ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡುರಸ್ತೆಯಲ್ಲಿ ಕುಳಿತು ಮಹಿಳೆಯ ಹೈಡ್ರಾಮಾ; ಮುಂದೇನಾಯ್ತು? ವಿಡಿಯೊ ನೋಡಿ

ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಕುಳಿತು ವಿಚಿತ್ರವಾಗಿ ವರ್ತಿಸುತ್ತಾ ಹೈಡ್ರಾಮಾ ಮಾಡಿದ್ದಾಳೆ. ಲಖನೌದಲ್ಲಿ ವಿಭೂತಿ ಖಾಂಡ್ ಪ್ರದೇಶದ ಲೋಹಿಯಾ ಆಸ್ಪತ್ರೆಯ ಹೊರಗೆ ನಡೆದಿದೆ. ಇದೀಗ ಮಹಿಳೆಯ ವರ್ತನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ನಡುರಸ್ತೆಯಲ್ಲಿ ಕುಳಿತು ಈ ಮಹಿಳೆ ಮಾಡಿದ ಅವಾಂತರವೇನು ಗೊತ್ತಾ?

Profile pavithra Mar 20, 2025 12:00 PM

ಲಖನೌ: ರಸ್ತೆ ಮಧ್ಯದಲ್ಲಿ ಕೆಲವರು ಮದ್ಯಪಾನ ಮಾಡಿ ಹೈಡ್ರಾಮಾ ಮಾಡುವಂತಹ ಘಟನೆಗಳು ಸೋಶಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಕುಳಿತು ವಿಚಿತ್ರವಾಗಿ ವರ್ತಿಸುತ್ತಾ ಹೈಡ್ರಾಮಾ ಮಾಡಿದ ಘಟನೆ ಲಖನೌದಲ್ಲಿ ಬುಧವಾರ(ಮಾರ್ಚ್‌ 19) ರಾತ್ರಿ ನಡೆದಿದೆ. ನಗರದ ವಿಭೂತಿ ಖಾಂಡ್ ಪ್ರದೇಶದ ಲೋಹಿಯಾ ಆಸ್ಪತ್ರೆಯ ಹೊರಗೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ವೈರಲ್ ವಿಡಿಯೊದಲ್ಲಿ ಮಹಿಳೆ ರಸ್ತೆಯ ಮಧ್ಯದಲ್ಲಿ ಕುಳಿತು ತಲೆಯನ್ನು ತಿರುಗಿಸುತ್ತಾ ತನ್ನ ತೋಳುಗಳನ್ನು ಅಲ್ಲಾಡಿಸುತ್ತಾ, ಕೈಗಳನ್ನು ಮಡಚಿಕೊಳ್ಳುತ್ತಾ ಮೈಮೇಲೆ ದೆವ್ವ ಹಿಡಿದವಳಂತೆ ವರ್ತಿಸಿದ್ದಾಳೆ. ಆಕೆಯ ವಿಚಿತ್ರ ವರ್ತನೆ ಕಂಡು ಜನರು ಶಾಕ್ ಆಗಿದ್ದಾರೆ. ಮಹಿಳೆಯ ವರ್ತನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ನಡುರಸ್ತೆಯಲ್ಲಿ ಮಹಿಳೆ ಹೈಡ್ರಾಮಾದ ವಿಡಿಯೊ ಇಲ್ಲಿದೆ ನೋಡಿ...



ಜನರು ಈ ಘಟನೆಯ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಮಹಿಳೆಯ ನಾಟಕ 20 ನಿಮಿಷಗಳ ಕಾಲ ನಡೆದಿದೆ. ಆದರೆ ಈ ಘಟನೆಯು ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ ಎನ್ನಲಾಗಿದೆ. ಹಾಗಾಗಿ ನಂತರ ಪೊಲೀಸರು ಮಹಿಳೆಯನ್ನು ಪಕ್ಕಕ್ಕೆ ಕರೆದೊಯ್ದರು ಎಂದು ವರದಿಯಾಗಿದೆ. ರಸ್ತೆಯ ಮಧ್ಯದಲ್ಲಿ ಕುಳಿತು ಮಹಿಳೆ ಏಕೆ ಈ ರೀತಿ ವರ್ತಿಸಿದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮತ್ತು ಆ ಮಹಿಳೆಯ ಯಾರು ಎಂಬ ಬಗ್ಗೆ ಗುರುತು ಪತ್ತೆಯಾಗಿಲ್ಲ. ಮಹಿಳೆಯ ಕುಟುಂಬದ ವಿವರಗಳನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಮಹಿಳೆಯರು ನಡು ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸಿದ ಘಟನೆ ಈ ಹಿಂದೆ ಹಲವು ವರದಿಯಾಗಿದೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ಕಂಠ ಪೂರ್ತಿ ಕುಡಿದು ಬಂದು ಬಸ್‌ ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ದೊಡ್ಡ ರಂಪಾಟ ಮಾಡಿದ್ದಳು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ಹುಚ್ಚಾಟವನ್ನು ಕಂಡು ನೆಟ್ಟಿಗರು ಕಿಡಿ ಕಾರಿದ್ದರು.

ಈ ಸುದ್ದಿಯನ್ನೂ ಓದಿ:Singrauli Violence: ಹೈವೇಯಲ್ಲಿ ಹೈಡ್ರಾಮಾ! ಬರೋಬ್ಬರಿ 11ವಾಹನಗಳಿಗೆ ಬೆಂಕಿ ಹಚ್ಚಿದ ಉದ್ರಿಕ್ತ ಗುಂಪು- ಅಷ್ಟಕ್ಕೂ ಆಗಿದ್ದೇನು?

ದೆಹಲಿಯ ಮೋಹನ್‌ ಗಾರ್ಡನ್‌ ಬಳಿ ಈ ಘಟನೆ ನಡೆದಿದ್ದು, ಮದ್ಯಪಾನ ಮಾಡಿದ ಮಹಿಳೆ ಬಸ್ಸನ್ನು ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಳು. ಆಕೆ ಬಸ್ಸನ್ನು ತಡೆಯುವ ವೇಳೆ ಚಾಲಕ ಸಡನ್‌ ಆಗಿ ಬಸ್‌ ನಿಲ್ಲಿಸಿದ್ದರಿಂದ ಅಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿತ್ತು. ಅಲ್ಲದೇ ಆಕೆ ನಡು ರಸ್ತೆಯಲ್ಲಿ ಮಲಗುವ ಮೂಲಕ ದೊಡ್ಡ ರಂಪಾಟವನ್ನು ಮಾಡಿ ವಾಹನ ಸಂಚಾರಕ್ಕೂ ಕೂಡಾ ಅಡ್ಡಿ ಉಂಟು ಮಾಡಿದ್ದಳು. ನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.