Viral Video: ಆಂಬ್ಯುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ ನೀಡಿದ 50 ವರ್ಷದ ಮಹಿಳೆ
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಮಾಮುದ್ದೀನ್ ಎಂಬ ವ್ಯಕ್ತಿಯ ಪತ್ನಿ ಗುಡಿಯಾ ಆ್ಯಂಬುಲೆನ್ಸ್‌ನಲ್ಲಿ ತನ್ನ 14 ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ತನ್ನ ಮಕ್ಕಳೊಂದಿಗೆ ಇರುವ ಪೋಟೊಗಳು ಹಾಗೂ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆದರೆ ಆಕೆ ತಾನು 9 ಮಕ್ಕಳ ತಾಯಿ ಎಂದು ತಿಳಿಸಿದ್ದಾಳೆ.


ಲಖನೌ: ಉತ್ತರ ಪ್ರದೇಶದ ಮಹಿಳೆಯೊಬ್ಬಳು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್‌ನಲ್ಲಿಯೇ ತನ್ನ14ನೇ ಮಗುವಿಗೆ ಜನ್ಮ ನೀಡಿದ್ದಾಳೆ. 50 ವರ್ಷದ ಗರ್ಭಿಣಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಾರಣ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಆಕೆ ತನ್ನ ಮಕ್ಕಳೊಂದಿಗೆ ಇರುವ ಪೋಟೊಗಳು ಹಾಗೂ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಮಾಮುದ್ದೀನ್ ಎಂಬ ವ್ಯಕ್ತಿಯ ಪತ್ನಿ ಗುಡಿಯಾ ಆ್ಯಂಬುಲೆನ್ಸ್‌ನಲ್ಲಿ ತನ್ನ 14 ನೇ ಮಗುವಿಗೆ ಜನ್ಮ ನೀಡಿದ್ದಾಳಂತೆ. ಈ ಸಮಯದಲ್ಲಿ ಆ್ಯಂಬುಲೆನ್ಸ್‌ನ ಇಎಂಟಿ ಕರ್ಮವೀರ್ ಮತ್ತು ಡ್ರೈವರ್ ಹಮೇಶ್ವರ್ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮಹಿಳೆಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಆಂಬ್ಯುಲೆನ್ಸ್ ಸಿಬ್ಬಂದಿ ವಾಹನದಲ್ಲಿ ಲಭ್ಯವಿರುವ ವಿತರಣಾ ಕಿಟ್ ಸಹಾಯದಿಂದ ಸುರಕ್ಷಿತವಾಗಿ ಆಕೆಗೆ ಹೆರಿಗೆ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
14ನೇ ಮಗುವಿಗೆ ಜನ್ಮ ನೀಡಿದ ವಿಡಿಯೊ ಇಲ್ಲಿದೆ ನೋಡಿ...
हापुड़: इमामुद्दीन की पत्नी गुड़िया ने 50 साल की उम्र में 14वें बच्चे को जन्म दिया#viralvideo | Viral Video | #Hapur pic.twitter.com/5zmQhJCoDl
— News24 (@news24tvchannel) March 30, 2025
ಈ ನಡುವೆ ಮಹಿಳೆ ತನ್ನ ನವಜಾತ ಶಿಶುವಿನೊಂದಿಗೆ ವಿಶ್ರಾಂತಿ ಪಡೆದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಗುಡಿಯಾ 14 ಮಕ್ಕಳನ್ನು ಹೊಂದಿದ್ದಾರೆ ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾಳೆ. ಮತ್ತು ಅದು ಸುಳ್ಳು ಸುದ್ದಿ ಎಂಬುದಾಗಿ ತಿಳಿಸಿದ್ದಾಳೆ. ವೈರಲ್ ಸುದ್ದಿಗೆ ಪ್ರತಿಕ್ರಿಯಿಸಿದ ಆಕೆ,ತಾನು ಒಂಬತ್ತು ಮಕ್ಕಳ ತಾಯಿ ಎಂದು ಸ್ಪಷ್ಟಪಡಿಸಿದ್ದಾಳೆ. ಆಕೆಯ ಮಕ್ಕಳಲ್ಲಿ 4 ಮಂದಿ ಗಂಡುಮಕ್ಕಳು ಮತ್ತು 5 ಮಂದಿ ಹೆಣ್ಣುಮಕ್ಕಳಂತೆ. ಆದರೆ ಗುಡಿಯಾಗೆ ಹೆರಿಗೆ ನಂತರ ಚಿಕಿತ್ಸೆ ನೀಡಿದ ಆಸ್ಪತ್ರೆ ಇದು ಗುಡಿಯಾ ಅವಳ 14 ನೇ ಮಗು ಎಂದು ಉಲ್ಲೇಖಿಸಿದೆ. ಸಿಎಂಎಸ್ ವೈದ್ಯೆ ಹೇಮಲತಾ ಅವರು ಗುಡಿಯಾ ತನ್ನ 14 ನೇ ಮಗುವಿಗೆ ಜನ್ಮ ನೀಡಿದ ನಂತರ 108 ಆ್ಯಂಬುಲೆನ್ಸ್‌ನಲ್ಲಿ ಪಿಲ್ಖುವಾ ಸಿಎಚ್‍ಸಿಗೆ ತಲುಪಿದ್ದಾರೆ ಎಂದು ಅಧಿಕಾರಿ ವಿಡಿಯೊದಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಪ್ರಜ್ಞಾಹೀನ ಸ್ಥಿತಿಯಲ್ಲಿ ಫೇಮಸ್ ಕಂಟೆಂಟ್ ಕ್ರಿಯೇಟರ್ ಪತ್ತೆ; ಅಷ್ಟಕ್ಕೂ ಆಗಿದ್ದೇನು?
ಪ್ರಿಯಕರನಿಗೆ ಹೆರಿಗೆ ನೋವಿನ ರುಚಿ ಮುಟ್ಟಿಸಿದ ಪ್ರಿಯತಮೆ
ಚೀನಾದ ಹೆನಾನ್ ಪ್ರಾಂತ್ಯದ ಮಹಿಳೆಯೊಬ್ಬಳು ತಾಯಂದಿರು ಅನುಭವಿಸುವ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಲೇಬರ್ ಸಿಮ್ಯುಲೇಶನ್ ತೆಗೆದುಕೊಳ್ಳುವಂತೆ ತನ್ನ ಗೆಳೆಯನಿಗೆ ಹೇಳಿದ್ದಾಳಂತೆ. ಹಾಗಾಗಿ ಆತ ಮೂರು ಗಂಟೆಗಳ ಸಿಮ್ಯುಲೇಶನ್ ಅನ್ನು ತೆಗೆದುಕೊಂಡಿದ್ದಾನೆ. ಇದರಿಂದ ಆತನ ಸಣ್ಣ ಕರುಳಿಗೆ ಹಾನಿಯಾಗಿದ್ದು, ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ.