ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸನ್ಯಾಸಿಯಾದರೇ ಮಧ್ಯಪ್ರದೇಶದ ಸಚಿವ ಕೈಲಾಶ್‌ ವಿಜಯವರ್ಗೀಯ? ವೈರಲ್‌ ವಿಡಿಯೋ ಹಿಂದಿನ ಅಸಲೀಯತ್ತೇನು?

ರಂಗಪಂಚಮಿಯ ಮುನ್ನಾದಿನ ಇಂದೋರ್‌ನಲ್ಲಿ ಬಜರ್‌ಬಟ್ಟು ಸಮ್ಮೇಳನದ ಭವ್ಯ ಶೋಭಾ ಯಾತ್ರೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ(Minister) ಕೈಲಾಶ್ ವಿಜಯವರ್ಗಿಯ( Kailash Vijayvargiya) ಅವರು ಪಿತರೇಶ್ವರ ಧಾಮದ ಫಲಹರಿ ಬಾಬಾ ವೇಷ ಧರಿಸಿ ಬೀದಿಗಳಲ್ಲಿ ರಥದ ಮೇಲೆ ಸವಾರಿ ಮಾಡಿದ್ದಾರೆ. ಆ ವಿಡೀಯೋ ಇಲ್ಲಿದೆ.

ಸನ್ಯಾಸಿಯಾದ ಸಚಿವ ಕೈಲಾಶ್ ವಿಜಯವರ್ಗಿಯ...? ಇಲ್ಲಿದೆ ವಿಡೀಯೋ

Profile Sushmitha Jain Mar 20, 2025 3:49 PM

ಜೈಪುರ: ಭಾರತ(India)ದ ಮೂಲೆ ಮೂಲೆಯಲ್ಲಿ ಭಿನ್ನ-ವಿಭಿನ್ನ ಪ್ರಕಾರದ ಸಂಸ್ಕೃತಿ(Tradition)ಗಳನ್ನು ನಾವು ಕಾಣಬಹುದು. ಒಂದೇ ಹಬ್ಬವನ್ನು ವಿವಿಧ ಜಿಲ್ಲೆ, ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ರಂಗಿನ ಹಬ್ಬ ಹೋಳಿ(Holi)ಯನ್ನು ಕೆಲವೆಡೆ ಒಂದು ದಿನ, ಕೆಲವೆಡೆ ಮೂರು ದಿನ ಆಚರಿಸಿದರೆ, ಉತ್ತರ ಭಾರತದ ಹಲವೆಡೆ ಐದು ದಿನಗಳ ರಂಗಪಂಚಮಿಯನ್ನು ಆಚರಿಸಲಾಗುತ್ತದೆ. ಈ ರೀತಿಯ ರಂಗಪಂಚಮಿ ಉತ್ಸವದಲ್ಲಿ ಮಧ್ಯಪ್ರದೇಶ(Madhya Pradesh) ಸರ್ಕಾರ(Government)ದಲ್ಲಿ ಕ್ಯಾಬಿನೆಟ್‌ ಸಚಿವರಾಗಿರುವ ಕೈಲಾಶ್ ವಿಜಯವರ್ಗಿಯ ಅವರು ಸನ್ಯಾಸಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌(Viral Video) ಆಗಿವೆ.

ರಂಗಪಂಚಮಿಯ ಮುನ್ನಾದಿನ ಇಂದೋರ್‌ನಲ್ಲಿ ಬಜರ್‌ಬಟ್ಟು ಸಮ್ಮೇಳನದ ಭವ್ಯ ಶೋಭಾ ಯಾತ್ರೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ(Minister) ಕೈಲಾಶ್ ವಿಜಯವರ್ಗಿಯ (Kailash Vijayvargiya) ಅವರು ಪಿತರೇಶ್ವರ ಧಾಮದ ಫಲಹರಿ ಬಾಬಾ ವೇಷ ಧರಿಸಿ ಬೀದಿಗಳಲ್ಲಿ ರಥದ ಮೇಲೆ ಸವಾರಿ ಮಾಡಿದ್ದಾರೆ. ಸಚಿವರು ಪೂರ್ಣ ಪ್ರಮಾಣದ ಸನ್ಯಾಸಿ ವೇಷ ಧರಿಸಿ ವಿಗ್, ನಕಲಿ ಗಡ್ಡ, ಮೇಕಪ್ ಹೊಂದಿದ್ದರು. ಅವರು ಕೈಯಲ್ಲಿ ತ್ರಿಶೂಲವನ್ನು ಸಹ ಹಿಡಿದಿದ್ದರು. ಸಚಿವರಿಗೆ ಮೇಕಪ್‌ ಮಾಡುತ್ತಿರುವ  ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸಚಿವ ಕೈಲಾಶ್ ವಿಜಯವರ್ಗಿಯ ಅವರ ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನು ಓದಿ: Viral Video: ನಡುರಸ್ತೆಯಲ್ಲಿ ಕುಳಿತು ಮಹಿಳೆಯ ಹೈಡ್ರಾಮಾ; ಮುಂದೇನಾಯ್ತು? ವಿಡಿಯೊ ನೋಡಿ

ಇದರ ನಂತರದ ವಿಡಿಯೋವನ್ನು ಖುದ್ದು ಸಚಿವರೇ ಹಂಚಿಕೊಂಡಿದ್ದು, ಅದರಲ್ಲಿಸಾವಿರಾರು ಜನರ ಮಧ್ಯೆ ರಥವನ್ನೇರಿದ ಬಾಬಾ ವೇಷಧಾರಿ ಸಚಿವರು, ಜನರಿಗೆ ಆಶೀರ್ವಾದ ನೀಡುತ್ತಿದ್ದರು. ಅಲ್ಲಿದ್ದ ಜನರು ಸಚಿವರ ಫೋಟೋ, ವಿಡಿಯೋ ತೆಗೆದು ಅವರಿಗೆ ಜೈಕಾರ ಕೂಗುತ್ತಾ ಅವರನ್ನು ಹುರಿದುಂಬಿಸುತ್ತಿದ್ದರು.

ಮೆರವಣಿಗೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೈಲಾಶ್ ವಿಜಯವರ್ಗಿಯ, ಇಂದೋರ್‌ನ ಹಬ್ಬವನ್ನು ಶ್ಲಾಘಿಸಿ, "ಇಲ್ಲಿನ ರಂಗಪಂಚಮಿಗೆ ಸಾಟಿಯಿಲ್ಲ. ಇಡೀ ನಗರವು ಜಗಮಗಿಸುತ್ತಿದೆ. ಜನರು ಬಣ್ಣಗಳನ್ನು ಹಚ್ಚಿ ಪರಸ್ಪರ ಶುಭಾಶಯ ಕೋರುತ್ತಾರೆ. ಅವರಿಗೆ ತಿಳಿದೋ ತಿಳಿಯದೆಯೋ ಇಂದೋರ್ ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿದ್ದಾರೆ" ಎಂದು ಹೇಳಿದರು.

ವರ್ಣರಂಜಿತ ಮೆರವಣಿಗೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು

ಶೋಭಾ ಯಾತ್ರೆಯಲ್ಲಿ ಬಣ್ಣದಾಟಗಳು, ಸಂಗೀತ ಮತ್ತು ನೃತ್ಯ ಜನರ ಮನಸೋರೆಗೊಂಡಿತ್ತು. ಜನರು ಡಿಜೆ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದರು. ನೂರಾರು ಕಲಾವಿದರು ಭಾಗೋರಿಯಾ, ಭಾಂಗ್ರಾ ಮತ್ತು ಗಿಡ್ಡ ಕಲೆಗಳನ್ನು ಪ್ರದರ್ಶಿಸಿದರು. ಪೇಟ ಮತ್ತು ಕತ್ತಿಗಳೊಂದಿಗೆ ಸಾಂಪ್ರದಾಯಿಕ ಉಡುಪನ್ನು ಧರಿಸಿದ ಯುವತಿಯರು ಮೆರವಣಿಗೆ ನಡೆಸಿದರು. ಸಂತರು ಮತ್ತು ತೃತೀಯಲಿಂಗಿ ಸಮುದಾಯದ ಸದಸ್ಯರು ರಥಗಳಲ್ಲಿ ಕಾಣಿಸಿಕೊಂಡರು. ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಹಲವಾರು ಟ್ಯಾಬ್ಲೋಗಳು ಸಹ ಮೆರವಣಿಗೆಯ ಭಾಗವಾಗಿದ್ದವು.