Viral Video: ನೋಡೋಕೆ ಹೈ-ಫೈ ರೆಸ್ಟೋರೆಂಟ್... ಒಳಗೆ ಹೋದ್ರೆ ಎಲ್ಲಿ ನೋಡಿದ್ರಲ್ಲಿ ಜಿರಳೆ- ಶಾಕಿಂಗ್ ವಿಡಿಯೊ ಇಲ್ಲಿದೆ
ಉತ್ತರ ಪ್ರದೇಶದ ಗಾಜಿಯಾಬಾದ್‍ನ ರಾಜ್‍ನಗರ್ ಬಳಿ ಕಲೇವಾ ರೆಸ್ಟೋರೆಂಟ್‍ನಲ್ಲಿ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಪಾನಿಪುರಿ ಮೇಲೆ ಜಿರಳೆಗಳು ತೆವಳುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಗ್ರಾಹಕರೊಬ್ಬರು ಫೋನ್‍ನಲ್ಲಿ ರೆಕಾರ್ಡ್ ಮಾಡಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.


ಲಖನೌ: ಆಹಾರ ನೈರ್ಮಲ್ಯ ಕೊರತೆಗೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತದೆ. ಇತ್ತೀಚಿನ ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಪ್ರಸಿದ್ಧ ರೆಸ್ಟೋರೆಂಟ್‍ನಲ್ಲಿ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಪಾನಿಪುರಿ ಮೇಲೆ ಜಿರಳೆಗಳು ತೆವಳುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಗ್ರಾಹಕರೊಬ್ಬರು ಶಾಕ್ ಆಗಿದ್ದಾರೆ. ಗ್ರಾಹಕರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ. ರಾಜ್‍ನಗರ್ ಬಳಿಯ ಪ್ರಸಿದ್ಧ ಕಲೇವಾ ರೆಸ್ಟೋರೆಂಟ್‍ನಲ್ಲಿನ ಕಳಪೆ ನೈರ್ಮಲ್ಯವನ್ನು ಈ ಆಘಾತಕಾರಿ ವಿಡಿಯೊ ಬಹಿರಂಗಪಡಿಸಿದೆ. ರೆಸ್ಟೋರೆಂಟ್ ಫೇಮಸ್ ಆಗಿದ್ದು, ಆಹಾರದ ಬೆಲೆ ಗಗನಕ್ಕೇರಿದ್ದರೂ ಕೂಡ ಮೂಲಭೂತ ಸ್ವಚ್ಚತೆ ಕಾಣೆಯಾಗಿದೆ ಎಂದು ವೈರಲ್ ವಿಡಿಯೊದಲ್ಲಿ ಗ್ರಾಹಕರು ಹೇಳಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
नाम और दाम बड़े और दर्शन छोटे!
— Lokesh Rai (@lokeshRlive) April 26, 2025
राजनगर एक्सटेंशन के कलेवा रेस्टोरेंट में हाइजीन का स्तर देखिए, किस प्रकार गोलगप्पो के बीच कॉकरोच विचरण करते नजर आ रहे है, इन्हें खाकर बीमार पड़ना स्वाभाविक है।
रेहड़ी पटरी वाले का भी साफ सफाई का स्तर इससे बेहतर होता है, लेकिन उनसे दस गुना महंगा खाना… pic.twitter.com/lvuGQUr6Vu
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ, ಜಿರಳೆಗಳು ಪಾನಿ ಪುರಿ ಸುತ್ತಲೂ ತೆವಳುತ್ತಿರುವುದು ಸೆರೆಯಾಗಿದೆ. ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿ, ಹೋಟೆಲ್ ಸಿಬ್ಬಂದಿಗೆ ಆ ಜೀರಳೆಯನ್ನು ತೋರಿಸಿದ್ದಾನೆ ಮತ್ತು ರೆಸ್ಟೋರೆಂಟ್ ಮಾಲೀಕರನ್ನು ಕರೆಯುವಂತೆ ಹೇಳಿದ್ದಾನಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಜನಪ್ರಿಯ ರೆಸ್ಟೋರೆಂಟ್‍ಗೆ ಹೋಲಿಸಿದರೆ ಸಣ್ಣ ಬೀದಿ ಬದಿ ವ್ಯಾಪಾರಿಗಳು ಸಹ ಉತ್ತಮ ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಆದರೂ, ಕಲೇವಾ ಸುಮಾರು ಹತ್ತು ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತದೆ, ಸರಿಯಾದ ಗುಣಮಟ್ಟವಿಲ್ಲದೆ ತನ್ನ ಬ್ರಾಂಡ್ ಹೆಸರನ್ನು ಮಾತ್ರ ನೀಡುತ್ತದೆ ಎಂದು ಇನ್ನೊಬ್ಬರು ಕಿಡಿಕಾರಿದ್ದಾರೆ.
ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರೆಸ್ಟೋರೆಂಟ್ ಆಡಳಿತ ಮಂಡಳಿಯಿಂದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮತ್ತು ಉತ್ತಮ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಫ್ಲೈಓವರ್‌ನಿಂದ ಉರುಳಿದ ಕಾರು- ಯುವತಿ ಪ್ರಾಣಾಪಾಯದಿಂದ ಪಾರು; ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ಈ ಹಿಂದೆ ವೈಶಾಲಿಯ ಮಹಾಗುನ್ ಮಾಲ್‍ನಲ್ಲಿರುವ ಪಿಂಡ್ ಬಳ್ಳುಚಿ ರೆಸ್ಟೋರೆಂಟ್‍ನಲ್ಲಿ ಗ್ರಾಹಕರೊಬ್ಬರು ತನಗೆ ನೀಡಲಾಗುವ ಆಹಾರದಲ್ಲಿ ಜಿರಳೆಯನ್ನು ಪತ್ತೆಮಾಡಿದ್ದರು. ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್‌ಗೆ ತಿಳಿಸಿದಾಗ ಅವರು ಜಿರಳೆಯನ್ನು ತೆಗೆದುಕೊಂಡು ಹೋಗಿ ನಂತರ ಜೀರಳೆ ಇಲ್ಲ ಎಂಬಂತೆ ವಾದಿಸಿದ್ದರು. ನಂತರ ಈ ಬಗ್ಗೆ ಲಿಖಿತ ದೂರಿನ ಮೂಲಕ ಆಹಾರ ಸುರಕ್ಷತಾ ಇಲಾಖೆಗೆ ವರದಿ ಮಾಡಲಾಗಿದೆ. ಗ್ರಾಹಕ ತನ್ನ ಮಗನ ಹುಟ್ಟುಹಬ್ಬವನ್ನು ಆಚರಿಸಲು ತಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಬಂದಾಗ ಈ ಘಟನೆ ಸಂಭವಿಸಿತ್ತು ಎನ್ನಲಾಗಿದೆ.