ಗಂಗಾ ನದಿ ತ್ಯಾಜ್ಯವನ್ನು ಒಬ್ಬಂಟಿಯಾಗಿ ವಿಲೇವಾರಿ ಗೊಳಿಸಿದ ಯುವಕ: ಪರಿಸರ ಕಾಳಜಿಗೆ ನೆಟ್ಟಿಗರು ಫಿದಾ!
Viral News: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ 21 ವರ್ಷದ ಯುವಕನೊಬ್ಬ ಗಂಗಾ ನದಿಯಲ್ಲಿ ತುಂಬಿಹೋಗಿದ್ದ ಕಸ ತ್ಯಾಜ್ಯವನ್ನು ಒಬ್ಬಂಟಿಯಾಗಿ ತೆರವು ಗೊಳಿಸಿದ್ದಾನೆ. ಒಡೆದ ಗಾಜಿನ ಬಾಟಲಿಗಳು, ರಟ್ಟಿನ ತುಂಡುಗಳು, ಹಳೆಯ ಬಟ್ಟೆಗಳು, ಆಹಾರದ ತ್ಯಾಜ್ಯ ಮತ್ತು ಇತರ ತ್ಯಜಿಸಿದ ವಸ್ತುಗಳನ್ನು ಹೊರತೆಗೆದಿದ್ದಾರೆ.
ಅಪಾಯವನ್ನು ಲೆಕ್ಕಿಸದೇ ಗಂಗಾ ನದಿಯನ್ನು ಸ್ವಚ್ಛಗೊಳಿಸದ ಉತ್ತರಪ್ರದೇಶ ಯುವಕ -
ಉತ್ತರಪ್ರದೇಶ,ಸೆ.13: ಪ್ಲಾಸ್ಟಿಕ್ ತ್ಯಾಜ್ಯದ ನಿರ್ಮೂಲನೆ ಬಗ್ಗೆ ಜನರಿಗೆ ಅರಿವು ಮೂಡಿಸಿದರೂ ಪರಿಸರ ರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬೇಕಾ ಬಿಟ್ಟಿಯಾಗಿ ತ್ಯಾಜ್ಯವನ್ನು ಎಸೆದು ಕೆಲವರು ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನ 21 ವರ್ಷದ ಯುವಕ ನೊಬ್ಬ ಗಂಗಾ ನದಿಯಲ್ಲಿ ತುಂಬಿಹೋಗಿದ್ದ ಕಸ ತ್ಯಾಜ್ಯವನ್ನು ಒಬ್ಬಂಟಿಯಾಗಿ ತೆರವು ಗೊಳಿಸಿದ್ದಾನೆ. ಒಡೆದ ಗಾಜಿನ ಬಾಟಲಿಗಳು, ರಟ್ಟಿನ ತುಂಡುಗಳು, ಹಳೆಯ ಬಟ್ಟೆಗಳು, ಆಹಾರದ ತ್ಯಾಜ್ಯ ಮತ್ತು ಇತರ ತ್ಯಜಿಸಿದ ವಸ್ತುಗಳನ್ನು ಹೊರತೆಗೆದಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನ 21 ವರ್ಷದ ಯುವಕ ಶಿವಂ ಕುಮಾರ್, ಗಂಗಾ ನದಿಯನ್ನು ಸ್ವಚ್ಛಗೊಳಿಸುವುದನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ. ಪರಿಸರವನ್ನು ರಕ್ಷಣೆ ಮಾಡುವುದು,ಅದರ ಕಾಳಜಿ ವಹಿಸುವುದು ತಮ್ಮ ಕರ್ತವ್ಯ ಎಂಬಂತೆ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಗಮನ ಸೆಳೆದಿದ್ದಾರೆ.
ವಿಡಿಯೋ ನೋಡಿ:
ಕಂಟೆಂಟ್ ಕ್ರಿಯೇಟರ್‌ವೊಬ್ಬರು ಅವರ ಸ್ವಚ್ಛತಾ ಕಾರ್ಯದ ವಿವರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಅವರು ನದಿಗೆ ಇಳಿದು ನೀರು ಮತ್ತು ದಡದಿಂದ ಕಸವನ್ನು ತೆರವುಗೊಳಿಸುವುದನ್ನು ಕಾಣಬಹುದು. ಕಳೆದ ವರ್ಷದಿಂದಲೂ ಈ ಕೆಲಸವನ್ನು ಮಾಡುತ್ತಿದ್ದು, ಇದನ್ನು ತಮ್ಮ ಧ್ಯೇಯವೆಂದು ಪರಿಗಣಿಸಿದ್ದಾರೆ. ಸಾಮಾನ್ಯ ಚಪ್ಪಲಿ ಧರಿಸಿ ನದಿಯ ದಂಡೆಯಲ್ಲಿ ಬಿದ್ದಿದ್ದ ಚೂಪಾದ ಗಾಜಿನ ಚೂರುಗಳ ನಡುವೆಯೇ ಕಸವನ್ನು ತೆಗೆಯುತ್ತಿದ್ದಾರೆ. ಮಹಿಳೆ ಯೊಬ್ಬರು ತ್ಯಾಜ್ಯದ ಚೀಲಗಳನ್ನು ನದಿಗೆ ಎಸೆಯುವುದನ್ನೂ ಅವರು ಚಿತ್ರೀಕರಿಸಿದ್ದೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೂಡ ಪ್ರಯತ್ನಿಸುತ್ತಿದ್ದಾರೆ.
ಸ್ವಚ್ಛತಾ ಕಾರ್ಯದ ಜೊತೆಗೆ ಶಿವಂ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೂ ಎಷ್ಟೇ ಕಷ್ಟಗಳಿದ್ದರೂ, ಅವರು ಪದೇ ಪದೇ ನದಿಯ ಬಳಿಗೆ ಮರಳಿ ಕೆಲಸವನ್ನು ತೆರವು ಗೊಳಿಸುತ್ತಾರೆ. ಯುವಕನ ಈ ನಿಸ್ವಾರ್ಥ ಸೇವೆ ಹಾಗೂ ಪರಿಸರ ಕಾಳಜಿಗೆ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈತನ ಕೆಲಸ ಎಲ್ಲರಿಗೂ ಪ್ರೇರಣೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.