Viral Video: ವಿಮಾನದಲ್ಲಿ ಧಮ್ ಹೊಡೆದ ಮಹಿಳೆ; ಮುಂದೇನಾಯ್ತು? ವಿಡಿಯೊ ನೋಡಿ!
ಇಸ್ತಾಂಬುಲ್‍ನಿಂದ ಸೈಪ್ರಸ್‍ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳು ಬಹಿರಂಗವಾಗಿ ಧೂಮಪಾನ ಮಾಡಿದ್ದ ಆಘಾತಕಾರಿ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್(Viral Video) ಆಗಿದೆ. ಈ ವಿಡಿಯೊ ಹಳೆಯದಾದರೂ ಕೂಡ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ.


ಇಸ್ತಾಂಬುಲ್: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರಿಗೆಗಳಲ್ಲಿ ಮದ್ಯಪಾನ ಹಾಗೂ ಧೂಮಪಾನಗಳನ್ನು ಮಾಡಬಾರದು ಎಂಬ ನಿಯಮವಿದೆ. ಆದರೂ ಕೆಲವರು ತಮಗಿಷ್ಟವಾದ ಕಡೆ ಧೂಮಪಾನ ಮಾಡಿ ಬೇರೆಯವರಿಗೆ ತೊಂದರೆಯನ್ನುಂಟುಮಾಡುತ್ತಾರೆ. ಇತ್ತೀಚೆಗೆ ಇಸ್ತಾಂಬುಲ್‍ನಿಂದ ಸೈಪ್ರಸ್‍ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳು ಯಾವುದೇ ಅಂಜಿಕೆ ಇಲ್ಲದೇ ಧೂಮಪಾನ ಮಾಡಿದ್ದ ಆಘಾತಕಾರಿ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ನೀಲಿ ಬುರ್ಖಾ ಧರಿಸಿ, ಸನ್‍ಗ್ಲಾಸ್ ಹಾಕಿಕೊಂಡು, ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಮಹಿಳೆ, ವಿಮಾನದೊಳಗಿನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾಳೆ. ಈ ವಿಡಿಯೊ ಹಳೆಯದಾದರೂ ಕೂಡ ಈ ಘಟನೆಯ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಅವಳನ್ನು ವಶಕ್ಕೆ ಪಡೆದ ನಂತರ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಮಹಿಳೆ ಸಿಗರೇಟ್ ಸೇದುವುದು ಸೆರೆಯಾಗಿದೆ. ಅವಳು ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಮೂಲಕ ಮತ್ತು ಹೊಗೆಯನ್ನು ಯಾರಿಗೂ ಗೊತ್ತಾಗದ ಹಾಗೇ ಹೊರಹಾಕಿದ್ದಾರೆ. ಆದರೆ ಅವಳ ಪ್ರಯತ್ನ ಮಾತ್ರ ಫಲಿಸದೇ ತಕ್ಷಣ ಸಿಬ್ಬಂದಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ.
ಫ್ಲೈಟ್ ಒಳಗೆ ಧಮ್ ಹೊಡೆದ ಮಹಿಳೆ ವಿಡಿಯೊ ಇಲ್ಲಿದೆ ನೋಡಿ...
ಸಿಗರೇಟ್ ಹೊಗೆಯ ವಾಸನೆಯಿಂದ ಕ್ಯಾಬಿನ್ ಸಿಬ್ಬಂದಿಯು ಅವಳ ಬಳಿ ಬಂದು ಸಿಗರೇಟ್ ಲೈಟರ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವಳು ಅವರನ್ನು ತಳ್ಳಿದ್ದು ಅಲ್ಲದೇ ಲೈಟರ್ ಬಳಸಿಕೊಂಡು ಸೀಟ್ ಕವರ್ ಅನ್ನು ಸುಡಲು ಪ್ರಯತ್ನಿಸಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ, ಸಿಬ್ಬಂದಿ ಅವಳ ಲೈಟರ್ ಮೇಲೆ ನೀರನ್ನು ಸುರಿಯುತ್ತಾ, ಅವಳು ಹೊತ್ತಿಸಿದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.
ಈ ವಿಡಿಯೊ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ತರಹದ ತಪ್ಪುಗಳು ವಿಮಾನದಲ್ಲಿದ್ದ ಎಲ್ಲರಿಗೂ ಗಂಭೀರ ಅಪಾಯವನ್ನುಂಟು ಮಾಡುತ್ತವೆ ಎಂದು ಒತ್ತಿಹೇಳಿದ್ದಾರೆ. ಒಬ್ಬ ನೆಟ್ಟಿಗರು, "ಅವಳು ವಿಮಾನದಿಂದ ಇಳಿದ ಕೂಡಲೇ ಅವಳನ್ನು ಆರೆಸ್ಟ್ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಈಗ ಅವಳು ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಂಡಳು. ಆಕೆಯನ್ನು ಮತ್ತೆ ವಿಮಾನದಲ್ಲಿ ಪ್ರಯಾಣಿಸಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ. ಇನ್ನೊಬ್ಬರು, "ಗೊರಿಲ್ಲಾ ಟೇಪ್ ಅದಕ್ಕಾಗಿಯೇ ಇದೆ" ಎಂದಿದ್ದಾರೆ.
ವಿಮಾನದಲ್ಲಿ ಧೂಮಪಾನ ಮಾಡುವುದನ್ನು ವಾಯುಯಾನ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಏಕೆಂದರೆ ಅದು ಉಂಟುಮಾಡುವ ತೀವ್ರ ಬೆಂಕಿ ಅಪಾಯಗಳಿಗೆ ಕಾರಣವಾಗಬಹುದು. ಸ್ಮೋಕ್ ಡಿಟೆಕ್ಟರ್‌ಗಳನ್ನು ಟ್ಯಾಂಪರಿಂಗ್ ಮಾಡುವುದು, ಸಿಗರೇಟುಗಳನ್ನು ಹಚ್ಚುವುದು ಅಥವಾ ಕ್ಯಾಬಿನ್ ಒಳಗೆ ಬೆಂಕಿ ಹಚ್ಚುವ ವಸ್ತುಗಳನ್ನು ಒಯ್ಯುವುದು ಭಾರೀ ದಂಡ, ಬಂಧನ ಮತ್ತು ಶಾಶ್ವತ ಪ್ರಯಾಣ ನಿಷೇಧಗಳಿಗೆ ಕಾರಣವಾಗಬಹುದು.
ಈ ಸುದ್ದಿಯನ್ನೂ ಓದಿ:Viral Video: ವಿಮಾನದ ಸೀಟುಗಳು ಹೇಗಿವೆ ನೋಡಿ... ಪ್ರಯಾಣಿಕನ ಪಾಡು ಹೇಳ ತೀರದು! ವಿಡಿಯೊ ವೈರಲ್
ಕಳೆದ ವರ್ಷ ದೋಹಾದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು.ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯಿತು.