Hari Paraak Column: 144 ವರ್ಷಕ್ಕೊಮ್ಮೆ ಬರುತ್ತೆ ಅಂತ, ಸೆಕ್ಷನ್ 144 ಜಾರಿ ಮಾಡೋಕಾಗುತ್ತಾ?
ಕೆ.ವಿ.ರಾಜು ಅವರ ಪ್ರಮುಖ 3 ಚಿತ್ರಗಳನ್ನು ಹೆಸರಿಸಿ ಅಂದ್ರೆ ಪ್ರೇಕ್ಷಕ ಖಂಡಿತಾ ‘ಹುಲಿಯಾ’ ನನ್ನು ನೆನಪಿಸಿಕೊಳ್ಳುತ್ತಾನೆ. ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯ ಜಾಗವಿದೆ. ಇದರ ಕಥೆ ಯನ್ನು ನೋಡಿದರೆ, ‘ಈಗ ಪರಭಾಷಾ ಚಿತ್ರರಂಗದವರು ಮಾಡುತ್ತಿರೋ, ದೌರ್ಜನ್ಯಕ್ಕೆ ಒಳಗಾದವರ ಕಥೆಗಳನ್ನ ರಾಜು ಅಂದೇ ಮಾಡಿದ್ದರು’ ಅನಿಸಿದರೆ ತಪ್ಪಿಲ್ಲ

ಅಂಕಣಕಾರ ಹರಿ ಪರಾಕ್

ತುಂಟರಗಾಳಿ
ಸಿನಿಗನ್ನಡ
ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶಕರ ಗುರು ಮತ್ತು ಮಾನಸಗುರು ಆಗಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಬಗೆಗಿನ ಒಂದು ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ. ರಾಜು ಅಂದ್ರೆ ನೆನಪಾಗೋದು ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು. ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು. ಹಲವು ಅದ್ಭುತ ಚಿತ್ರಗಳನ್ನು ಕೊಟ್ಟಿದ್ದರೂ ಬಹುತೇಕರು ಅವರನ್ನು ಗುರುತಿಸೋದು ‘ಹುಲಿಯಾ’ ಚಿತ್ರದಿಂದಲೇ. ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂಥ ‘ಸೋ ಕಾಲ್ಡ್’ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನ ಡದಲ್ಲಿ ಎಂದೋ ಶುರುವಾಗಿತ್ತು. ಅಂಥ ಚಿತ್ರಗಳ ಸಾಲಿನಲ್ಲಿ ಕಾಣುವ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ‘ಹುಲಿಯಾ’.
ಇದನ್ನೂ ಓದಿ: Hari Paraak Column: ಟೈರ್ಡ್ ಆಗಿಲ್ಲ, ರಿಟೈರ್ ಹೆಂಗೆ ಆಗ್ಲಿ ?
ಕೆ.ವಿ.ರಾಜು ಅವರ ಪ್ರಮುಖ 3 ಚಿತ್ರಗಳನ್ನು ಹೆಸರಿಸಿ ಅಂದ್ರೆ ಪ್ರೇಕ್ಷಕ ಖಂಡಿತಾ ‘ಹುಲಿಯಾ’ ನನ್ನು ನೆನಪಿಸಿಕೊಳ್ಳುತ್ತಾನೆ. ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯ ಜಾಗವಿದೆ. ಇದರ ಕಥೆ ಯನ್ನು ನೋಡಿದರೆ, ‘ಈಗ ಪರಭಾಷಾ ಚಿತ್ರರಂಗದವರು ಮಾಡುತ್ತಿರೋ, ದೌರ್ಜನ್ಯಕ್ಕೆ ಒಳಗಾದವರ ಕಥೆಗಳನ್ನ ರಾಜು ಅಂದೇ ಮಾಡಿದ್ದರು’ ಅನಿಸಿದರೆ ತಪ್ಪಿಲ್ಲ.
ಒಂದೇ ವ್ಯತ್ಯಾಸ ಅಂದ್ರೆ ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿ ಕೊಳ್ಳೋದೆ ನಿಜಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆ.ವಿ.ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು. ದೇವರಾಜ್ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿಬಂ ದಿತ್ತು. ಅದರಲ್ಲೂ, ರಸ್ತೆಯಲ್ಲಿ ನಿಂತು ದೇವರಾಜ್ ಅಭಿನಯಿಸಿದ್ದ ಕ್ಲೈ ಮ್ಯಾಕ್ಸ್ ದೃಶ್ಯ ನೋಡಿ ನಟ ವಿಷ್ಣುವರ್ಧನ್, “ಅಲ್ರೀ, ಪಬ್ಲಿಕ್ ಪ್ಲೇಸ್‌ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪರ್ಫಾರ್ಮೆನ್ಸ್ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ" ಎಂದು ದೇವರಾಜ್‌ರ ಬೆನ್ನು ತಟ್ಟಿದ್ದರು.
ಇಷ್ಟಾಗಿಯೂ ಆ ಚಿತ್ರ ಗಲ್ಲಾ ಟ್ಟಿಯಲ್ಲಿ ಸೋತಿತು. “ನನಗೆ ಲಾಸ್ ಆಗುತ್ತೆ, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ರಾಜು ಕೇಳಲಿಲ್ಲ" ಅಂತ ಆರೋಪ ಹೊರಿಸುವ ಚಿತ್ರದ ನಿರ್ಮಾಪಕ ಗೋವಿಂದು ಕೂಡ, “ನಿಮ್ಮ ಹೆಸರೇನು?" ಅಂತ ಯಾರಾದ್ರೂ ಕೇಳಿದ್ರೆ “ಗೋವಿಂದು, ಹುಲಿಯಾ ಗೋವಿಂದು" ಅಂತಲೇ ಹೇಳ್ತಾರೆ. ಅದು ಆ ಚಿತ್ರದ ಮತ್ತು ಕೆ.ವಿ.ರಾಜು ಅವರ ತಾಕತ್ತು.
ಲೂಸ್ ಟಾಕ್: ಕುಂಭಮೇಳ ಮುಗಿಸಿ ಬಂದ ಭಕ್ತ
ಏನ್ ಸರ್, ಕುಂಭಮೇಳದಲ್ಲಿ ನೀವು ಮುಳುಗಿದ ನೀರು ಮಲಿನ ಆಗಿದೆ ಅಂತಿದ್ದಾ ರಲ್ಲ?
- ಏನ್ ಮಾಡೋದು, ಪವಿತ್ರ ನೀರು ಅಂತ ನೀರಲ್ಲಿ ಮುಳುಗಿ ಬಂದ ಮೇಲೆ, ಮುಳುಗಿದ್ದ ನೀರಲ್ಲಿ ಹೋಮ ಮಾಡಿದಂಗೆ ಆಯ್ತು ಅನ್ನೋ ಥರ ಆಗಿದೆ.
ಆ ನೀರು ಸ್ನಾನಕ್ಕೆ ಯೋಗ್ಯ ಅಲ್ಲ, ಅದರಲ್ಲಿ ಮುಳುಗಿ ಎದ್ರೆ ರೋಗ-ರುಜಿನ ಬರ್ತವೆ ಅಂತ ಹೇಳ್ತಿದ್ದಾರೆ?
- ಹೌದು, ಹಾಡ್ತಾ ಹಾಡ್ತಾ ರಾಗ, ಮುಳುಗ್ತಾ ಮುಳುಗ್ತಾ ರೋಗ.
ಆದ್ರೂ ನಮ್ ಜನ ಅಷ್ಟು ದೂರ ಹೋಗಿ ಸಂಗಮದಲ್ಲಿ ಮುಳುಗಿ ಬರ್ತಾರ ಅವರಿಗೆ ತಾಳ್ಮೆ ಜಾಸ್ತಿ ಅಲ್ವಾ?
- ಮತ್ತಿನ್ನೇನು, ಪಾಪ ಕಳೀಬೇಕು ಅಂದ್ರೆ ದೂರ ಹೋಗಲೇಬೇಕು. ಎಲ್ಲಾ ಊರಲ್ಲೂ ಪಾಪಸ್‌ಕಳ್ಳಿ ಥರ ತಲೆ ಎತ್ತುತ್ತಿರೋ ದೇವಸ್ಥಾನಗಳ ಮೇಲೆ ನಂಬಿಕೆ ಇಲ್ಲ ನಮಗೆ.
ಆದ್ರೂ, ಯಾಕೋ ನೀವು ಹೆದರಿಕೊಂಡಂಗೆ ಇದೆ?
- ಹಂಗೇನಿಲ್ಲ, ಆದ್ರೂ ‘ಕುಂಭ’ಮೇಳಕ್ಕೆ ಹೋಗಿ ಬಂದ ಮೇಲೆ ಮನೆ ಮುಂದೆ ‘ಮಡಕೆ’ ಇಟ್ಟು, ಹೊಗೆ ಹಾಕೋ ಪರಿಸ್ಥಿತಿ ಬಂದ್ರೆ ಅಂತ ಸ್ವಲ್ಪ ಆತಂಕ.
ಅಂದಹಾಗೆ, ಈ ಸಲ ಮಹಾಕುಂಭಮೇಳದಲ್ಲಿ ಭಾರಿ ಜನಜಂಗುಳಿ ಅಂತೆ. ಎಷ್ಟೇ ಜನ ಕಾಲ್ತುಳಿತಕ್ಕೆ ಸಿಕ್ಕು ಸತ್ತುಹೋದ್ರು, ವ್ಯವಸ್ಥೆ ಸರಿ ಇಲ್ಲ ಅಲ್ವಾ?
- ಏನ್ರೀ ಸರಿ ಇಲ್ಲ? ಮಹಾಕುಂಭಮೇಳ 144 ವರ್ಷಕ್ಕೊಮ್ಮೆ ಬರುತ್ತೆ ಅಂತ ಅಲ್ಲಿ ಸೆಕ್ಷನ್ 144 ಜಾರಿ ಮಾಡೋಕಾಗುತ್ತಾ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ತನ್ನ ಕೋತಿಯೊಂದಿಗೆ ಪಬ್‌ಗೆ ಹೋದ. ಅವನು ಟೇಬಲ್ ಮುಂದೆ ಕೂತು 2 ಪೆಗ್‌ಗೆ ಆರ್ಡರ್ ಮಾಡಿದ ಮೇಲೆ ಅವನ ಕೋತಿ ಎಂದರಲ್ಲಿ ಸುತ್ತುತ್ತಾ ಅಲ್ಲಿ ಫ್ರಿಜ್ ಮೇಲಿಟ್ಟಿದ್ದ ಸೌತೆಕಾಯಿ, ಕ್ಯಾರೆಟ್ ಎಲ್ಲಾ ತಿಂದುಬಿಡ್ತು. ಆ ಪಬ್‌ನಲ್ಲಿ ಸ್ನೂಕರ್ ಟೇಬಲ್ ಕೂಡ ಇತ್ತು, ಅದರ ಮೇಲೆ ಹಾರಿದ ಕೋತಿ ಒಂದು ಸ್ನೂಕರ್ ಬಾಲ್ ತಗೊಂಡು ತಿಂದು ಬಿಡ್ತು.
ಅಷ್ಟರಲ್ಲಿ ಸಪ್ಲೈಯರ್ ಬಂದು “ನಿಮ್ಮ ಕೋತಿ ಏನ್ ಮಾಡ್ತಾ ಇದೆ ನೋಡಿದ್ರಾ?" ಅಂತ ಖೇಮುವನ್ನು ಕೇಳಿದ. ಅದಕ್ಕೆ ಖೇಮು “ನಂಗೆಲ್ಲ ಗೊತ್ತು, ಅದು ಸ್ವಲ್ಪ ಹಂಗೆನೇ, ನಾನು ಎಲ್ಲದರ ಬಿಲ್ ಪೇ ಮಾಡ್ತೀನಿ, ಡೋಂಟ್ ವರಿ" ಅಂದು ಕುಡಿತ ಮುಗಿಸಿ ಬಿಲ್ ಕೊಟ್ಟು ಮನೆಗೆ ಹೊರಟ. ವಾರದ ನಂತರ ಖೇಮು ಮತ್ತೆ ಕೋತಿಯೊಡನೆ ಪಬ್‌ಗೆ ಬಂದ. ಈ ಬಾರಿಯೂ ಕೋತಿ ಸಿಕ್ಕ ಸಿಕ್ಕದನ್ನೆ ತಿನ್ನುತ್ತಿತ್ತು, ಆದರೆ ಪ್ರತಿ ಬಾರಿ ಏನನ್ನಾದರೂ ತಿನ್ನುವ ಮುನ್ನ ಅದನ್ನು ತನ್ನ ಗುದದ್ವಾರದ ಒಳಗೆ ಇಟ್ಟುಕೊಂಡು ನಂತರ ತೆಗೆದು ತಿನ್ನುತ್ತಿತ್ತು.
ಅದನ್ನು ನೋಡಿ ವಿಚಿತ್ರ ಮತ್ತು ಅಸಹ್ಯ ಭಾವನೆಯೊಂದಿಗೆ ಸಪ್ಲೈಯರ್ ಹೇಳಿದ “ಸರ್, ನಿಮ್ ಕೋತಿ ಏನ್ ಮಾಡ್ತಾ ಇದೆ ನೋಡ್ತಾ ಇದೀರಾ?". ಖೇಮು ಹೇಳಿದ “ಹೌದು, ಅದೇ ನಾಯ್ತು ಅಂದ್ರೆ, ಲಾಸ್ಟ್ ಟೈಮ್ ಸ್ನೂಕರ್ ಬಾಲ್ ತಿಂದ ಮರುದಿನ ಬೆಳಗ್ಗೆ ಅದಕ್ಕೆ ಮೋಷನ್ ಟೈಮಲ್ಲಿ ಸಿಕ್ಕಾಬಟ್ಟೆ ಸಮಸ್ಯೆ ಆಯ್ತು. ಹಾಗಾಗಿ ಈಗ ಅದು ಏನು ತಿನ್ನಬೇಕಾ ದರೂ ಮೊದಲು ಸೈಜ್ ಟೆಸ್ಟ್ ಮಾಡಿಕೊಂಡು ಆಮೇಲೆ ತಿನ್ನುತ್ತೆ".
ಲೈನ್ ಮ್ಯಾನ್
ಹೆಂಗಸರಿಗೆ ಮಾತ್ರ ಗೊತ್ತಿರೋ, ಗಂಡಸರಿಗೆ ಗೊತ್ತಿಲ್ಲದೇ ಇರೋ, ಕಾಮನಬಿಲ್ಲಿ ನಲ್ಲಿ ಇಲ್ಲದೇ ಇರೋ ಬಣ್ಣಗಳು ಯಾವುವು?
- ಗೋಲ್ಡ್, ಸಿಲ್ವರ್
ಯಾವುದೇ ಸಮಸ್ಯೆ ಬರೋಕೆ ಮುಂಚೆ ಅದರ ಬಗ್ಗೆ ಜಾಸ್ತಿ ಆತಂಕಕ್ಕೆ ಒಳಗಾಗ ಬಾರದು.
- ಎಷ್ಟ್ ಸಲ, ಫುಲ್ ಅರ್ಜೆಂಟ್ ಆಗಿದೆ ಅಂದ್ಕೊಂಡು ಪ್ಯಾಂಟ್ ಬಿಚ್ಚಾಕಿ, ಓಡೋಗಿ, ಟಾಯ್ಲೆಟ್ ಸೀಟ್ ಮೇಲೆ ಕೂತ್ಕೊಂಡು, ಆಮೇಲೆ ಬರೀ ಗ್ಯಾಸ್ ಬಿಟ್ಟು ಎದ್ ಬಂದಿಲ್ಲ ನೀವು?
ಯಾವಾಗಲೂ ಸಣ್ಣ ಬಟ್ಟೆಗಳನ್ನೇ ಹಾಕಿಕೊಳ್ಳೋ ಉರ್ಫಿ ಜಾವೆದ್‌ಗೆ ಕೊಡಬಹು ದಾದ ಉಚಿತ ಸಲಹೆ
- Sಏಐಘೆಓ ಆಐಎ!!
ಸಾರಿಗೆ ಗಾದೆ
- ಬಾಯಿ ಬಿಟ್ಟು ಕೇಳದೇ ಇದ್ರೆ, ಬಿಎಂಟಿಸಿ ಡ್ರೈವರ್ರೂ ಸ್ಟಾಪ್ ಕೊಡಲ್ಲ
ಪ್ರಯಾಣ ಪ್ರಯಾಸ
ಬಸ್ಸಲ್ಲಿ ಕಣ್ ಮುಚ್ಕೊಂಡು ಕೂತಿದ್ದವನೊಬ್ಬನನ್ನು ನೋಡಿ ಪಕ್ಕದಲ್ಲಿದ್ದವನು ಕೇಳಿದ
ಯಾಕ್ ಸರ್ ಹುಷಾರಿಲ್ವಾ?
- ಹಂಗೇನಿಲ್ಲ, ಬಸ್ಸಲ್ಲಿ ಈ ವಯಸ್ಸಾದವರು ನಿಂತ್ಕೊಂಡ್ ಪ್ರಯಾಣ ಮಾಡೋದನ್ನ ನನ್ ಕೈಲಿ ನೋಡಕಾಗಲ್ಲ ಅದಕ್ಕೆ.
ಫ್ರೀ ಟೈಮ್ ಮಾತು
- ರಣಭೂಮಿಯಲ್ಲಿ ಯುದ್ದ ನಿಲ್ಲಿಸಿದ್ರೆ- ಕದನ ವಿರಾಮ
- ವಿಧಾನಸೌಧದಲ್ಲಿ ಜಗಳ ನಿಲ್ಲಿಸಿದ್ರೆ- ಸದನ ವಿರಾಮ
ಲೆಜೆಂಡರೀ ಡೆಂಟಿ ಜೀವನ ಚರಿತ್ರೆ
- ‘ದಂತ’ಕಥೆ
ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
- ಗಾಂಜಾ ಗಿರಾಕಿ: ನಾವ್ ಅದಕ್ಕೆ ‘ಸೊಪ್ಪು’ ಹಾಕಲ್ಲ
ಹೆಣದ ಪಾತ್ರ ಮಾಡಿದವನ ಬಗ್ಗೆ ವಿಮರ್ಶೆ
- ಹೆಣದ ಪಾತ್ರಕ್ಕೆ ಜೀವ ತುಂಬಿದ್ದಾರೆ.