Viral Video: ಜಿರಳೆ ನೈಲ್ ಆರ್ಟ್! ಏನಿದು ಹೊಸ ಟ್ರೆಂಡ್? ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ಮಹಿಳೆಯೊಬ್ಬಳು ತನ್ನ ನೈಲ್ ಆರ್ಟ್ ಡಿಸೈನ್‌ಗಾಗಿ ಜೀವಂತ ಜಿರಳೆಯನ್ನು ಹಿಡಿದು ಅದನ್ನು ತನ್ನ ಬೆರಳಿಗೆ ಅಂಟಿಸಿಕೊಂಡಿದ್ದಾಳೆ.ಈ ವಿಡಿಯೊ ನೆಟ್ಟಿಗರ ಗಮನ ಸೆಳೆದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಇದನ್ನು ಕಂಡು ಶಾಕ್ ಆಗಿದ್ದಾರೆ.


ಇತ್ತೀಚಿನ ದಿನಗಳಲ್ಲಿ, ಜನರು ಕೈಯ ಸೌಂದರ್ಯ ಹೆಚ್ಚಿಸಲು ಕೃತಕ ಉಗುರುಗಳನ್ನು ಬಳಸುತ್ತಾರೆ. ಇನ್ನು ಇದಕ್ಕೆ ವಿವಿಧ ವಿನ್ಯಾಸದ ಡಿಸೈನ್‌ಗಳನ್ನು ಮಾಡುತ್ತಾರೆ.ಈಗ ಮುಖದ ಹಾಗೇ ಕೈ ಸೌಂದರ್ಯ ಕೂಡ ಹೆಚ್ಚು ಮಹತ್ವ ಪಡೆದುಕೊಂಡಿದೆ. ಉಡುಪಿಗೆ ತಕ್ಕ ಹಾಗೇ ಉಗುರುಬಣ್ಣ ಹಾಕುವುದು, ಅದರ ಮೇಲೆ ನಾನಾ ರೀತಿಯ ಡಿಸೈನ್ ಮಾಡುವುದು ಟ್ರೆಂಡ್ ಆಗಿದೆ. ನೈಲ್ ಆರ್ಟ್‍ನಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಕಂಡುಹಿಡಿಯಲಾಗುತ್ತಿದೆ. ಇತ್ತೀಚಿನ ವಿಡಿಯೊವೊಂದರಲ್ಲಿ ಮಹಿಳೆಯೊಬ್ಬಳು ತನ್ನ ನೈಲ್ ಆರ್ಟ್‍ಗೆ ಜೀವಂತ ಜಿರಳೆಯನ್ನು ಹಿಡಿದು ಅದಕ್ಕೆ ಅಂಟಿಸಿದ್ದಾಳೆ. ಇಲ್ಲಿ ಅವಳು ಜಿರಳೆಯನ್ನು ಡಿಸೈನ್ ಆಗಿ ಬಳಸಿಕೊಂಡಿದ್ದಾಳೆ. ಈ ವಿಡಿಯೊ ನೆಟ್ಟಿಗರ ಗಮನಸೆಳೆದು ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಬ್ಯೂಟಿಷಿಯನ್ ಜಿರಳೆಯನ್ನು ಎತ್ತಿ ಸಿಂಥೆಟಿಕ್ ಉಗುರಿನ ಮೇಲೆ ಇರಿಸಿ, ನಂತರ ಅದಕ್ಕೆ ಗಮ್ ಹಾಕಿದ್ದಾಳೆ. ಜೀರಳೆಯು ಕೃತಕ ಉಗುರಿಗೆ ಸರಿಯಾಗಿ ಅಂಟಿಕೊಂಡ ಬಳಿಕ ಆಕೆ ಅದನ್ನು ತನ್ನ ಬೆರಳಿಗೆ ಅಂಟಿಸಿಕೊಂಡಿದ್ದಾಳೆ. ನಂತರ ಅದರ ಮೇಲೆ ಪಾರದರ್ಶಕ ನೈಲ್ ಪಾಲಿಶ್‍ನ ಕೋಟ್ ಅನ್ನು ಹಚ್ಚಿದ್ದಾಳೆ. ಅವಳ ಈ ನೈಲ್ ಆರ್ಟ್ ಡಿಸೈನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜಿರಳೆ ನೈಲ್ ಆರ್ಟ್‌ನ ವಿಡಿಯೊ ಇಲ್ಲಿದೆ ನೋಡಿ...
ಜಿರಳೆಯನ್ನು ಬಳಸಿ ಮಾಡಿರುವ ಈ ವಿಚಿತ್ರ ನೈಲ್ ಆರ್ಟ್ ಬಗ್ಗೆ ನೆಟ್ಟಿಗರು ತಮ್ಮ ವಿಭಿನ್ನವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ಕಲ್ಪನೆಯನ್ನು ಒಪ್ಪದಿದ್ದರೆ, ಇತರರು ಅದನ್ನು ನೋಡಿ ನಕ್ಕಿದ್ದಾರೆ. "ನೈಲ್ ಆರ್ಟ್‍ನಲ್ಲಿ ಜಿರಳೆಯನ್ನು ಬಳಸಿದ್ದು ಯಾಕೆ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಹಲವರು ಈ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಿರಳೆಗಳನ್ನು ಬಳಸಿ ನೈಲ್ ಆರ್ಟ್ ತಯಾರಿಸುವ ಪ್ರವೃತ್ತಿ ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದೆ. ಮಾಡೆಲ್ ಎಮಿಲಿ ರಟಾಜ್ಕೋವ್ಸ್ಕಿ ಕೂಡ ಜಿರಳೆ ಬಳಸಿ ನೈಲ್ ಆರ್ಟ್ ರಚಿಸಿ ಭಾರೀ ಸುದ್ದಿಯಾಗಿದ್ದಾರೆ. ಆಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಈ ವಿಶಿಷ್ಟ ನೈಲ್ ಆರ್ಟ್ ಅನ್ನು ಪ್ರದರ್ಶಿಸುವ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಳು. ಅಲ್ಲಿ ಅವಳು ತನ್ನ ನೈಲ್ ಆರ್ಟ್‍ಗೆ ಜಿರಳೆ ಬಳಸಿದ್ದಾಳೆ. ಉಗುರುಗಳನ್ನು ಅವಳ ಬೆರಳುಗಳ ಮೇಲೆ ತೆವಳುವ ಸಣ್ಣ ಜಿರಳೆಗಳಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿತ್ತು. ಕೆಲವು ಅಭಿಮಾನಿಗಳು ಅವಳ ಬೋಲ್ಡ್ ಮತ್ತು ಎಡ್ಜ್ ಲುಕ್ ಅನ್ನು ಹೊಗಳಿದರೆ, ಇತರರು ಪರಿಕಲ್ಪನೆಯ ಬಗ್ಗೆ ಸ್ವಲ್ಪ ಹೆಚ್ಚು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಡೈಪರ್ ಹಾರ ತಯಾರಿಸಿದ ಮಹಿಳೆ; ನೆಟ್ಟಿಗರ ಅಚ್ಚರಿಯ ಕಾಮೆಂಟ್ ವೈರಲ್
ದಪ್ಪ ತುಟಿಗಾಗಿ ಈ ಮಹಿಳೆ ಹೀಗಾ ಮಾಡೋದು!
ಮೇಕಪ್ ಹಾಗೂ ಬ್ಯೂಟಿಗೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಇತ್ತೀಚೆಗೆ ಮೇಕಪ್ ಮತ್ತು ಬ್ಯೂಟಿ ಇನ್ಫ್ಲುಯೆನ್ಸರ್ ಶುಭಾಂಗಿ ಆನಂದ್ ದಪ್ಪ ತುಟಿಗಾಗಿ ಬಳಸಿದ ವಸ್ತುವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತುಟಿಗಳ ಲುಕ್ ಹೆಚ್ಚಿಸಲು ಮತ್ತು ಅವುಗಳನ್ನು ದಪ್ಪವಾಗಿಸಲು ಸೆಲೂನ್‍ಗಳಲ್ಲಿ ಕೆಲವು ವಿಧಾನಗಳಿದ್ದರೂ, ಕೂಡ ಅವರು ನೈಸರ್ಗಿಕವಾಗಿ ತುಟಿಗಳನ್ನು ದಪ್ಪವಾಗಿಸಲು ದೇಸಿ ವಸ್ತುವೊಂದನ್ನು ಬಳಸಿದ್ದಾರೆ.ಶುಭಾಂಗಿ ಆನಂದ್ ಅವರು ತಮ್ಮ ತುಟಿಗಳನ್ನು ದಪ್ಪಗೊಳಿಸಲು ಮೆಣಸಿನಕಾಯಿಯ ತುಂಡನ್ನು ಬಳಸಿದ್ದಾರೆ. ಅವರು ಮೆಣಸಿನಕಾಯಿಯನ್ನು ಕತ್ತರಿಸಿ ನಂತರ ಅದನ್ನು ತುಟಿಗಳಿಗೆ ಹಚ್ಚಿದ್ದಾರೆ. ಮಾತ್ರವಲ್ಲ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ.