ರಾಘವ ಶರ್ಮ ನಿಡ್ಲೆ ಅವರು ರಾಜಧಾನಿ ದೆಹಲಿಯಲ್ಲಿ 18 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದ ಸಂಡೇ ಇಂಡಿಯನ್ ಸುದ್ದಿ ವಾರ ಪತ್ರಿಕೆಗೆ ದೆಹಲಿಯಲ್ಲಿ 2007ರಿಂದ 3 ವರ್ಷ, ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ 2 ವರ್ಷ ಮತ್ತು ವಿಜಯವಾಣಿ ದಿನಪತ್ರಿಕೆಗೆ ದೆಹಲಿ ವಿಶೇಷ ಪ್ರತಿನಿಧಿಯಾಗಿ 2012ರಿಂದ 2025ರ ತನಕ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2023ರ ತನಕ ವಿಜಯವಾಣಿ ಸೋದರ ಸಂಸ್ಥೆ ದಿಗ್ವಿಜಯ ಸುದ್ದಿ ವಾಹಿನಿಗೂ ವಿಶೇಷ ಪ್ರತಿನಿಧಿ ಆಗಿದ್ದರು 2014, 2019, 2024ರ ಲೋಕಸಭೆ ಚುನಾವಣೆ, ಹಾಗೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರತ್ಯಕ್ಷ ವರದಿ ಮಾಡಿದ ಅನುಭವ ಹೊಂದಿರುವ ಅವರು, ಹತ್ತು ಹಲವು ಕೇಸುಗಳ ಸುಪ್ರೀಂಕೋರ್ಟ್ ಕಲಾಪಗಳ ಬಗ್ಗೆಯೂ ವರದಿ, ವಿಶ್ಲೇಷಣೆಗಳನ್ನು ಮಾಡಿದ್ದಾರೆ.
ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಸಂಪಾದಕೀಯ ಸಲಹೆಗಾರ ರಾಗಿ ಕೆಲಸ ಮಾಡುತ್ತಿರುವ ಜತೆಗೆ ವಿಶ್ವವಾಣಿ ಪತ್ರಿಕೆಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿದ್ದಾರೆ.