No appointment for Nigam: ನಿಗಮ ಸದಸ್ಯ, ನಿರ್ದೇಶಕರ ನೇಮಕ ಸದ್ಯಕ್ಕಿಲ್ಲ?
ಆಕಾಂಕ್ಷಿಗಳ ಪಟ್ಟಿ ಈಗಾಗಲೇ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಸಮಿತಿ ಅಧ್ಯಕ್ಷರ ಕೈ ತಲುಪಿದೆ. ಪಕ್ಷ ರೂಪಿಸಿದ ಅಲಿಖಿತ ಮಾರ್ಗಸೂಚಿ ಪ್ರಕಾರ ಎಲ್ಲಾ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಸಂಸದರು ತಮ್ಮವರಿಗೆ ಯಾವ ನಿಗಮ ನೀಡಬೇಕು ಎನ್ನುವ ಶಿಫಾರಸು ಗಳನ್ನೂ ನೀಡಿದ್ದಾರೆ
Source : Vishwavani Daily News Paper
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕೈ ಪಕ್ಷದಲ್ಲಿ ಹುದ್ದೆಗಾಗಿ ನಾಯಕರ ಪಟ್ಟು, ಕಾರ್ಯಕರ್ತರಲ್ಲಿ ಹೆಚ್ಚಿದ ಸಿಟ್ಟು
ನೇಮಕ ಇನ್ನೂ ೩ ತಿಂಗಳು ಮುಂದೆ ಹೋಗುವ ಸಾಧ್ಯತೆ
ಬಹುನಿರೀಕ್ಷಿತ ನಿಗಮ ಮಂಡಳಿಗಳ ಸದಸ್ಯರು, ನಿರ್ದೇಶಕರ ನೇಮಕ ಸದ್ಯಕ್ಕೆ ನಡೆಯದು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಆಂತರಿಕ ಬೇಗುದಿ ಹಿನ್ನೆಲೆಯಲ್ಲಿ ಸದಸ್ಯರು ಮತ್ತು ನಿರ್ದೇಶಕರ ನೇಮಕ ಇನ್ನೂ ಮೂರು ತಿಂಗಳ ಕಾಲ ಮುಂದೆ ಹೋಗುವ ಸಾಧ್ಯತೆಗಳು ದಟ್ಟವಾಗುತ್ತಿವೆ.
ಆಕಾಂಕ್ಷಿಗಳ ಪಟ್ಟಿ ಈಗಾಗಲೇ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಸಮಿತಿ ಅಧ್ಯ ಕ್ಷರ ಕೈ ತಲುಪಿದೆ. ಪಕ್ಷ ರೂಪಿಸಿದ ಅಲಿಖಿತ ಮಾರ್ಗಸೂಚಿ ಪ್ರಕಾರ ಎಲ್ಲಾ ಸಚಿವರು,
ಶಾಸಕರು, ಪರಿಷತ್ ಸದಸ್ಯರು, ಸಂಸದರು ತಮ್ಮವರಿಗೆ ಯಾವ ನಿಗಮ ನೀಡಬೇಕು ಎನ್ನುವ ಶಿಫಾರಸುಗಳನ್ನೂ ನೀಡಿದ್ದಾರೆ. ಆದರೆ ಈ ಶಿಫಾರಸು ಪಟ್ಟಿ ಮುಂದಿಟ್ಟು ಕೊಂಡು ಯಾವ ನಿಗಮಕ್ಕೆ ಯಾರನ್ನು ಸದಸ್ಯರು ಮತ್ತು ನಿರ್ದೇಶಕರನ್ನಾಗಿ ಮಾಡಬೇಕು ಎನ್ನು ವುದು ಮಾತ್ರ ಇನ್ನೂ ತೀರ್ಮಾನವಾಗಿಲ್ಲ.
ಇದಕ್ಕಾಗಿ ಇನ್ನೂ ಎರಡು ಸುತ್ತಿನ ಸಭೆ ನಡೆಯಬೇಕಿದ್ದು, ಅದು ಸದ್ಯಕ್ಕೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಫೆಬ್ರವರಿ ಅಂತ್ಯದ ವೇಳೆಗೆ ರಾಜ್ಯ ಬಜೆಟ್ ಮಂಡನೆ ಆಗುವ ಸಾಧ್ಯತೆಯಿದ್ದು ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಯಾರಿ ಆರಂಭಿಸಿದ್ದಾರೆ.
ಇದರ ಮಧ್ಯೆ ಸಚಿವ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಗ್ಗ ಜಗ್ಗಾಟ ತೆರೆಮರೆಯಲ್ಲಿ ವಿಪರೀತಕ್ಕೆ ಹೋಗುತ್ತಿದೆ. ಉಪಮುಖ್ಯಮಂತ್ರಿ ಹಾಗೂ ಅಧ್ಯಕ್ಷರಾದ ಡಾ. ಜಿ.ಪರಮೇಶ್ವರ್ ಅವರು ಎರಡು ಸುತ್ತಿನ ಸಭೆ ನಡೆಸಿ ಸದಸ್ಯರು ಮತ್ತು ನಿರ್ದೇಶಕರ ನೇಮಕ ಮಾಡುವುದು ತುಂಬಾ ದೂರದ ಮಾತಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಸದಸ್ಯ ಮತ್ತು ನಿರ್ದೇಶಕರ ನೇಮಕ ಆಕಾಂಕ್ಷಿಗಳು ಇನ್ನೂ ಕೆಲ ಕಾಲ ಸಹನೆ ಯಿಂದ ಕಾಯುವ ಅನಿವಾರ್ಯವಿದೆ ಎನ್ನಲಾಗಿದೆ.
ಏನಿದು ಕಮಿಟಿ ಕಣ್ಣಾಮುಚ್ಚಾಲೆ?
ರಾಜ್ಯ ಸರ್ಕಾರ 85ಕ್ಕೂ ಹೆಚ್ಚು ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕವನ್ನೇನೋ ಮಾಡಿತ್ತು. ಆದರೆ ಆ ನಿಗಮಗಳ ಸದಸ್ಯರು ಮತ್ತು ನಿರ್ದೇಶಕರ ನೇಮಕ ವಿಚಾರದಲ್ಲಿ ತೀರ ವಿಳಂಬವಾಗುತ್ತಿದ್ದು ಇದು ಪಕ್ಷದ ಕಾರ್ಯಕರ್ತರ ಆಕ್ರೋಶ ಹೆಚ್ಚಿಸಿದೆ. ಸರ್ಕಾರ ರಚನೆಯಾಗಿ ಎರಡು ವರ್ಷಗಳೇ ಸಮೀಪಿಸುತ್ತಿದ್ದು ಪಕ್ಷಕ್ಕಾಗಿ ದುಡಿದವರಿಗೆ ಯಾವುದೇ ಪ್ರತಿ-ಲ’ ಸಿಕ್ಕಿಲ್ಲ ಎಂಬ ನೋವು ಕಾರ್ಯಕರ್ತರದ್ದು.
ನಿಗಮ ಸದಸ್ಯರ ಉದ್ದೇಶಕ್ಕಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಡಾ. ಶರಣ ಪ್ರಕಾಶ್ ಪಾಟೀಲ, ರಾಜ್ಯಸಭೆ ಸದಸ್ಯ ಜೆ.ಸಿ. ಚಂದ್ರಶೇಖರ ಸೇರಿ 11 ಜನ್‌ರ ಸಮಿತಿ
ರಚಿಸಲಾಗಿತ್ತು. ಹಾಗೆಯೇ ಪಕ್ಷದ ನಾಯಕರಿಗೆ ಕೋಟಾಗಳನ್ನು ನಿಗದಿ ಮಾಡಿ ನೇಮಕ ಮಾಡುವ ಮಾರ್ಗಸೂಚಿ ರಚಿಸಲಾಗಿತ್ತು.
ಅಂದರೆ ಮುಖ್ಯಮಂತ್ರಿ ಅವರಿಗೆ 75 ಮಂದಿ ನೇಮಕ ಮಾಡುವ ಅವಕಾಶ, ಉಪ ಮುಖ್ಯ ಮಂತ್ರಿಗೆ 75, ಸಚಿವರಿಗೆ ಐದು ಶಾಸಕರಿಗೆ ಮೂರು ಸಂಸದರಿಗೆ ಎರಡು ವಿಧಾನಸಭಾ ಸದಸ್ಯರಿಗೆ ೨ ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರಿಗೆ 3 ಮೂರು ಮಂದಿ ನೇಮಕ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಹೀಗಾಗಿ ಸಮಿತಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರೂ ಸೇರಿದಂತೆ ಎಲ್ಲ ರಿಂದಲೂ ಸುಮಾರು 3500ಕ್ಕೂ ಹೆಚ್ಚು ಶಿಫಾರಸ್ಸಿಗಳು ಸಲ್ಲಿಕೆ ಆಗಿವೆ. ಇವುಗಳಲ್ಲಿ ಆಯ್ಕೆ ಸಮಿತಿಯು, ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 1180 ಸದಸ್ಯರು ಹಾಗೂ ನಿರ್ದೇಶಕರು ಹುದ್ದೆಗೆ ನೇಮಕ ಮಾಡಬೇಕಿದೆ.
ಇದನ್ನೂ ಓದಿ: L P Kulkarni Column: ವಿಶ್ವದ ಉಗಮ ಹೇಗಾಯಿತು ?