ್ಲಿ ಹೊಡೆದಾಡಿಕೊಳ್ಳುವ ಮಟ್ಟಿಗೆ ತಲುಪಿದೆ.‌ ಇತರ ಪ್ರಯಾಣಿಕರು ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ವಿಡಿಯೊ ನೋಡಿ:

ವಿಡಿಯೊದಲ್ಲಿ ವಿಮಾನದೊಳಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು ಕಾಣಬಹುದು. ಬಳಿಕ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ವಿಮಾನ‌ ಸಿಬ್ಬಂದಿ ಮಧ್ಯ ಪ್ರವೇಶಿಸಿ ಗಲಾಟೆ ತಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಪ್ರಯಾಣದ ವೇಳೆ ಅನುಸರಿಸಬೇಕಾದ ಕನಿಷ್ಠ ಶಿಸ್ತಿನ ಕೊರತೆಯ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌?

ಭಾರತೀಯ ಪ್ರವಾಸಿಗರ ವರ್ತನೆಯ ಬಗ್ಗೆ ಇತ್ತೀಚೆಗೆ ಹಲವು ದೂರುಗಳು ಕೇಳಿ ಬರುತ್ತಲೇ ಇದೆ‌.‌ ವಿಶೇಷವಾಗಿ ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನ ಕೊರತೆ, ಕಸ ಹಾಕುವುದು, ವಾಗ್ವಾದಗಳು ಹೆಚ್ಚಾಗಿದೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು, ʼʼನಿಜಕ್ಕೂ ಬೇಸರದ ವಿಚಾರ. ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿದಿಲ್ಲʼʼ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು, ʼʼಇವರಿಗೆ ಸರಿಯಾದ ಶಿಕ್ಷೆ ನೀಡಬೇಕಿತ್ತುʼʼ ಎಂದು ಕಮೆಂಟ್ ಮಾಡಿದ್ದಾರೆ.