ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮೂರು ದಿನಕ್ಕೊಮ್ಮೆ ಅಂಡರ್‌ವೇರ್ ಚೇಂಜ್ ಮಾಡ್ತಾನೆ ಗಂಡ! ವಿಚ್ಛೇದನ ಕೋರಿ ಕೋರ್ಟ್‌ ಮೊರೆಹೋದ ಪತ್ನಿ

ಗಂಡ-ಹೆಂಡತಿಯರ ನಡುವೆ ಜಗಳಸಾಮಾನ್ಯವಾದರೂ, ವಿಚ್ಛೇದನಕ್ಕೆ ಕಾರಣವಾಗುವ ವಿಷಯಗಳು ಗಂಭೀರವಾಗಿರುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಚ್ಛೇದನದ ಪತ್ರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಗಂಡನ ವಿಚಿತ್ರ ಚಟುವಟಿಕೆಗಳಿಂದ ಬೇಸತ್ತ ಹೆಂಡತಿಯೊಬ್ಬಳು ಬರೆದಿರುವ ಈ ಪತ್ರ, ಓದಿದವರನ್ನು ಮೊದಲು ನಗೆಗಡಲಿಗೆ ತೇಲಿಸಿ, ನಂತರ ಆಶ್ಚರ್ಯಗೊಳಿಸಿದೆ. ಇಂತಹ ಕಾರಣಕ್ಕೂ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಪತಿಗೆ ಪತ್ನಿ ಬರೆದ ವಿಚ್ಛೇದನ ಪತ್ರ ವೈರಲ್‌

ಸಾಂದರ್ಭಿಕ ಚಿತ್ರ

Profile Sushmitha Jain Jul 5, 2025 10:19 PM

ನವದೆಹಲಿ: ಗಂಡ-ಹೆಂಡತಿಯರ (Husband-Wife) ನಡುವೆ ಜಗಳಗಳು ಸಾಮಾನ್ಯವಾದರೂ, ವಿಚ್ಛೇದನಕ್ಕೆ (Divorce) ಕಾರಣವಾಗುವ ವಿಷಯಗಳು ಗಂಭೀರವಾಗಿರುತ್ತವೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿರುವ ಒಂದು ವಿಚ್ಛೇದನದ ಪತ್ರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಗಂಡನ ವಿಚಿತ್ರ ಚಟುವಟಿಕೆಗಳಿಂದ ಬೇಸತ್ತ ಹೆಂಡತಿಯೊಬ್ಬಳು ಬರೆದಿರುವ ಈ ಪತ್ರ, ಓದಿದವರನ್ನು ಮೊದಲು ನಗೆಗಡಲಿಗೆ ತೇಲಿಸಿ, ನಂತರ ಆಶ್ಚರ್ಯಗೊಳಿಸಿದೆ. ಇಂತಹ ಕಾರಣಕ್ಕೂ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಪತಿಯನ್ನು ದೂಷಿಸಿ ಬರೆದಿರುವ ಪತ್ರದಲ್ಲಿ, “ಪ್ರಿಯ ಅಂಕಿತ್, ‘ಪ್ರಿಯ’ ಎಂದು ಕರೆಯಲು ನೀನು ಯೋಗ್ಯನಲ್ಲ. ನನಗೆ ನಿನ್ನಿಂದ ಬೇಸರವಾಗಿದೆ, ಇನ್ನು ನನ್ನಿಂದ ಸಹಿಸಲು ಆಗಲ್ಲ. ಈ ವಿವಾಹದಲ್ಲಿ ನಾನು ಬದುಕಲಾರೆ. ನೀನು ಸ್ನಾನ ಮಾಡುವುದಿಲ್ಲ, ಮೂರು ದಿನ ಒಂದೇ ಅಂಡರ್‌ವೇರ್ ಧರಿಸುತ್ತೀಯ, ಸ್ನಾನ ಮಾಡಿದರೂ ಟವೆಲ್‌ ನ್ನು ಹಾಸಿಗೆಯ ಮೇಲೆ ಬಿಡುತ್ತೀಯ. ನಿನ್ನ ಹತ್ತಿರ ಹಣಕ್ಕೆ ಬೆಲೆಯೇ ಇಲ್ಲ. 80 ಸಾವಿರ ರೂ. ಖರ್ಚು ಮಾಡಿ ‘Nothing’ ಫೋನ್ ಖರೀದಿ ಮಾಡಿದ್ದೀಯ. ಅದರ ಹೆಸರೇ ‘ನಥಿಂಗ್’, ಅದರಲ್ಲಿ ಏನು ವೈಶಿಷ್ಟ್ಯವಿದೆ? ಟಾಯ್ಲೆಟ್‌ನ ಫ್ಲಶ್ ಕೂಡ ಮಾಡುವುದಿಲ್ಲ, ಗೋಬರ್‌ಬುದ್ಧಿ! ನನ್ನ ವಕೀಲರು ವಿಚ್ಛೇದನದ ಲೆಟರ್ ಕಳಿಸುತ್ತಾರೆ. ಗುಡ್ ಬೈ” ಎಂದು ಪತ್ನಿ ಹೇಳಿದ್ದಾಳೆ.

ಈ ಸುದ್ದಿಯನ್ನು ಓದಿ: Viral Video: ಸರೋವರಕ್ಕೆ ಕಸ ಎಸೆದ ಪ್ರವಾಸಿಗನನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ; ವಿಡಿಯೊ ವೈರಲ್

ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರಿಂದ ಕಾಮೆಂಟ್‌ಗಳ ಮಹಾಪೂರವೇ ಹರಿಯುತ್ತಿದೆ. ಒಬ್ಬರು, “ಕೈಬರಹ ತುಂಬಾ ಸುಂದರವಾಗಿದೆ” ಎಂದಿದ್ದಾರೆ. ಮತ್ತೊಬ್ಬರು, “ಬ್ರಾಂಡ್ ಪ್ರಚಾರದ ಈ ರೀತಿ ಸ್ವಲ್ಪ ಸಾಮಾನ್ಯವಾಗಿದೆ, ದಯವಿಟ್ಟು ನಾಚಿಕೆಯಾಗಲಿ” ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, “ಬೆಸ್ಟ್‌ಫ್ರೆಂಡ್ ಬೇಕೇ?” ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಈ ಪತ್ರದ ಹಿಂದಿನ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಕೇವಲ ತಮಾಷೆಗಾಗಿ ಬರೆದ ಪತ್ರವೆಂದು ಭಾವಿಸಿದರೆ, ಇನ್ನೂ ಕೆಲವರು ಇದರ ಹಿಂದಿನ ಗಂಭೀರತೆಯನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವಿಚಿತ್ರ ಕಾರಣಗಳಿಂದಾಗಿ ವಿಚ್ಛೇದನ ಚರ್ಚೆಯು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಆಯಾಮವನ್ನು ಪಡೆದುಕೊಂಡಿದೆ.