Viral News: ಇದು 'ವಿಶ್ವದ ಅತ್ಯಂತ ದುಬಾರಿ' ವಿಮಾನ ನಿಲ್ದಾಣವಂತೆ! ಕಾರಣ ಏನ್ ಗೊತ್ತಾ?
ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದ್ದು, ವಸ್ತುಗಳ ಬೆಲೆ ಕೇಳಿ ಪ್ರಯಾಣಿಕರು ದಂಗಾಗಿದ್ದಾರೆ. ಹೀಗಾಗಿ ವಿಶ್ವದಾದ್ಯಂತದ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು 'ವಿಶ್ವದ ಅತ್ಯಂತ ದುಬಾರಿ ವಿಮಾನ ನಿಲ್ದಾಣ ' ಎಂದು ಕರೆದಿದ್ದಾರೆ.ಇದೀಗ ವೈರಲ್(Viral News) ಆಗಿದೆ.


ಇಸ್ತಾಂಬುಲ್: ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಕೆಲವೊಂದು ಆಹಾರ ಪದಾರ್ಥಗಳ ಬೆಲೆಯು ದುಬಾರಿಯಾಗಿರುತ್ತದೆ. ಆದರೆ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ವಸ್ತುಗಳ ಬೆಲೆ ಕೇಳಿ ಪ್ರಯಾಣಿಕರು ದಂಗಾಗಿದ್ದಾರೆ. ಹೀಗಾಗಿ ವಿಶ್ವದಾದ್ಯಂತದ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು 'ವಿಶ್ವದ ಅತ್ಯಂತ ದುಬಾರಿ ವಿಮಾನ ನಿಲ್ದಾಣ ' ಎಂದು ಕರೆದಿದ್ದಾರೆ. ಈ ವಿಮಾನ ನಿಲ್ದಾಣವು ಅತ್ಯಂತ ಅಗತ್ಯ ಆಹಾರ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ಒಂದು ಬಿಯರ್ 15 ಅಥವಾ 1,697 ಪೌಂಡ್‍ಗಳಿಗೆ ಮಾರಾಟವಾಗುತ್ತಿದ್ದರೆ, ಒಂದು ಬಾಳೆಹಣ್ಣು 5 ಅಥವಾ 565 ಪೌಂಡ್‍ಗಳಿಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇದೀಗ ಈ ಸುದ್ದಿ ಭಾರೀ ವೈರಲ್(Viral News) ಆಗಿದೆ.
ಟರ್ಕಿಯ ಪ್ರಸಿದ್ಧ ಈ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಸರಾಸರಿ 2,20,000 ಪ್ರಯಾಣಿಕರು ಬರುತ್ತಾರೆ ಮತ್ತು ಅಲ್ಲಿಗೆ ಬಂದ ಎಲ್ಲಾ ಪ್ರಯಾಣಿಕರು ಅದರ ಹೆಚ್ಚಿನ ಬೆಲೆಗಳನ್ನು ಅತಿರೇಕವೆಂದು ಹೇಳಿದ್ದಾರೆ. ಇಲ್ಲಿನ ಪತ್ರಿಕೆಗಳು ಕೂಡ ಇಸ್ತಾಂಬುಲ್ ವಿಮಾನ ನಿಲ್ದಾಣವು ಆಹಾರ ಮತ್ತು ಪಾನೀಯಗಳ ಬೆಲೆಯಲ್ಲಿ ಯುರೋಪಿನ ಅತ್ಯಂತ ದುಬಾರಿ ವಿಮಾನ ನಿಲ್ದಾಣವಾಗಿದೆ ಎಂದು ವರದಿ ಮಾಡಿದ್ದಾರೆ. ಇನ್ನು ಮೆಕ್ ಡೊನಾಲ್ಡ್ ಮತ್ತು ಬರ್ಗರ್ ಕಿಂಗ್‍ನಂತಹ ಫಾಸ್ಟ್ ಫುಡ್‍ಗಳ ಬೆಲೆ ಕೂಡ ದುಬಾರಿಯಾಗಿದೆಯಂತೆ.
ವಿಮಾನ ನಿಲ್ದಾಣದಲ್ಲಿ ವಸ್ತುಗಳ ಬೆಲೆ ಕಂಡು ಶಾಕ್ ಆದ ಪ್ರಯಾಣಿಕರೊಬ್ಬರು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ, “ವಿಮಾನ ನಿಲ್ದಾಣದಲ್ಲಿ ಬೆಲೆಗಳು ಏಕೆ ಹೆಚ್ಚಾಗಿದೆ? ಯಾವುದಾದರೂ ನಿರ್ದಿಷ್ಟ ಕಾರಣವಿದೆಯೇ? ಎಂದು ಕೇಳಿದ್ದಾರೆ. ಟರ್ಮಿನಲ್ ಕೇವಲ ಅದ್ಭುತ ಮತ್ತು ಭವ್ಯವಾಗಿದೆ, ಆದರೆ ಬೆಲೆಗಳು ದುರದೃಷ್ಟವಶಾತ್ ಅನುಭವವನ್ನು ಸ್ವಲ್ಪ ಹದಗೆಡಿಸಿದೆ" ಎಂದು ಆ ವ್ಯಕ್ತಿ ಹೇಳಿದ್ದಾರೆ. ಇತರರು ಈ ಹೆಚ್ಚಾದ ಬೆಲೆಯನ್ನು ಕಂಡು ದಂಗಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಿಂಡಿಗಳ ಬೆಲೆ ದುಬಾರಿಯಾದ ವಿಚಾರ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾರಾಟವಾದ ಪಾನಿಪುರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಅದು ರುಚಿಯ ವಿಚಾರದಲ್ಲಿ ಅಲ್ಲ ಬದಲಾಗಿ ಅದರ ದುಬಾರಿ ಬೆಲೆಯ ವಿಚಾರವಾಗಿ. ಒಂದು ಪ್ಲೇಟ್ ಪಾನಿಪುರಿ ಇಲ್ಲಿ ₹333ಕ್ಕೆ ಲಭ್ಯವಿತ್ತು.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್ ಕ್ರೇಜ್; 2 ರೈಲ್ವೆ ಹಳಿಗಳ ನಡುವೆ ಓಡಿದ ಯುವತಿ: ಕಿಡಿಕಾರಿದ ನೆಟ್ಟಿಗರು
ಭಾರತೀಯ ಸ್ಟಾರ್ಟ್ಅಪ್ ಶುಗರ್ ಕಾಸ್ಮೆಟಿಕ್ಸ್‌ನ ಸಹ-ಸಂಸ್ಥಾಪಕ ಕೌಶಿಕ್ ಭಾರದ್ವಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪಾನಿಪುರಿ ಅಂಗಡಿಯ ಫೋಟೋವನ್ನು ಪೋಸ್ಟ್ ಮಾಡಿ ಈ ವಿಚಾರ ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ, ಮುಂಬೈ ವಿಮಾನ ನಿಲ್ದಾಣದ ಚಾಟ್ ಸ್ಟಾಲ್‍ನಲ್ಲಿ ಒಂದು ಪ್ಲೇಟ್ ಪಾನಿಪುರಿಗೆ ನೀವು 333 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಒಂದು ಪ್ಲೇಟ್ ಅಂದರೆ 8 ಪಾನಿಪುರಿಗಳು, ಅಂದರೆ ಒಂದು ಪಾನಿಪುರಿಯ ಬೆಲೆ ಸುಮಾರು 42 ರೂಪಾಯಿಗಳು ಎಂದು ತಿಳಿಸಿದ್ದಾರೆ. ಇದು ನೆಟ್ಟಿಗರ ಗಮನಸೆಳೆದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.