ಈ ದೇಶಗಳು ತೆರೆದುಕೊಂಡ ರೀತಿ ಅಚ್ಚರಿದಾಯಕ
ರುವಾಂಡಾ ( RWANDA) ಎನ್ನುವುದು ಮಧ್ಯ-ಪೂರ್ವ ಆಫ್ರಿಕಾದಲ್ಲಿನ ಒಂದು ದೇಶ. ಇದೊಂದು ‘ಲ್ಯಾಂಡ್-ಲಾಕ್ಡ್’ ದೇಶ. ಅಂದರೆ ಇದಕ್ಕೆ ನೀರಿನ ದಾರಿಯಿಲ್ಲ, ಇತರ ದೇಶಗಳಿಂದ ಸುತ್ತುವರಿದ ದೇಶ ವಾಗಿದೆ. ಉಗಾಂಡಾ, ಬುರುಂದಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ತಾಂಜಾನಿಯ ದೇಶಗಳನ್ನ ಅಕ್ಕಪಕ್ಕದ ದೇಶಗಳನ್ನಾಗಿ ಇದು ಪಡೆದಿದೆ.