Vinayaka Onivighneshwara Column: ಎಲ್ಲರಿಗೂ ಖಾರ- ‘ಈ’ ಖಾತಾ!
ಇವೆಲ್ಲವನ್ನು ಇಂದಿನ ದಿನ ಮಾನಕ್ಕೆ ಸರಿಯಾಗಿ ಅನುಷ್ಠಾನಗೊಳಿಸಬೇಕಾದ್ದು ಸರಕಾರದ ಬದ್ಧತೆ. ಹಿಂದಿನ ಕಾಲಕ್ಕೆ ಹೋಲಿಸಿದಾಗ ಇಂದಿನ ವೈಜ್ಞಾನಿಕ- ತಂತ್ರಜ್ಞಾನ ಮುಂದು ವರೆದ ಸಂದರ್ಭದಲ್ಲಿ ಜನಸ್ನೇಹಿ ಕೆಲಸಗಳು ಸರಳವಾಗಿ ಮುಂದುವರಿಯ ಬೇಕಿತ್ತು. ಆದರೆ, ಸರಕಾ ರದ ಬೇಜವಾಬ್ದಾರಿ ಎನ್ನೋಣವೇ, ಅಧಿಕಾರಿಗಳ ಕ್ಷಮತೆಯ ಕೊರತೆ ಎನ್ನೋಣವೇ, ಒಟ್ಟಿನಲ್ಲಿ ಹೊಸ ವ್ಯವಸ್ಥೆ ಅನುಷ್ಠಾನ ಆಗುವಾಗ ಜನರಿಗೆ ಕಷ್ಟ ತಪ್ಪುವುದೇ ಇಲ್ಲ
Source : Vishwavani Daily News Paper
ಪ್ರಸ್ತುತ
ವಿನಾಯಕ ಓಣಿವಿಘ್ನೇಶ್ವರ
ಸರಕಾರ ಇರುವುದು ಜನರಿಗೆ ಹೆಚ್ಚು ಅನುಕೂಲಗಳನ್ನು ಸೃಷ್ಟಿಸಲು ಎನ್ನುವುದು ಎಲ್ಲರ ಭಾವನೆ. ಇದರ ಜೊತೆಗೆ ಬೇಕಾದ ಕಾನೂನುಗಳನ್ನು ರೂಪಿಸುವುದು, ಜನರ ಜೀವನಕ್ಕೆ ವ್ಯವಹಾರಕ್ಕೆ ರಕ್ಷಣೆ ಕೊಡುವುದನ್ನೂ ಸರಕಾರದಿಂದ ನಿರೀಕ್ಷಿಸುವುದು ತಪ್ಪಲ್ಲ. ಆ ನಿಟ್ಟಿನ ಸರಕಾರಗಳು ಯೋಚಿಸುವುದು, ಯೋಜಿಸುವುದೂ ಸಹಜ ಪ್ರಕ್ರಿಯೆಯೇ.
ಇವೆಲ್ಲವನ್ನು ಇಂದಿನ ದಿನ ಮಾನಕ್ಕೆ ಸರಿಯಾಗಿ ಅನುಷ್ಠಾನಗೊಳಿಸಬೇಕಾದ್ದು ಸರಕಾರದ ಬದ್ಧತೆ. ಹಿಂದಿನ ಕಾಲಕ್ಕೆ ಹೋಲಿಸಿದಾಗ ಇಂದಿನ ವೈಜ್ಞಾನಿಕ- ತಂತ್ರಜ್ಞಾನ ಮುಂದು ವರೆದ ಸಂದರ್ಭದಲ್ಲಿ ಜನಸ್ನೇಹಿ ಕೆಲಸಗಳು ಸರಳವಾಗಿ ಮುಂದುವರಿಯ ಬೇಕಿತ್ತು. ಆದರೆ, ಸರಕಾರದ ಬೇಜವಾಬ್ದಾರಿ ಎನ್ನೋಣವೇ, ಅಧಿಕಾರಿಗಳ ಕ್ಷಮತೆಯ ಕೊರತೆ ಎನ್ನೋಣವೇ, ಒಟ್ಟಿನಲ್ಲಿ ಹೊಸ ವ್ಯವಸ್ಥೆ ಅನುಷ್ಠಾನ ಆಗುವಾಗ ಜನರಿಗೆ ಕಷ್ಟ ತಪ್ಪು ವುದೇ ಇಲ್ಲ.
ಖಾಸಗಿ ಕಂಪನಿಗಳಲ್ಲಿ ಸಿಸ್ಟಮ್ ಬದಲಾವಣೆಗಳು ಅದೆಷ್ಟು ನಿಖರವಾಗಿ ಸಮಯಕ್ಕೆ ಸರಿಯಾಗಿ ಕಡಿಮೆ ಜಟಿಲತೆಯಲ್ಲಿ ಆಗುತ್ತವೆಯೋ, ಆ ರೀತಿಯಲ್ಲಿ ಸರಕಾರಿ ವ್ಯವಸ್ಥೆ ಯಲ್ಲಿ ಆಗುವುದೇ ಇಲ್ಲ. ಅಂತಹ ಒಂದು ಇತ್ತೀಚಿನ ಬದಲಾವಣೆ- ಈ ಖಾತಾ ( E Kahata ) ಅನುಷ್ಠಾನ. ಸರಕಾರದ ಆಲೋಚನೆ ಒಳ್ಳೆಯದೇ. ಇಂದಿನ ಮಾಹಿತಿ ತಂತ್ರಜ್ಞಾನ ಯುಗ ದಲ್ಲಿ ಹಳೆಯ ಕಡತಗಳನ್ನೆಲ್ಲ ಕಾಗದದ ರೂಪದಲ್ಲಿ ಕಾಪಿಡುವುದೂ, ಅದನ್ನೇ ಉಪ ಯೋಗಿಸುವುದು ಸುಲಭದ ಮಾತಲ್ಲ.
ಅವೆಲ್ಲವನ್ನೂ ಡಿಜಿಟಲೀಕರಣ ಗೊಳಿಸಿ, ಖಾತೆಯನ್ನು ಮಾಡಿ, ಅದನ್ನು ಡಿಜಿಟಲ್ ರೂಪದಲ್ಲಿ ಮಾಡುವ ಯೋಚನೆ ಒಳ್ಳೆಯದೇ. ಆದರೆ, ಅದರ ಅನುಷ್ಠಾನ ಸರಕಾರದ ಅಕ್ಷಮತೆಯ ಕಾರಣದಿಂದ ತರುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಎಲ್ಲಾ ಹೊಸ ಆಸ್ತಿಗಳ ನೋಂದಣಿಗೆ ಈ ಖಾತಾ ಕಡ್ಡಾಯ ಎನ್ನುವುದು ಸರಕಾರದ ಹೊಸ ನಿಯಮ. ಏಕಾ ಏಕಿ ತಂದ ಈ ಹೊಸ ನಿಯಮ ಜನರಿಗೆ ಬಹಳಷ್ಟು ಕಷ್ಟಗಳನ್ನು ತಂದಿಟ್ಟಿದೆ.
ಒಂದು ಉದಾಹರಣೆಯನ್ನು ನೋಡೋಣ. ಬೆಂಗಳೂರಿನಲ್ಲಿ ಅದೆಷ್ಟೋ ಅಪಾರ್ಟ್ಮೆಂಟ್ ಕಟ್ಟಡಗಳಿವೆ. ಅವೆಲ್ಲ ಹಳೆ ಕಾಲದ ಆಸ್ತಿಯಲ್ಲಿ ಕಟ್ಟಿರುವಂಥವು. ಅಪಾರ್ಟ್ಮೆಂಟ್ ಕೆಲಸ ಗಳು ಮುಗಿದಿವೆ. ಅದೆಷ್ಟೋ ಅಪಾರ್ಟ್ಮೆಂಟ್ ಗಳನ್ನು ಕೊಂಡವರಿಗೆ ಹಸ್ತಾಂತರಿಸುವ ಕೆಲಸ ಸಪ್ಟೆಂಬರ್- ಅಕ್ಟೊಬರ್‌ನಲ್ಲಿ ಆಗುವುದಿತ್ತು. ನೋಂದಣಿ ಮಾಡದೇ ವಾಸಿಸುವು ದೆಂತು. ಆದರೆ ಸರಕಾರ ಈ ಖಾತಾ ವನ್ನು ಕಡ್ಡಾಯಗೊಳಿಸಿಬಿಟ್ಟಿತು.
ವಸತಿಗೆ ಆಗುವಷ್ಟು ತಯಾರಿ ಇರುವ ಅದೆಷ್ಟೋ ಅಪಾರ್ಟ್ಮೆಂಟ್‌ಗಳು ಈಗ ನೋಂದಣಿಗೆ ಪರದಾಡುವಂತಾಗಿದೆ. ಒಂದು ಕಡೆಯಲ್ಲಿ ಸ್ವಂತ ಮನೆಗೆ ಆದಷ್ಟು ಬೇಗ ಹೋಗುವ ಕನಸು ಕಟ್ಟಿದ್ದ ಈ ಜನಕ್ಕೆ ಸರಕಾರದ ಈ ಕ್ರಮ ಮಾನಸಿಕ ಹಿಂಸೆಯಾಗಿ ಪರಿಣಮಿಸಿದೆ. ಲಕ್ಷಾಂತರ ರೂಪಾಯಿಗಳ ಬ್ಯಾಂಕ್ ಸಾಲ ಮಾಡಿ ಅಪಾರ್ಟ್ಮೆಂಟ್ ಖರೀದಿಸಿರುವ ಅದೆಷ್ಟೋ ಜನಕ್ಕೆ ಇದು ಆರ್ಥಿಕವಾದ ದೊಡ್ಡ ಹೊರೆಯನ್ನು ಉಂಟು ಮಾಡುತ್ತಿದೆ.
ಒಂದು ಕಡೆಯಲ್ಲಿ ಸ್ವಂತ ಮನೆಗೆ ಹೋಗಲಾರದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರು ವವರಿಗೆ ಬಾಡಿಗೆಯ ಹೊರೆ. ಈಗಾಗಲೇ ಕಟ್ಟಡ ಸ್ಥಿತಿಯನ್ನು ಆಧರಿಸಿ ಬ್ಯಾಂಕ್ ಗಳು ಬಿಲ್ಡರ್‌ಗೆ ಎಲ್ಲ ಹಣವನ್ನೂ ಪಾವತಿಸಿವೆ. ಆ ಎಲ್ಲ ಹಣಕ್ಕೆ ಈಗಾಗಲೇ ಬಡ್ಡಿಯನ್ನು ಸಾಲ
ತೆಗೆದುಕೊಂಡ -ಅಪಾರ್ಟ್ಮೆಂಟ್ ಬುಕ್ ಮಾಡಿದ ಜನರು ಕಟ್ಟುತ್ತಿದ್ದಾರೆ. ಒಂದು ಕಡೆ ಮಾನಸಿಕ ಹಿಂಸೆ, ಮತ್ತೊಂದು ಕಡೆ ಮನೆ ಬಾಡಿಗೆ, ಮಗದೊಂದು ಕಡೆ ಬ್ಯಾಂಕಿಗೆ ಕಟ್ಟುತ್ತಿರುವ ಬಡ್ಡಿ, ಹೀಗೆ ವಿವಿಧ ರೀತಿಯ ಹಿಂಸೆಗಳಿಂದ ಜನ ಪರದಾಡುತ್ತಿದ್ದಾರೆ.
ಬಿಲ್ಡರ್‌ನ್ನು ಕೇಳಿದರೆ ಸಿದ್ಧ ಉತ್ತರ ಬರುತ್ತಿದೆ. ನಾವೇನು ಮಾಡೋಣ. ಸರಕಾರದ ಮಟ್ಟ ದಲ್ಲಿ ಈ ಖಾತಾ ದೊರಕುತ್ತಿಲ್ಲ. ಸವರ್ರ ಸಮಸ್ಯೆಯಂತ ಕ್ಷುಲ್ಲಕ ಕಾರಣಗಳನ್ನು ಬಿಲ್ಡರ್ ನೀಡುತ್ತಿದ್ದಾರೆ. ಅವರಿಗೂ ಕೂಡಾ ನೋಂದಣಿ ಸಮಯಕ್ಕೆ ಬರಬೇಕಾದ ಪೂರ್ತಿ ಹಣ ಬಾರದಂತಾಗಿದೆ. ಇನ್ನು ಸರಕಾರಕ್ಕೆ ಬರಬಹುದಾದ ಆದಾಯಕ್ಕೂ ಬ್ರೇಕ್ ಬಿದ್ದಿದೆ.
ಅಂದರೆ ಜನಸಾಮಾನ್ಯ, ಬಿಲ್ಡರ್, ಸರಕಾರ ಎಲ್ಲರ ಆರ್ಥಿಕತೆಗೆ ಈ ಕ್ರಮ ಹೊಡೆತ ನೀಡು ತ್ತಿದೆ. ಒಟ್ಟಿನಲ್ಲಿ ಪೂರ್ವ ತಯಾರಿ ಇಲ್ಲದ, ಪರಿಣಾಮದ ವಿಶ್ಲೇಶಣೆ ಇಲ್ಲದ ಸರಕಾರದ ಈ ಖಾತಾ ಕಡ್ಡಾಯ ಕ್ರಮ, ಜನರ ಮಾನಸಿಕ ನೆಮ್ಮದಿಯನ್ನು ಕಲಕಿ ಬಿಟ್ಟಿದೆ.
ಸರಕಾರದ ಅಧಿಕಾರಿಗಳು ಪ್ರತಿ ವಾರ ಪತ್ರಿಕಾಗೋಷ್ಠಿಗಳಲ್ಲಿ ಎದೆ ಉಬ್ಬಿಸಿ ಮಾತಾಡು ತ್ತಾರೆ. ಈ ಖಾತಾ ಕೊಡುತ್ತಿದ್ದೇವೆ, ಇಷ್ಟು ಲಕ್ಷ ವಿತರಣೆ ಆಗಿದೆ ಮುಂತಾದ ಲೆಕ್ಕಗಳನ್ನು ಕೊಡುತ್ತಿದ್ದಾರೆ.
ಮಾನ್ಯ ಮುಖ್ಯ ಮಂತ್ರಿಯವರು ಬಾಕಿ ಇರುವ 65 ಲಕ್ಷ ಆಸ್ತಿಗಳಿಗೆ ಈ ಖಾತಾ ನೀಡುವಂತೆ ಸೂಚಿಸಿದ್ದಾರೆ ಎನ್ನುವುದು ಪತ್ರಿಕಾ ವರದಿ. ಇವೆರಡೂ ವಿರುದ್ಧ ಸಂಗತಿಗಳೇ ಆಗಿರುವುದು ಮತ್ತೊ ಗೊಂದಲವನ್ನು ಮೂಡಿಸುತ್ತಿದೆ. ಸರಕಾರ ಕೂಡಲೇ ಈ ವಿಷಯವನ್ನು ಗಂಭೀರ ವಾಗಿ ಪರಿಗಣಿಸಬೇಕಿದೆ. ಅದೆಷ್ಟೋ ಲಕ್ಷ ಜನರ ನೆಮ್ಮದಿಯನ್ನು ಈ ಖಾತಾ ನಿಯಮ ಕೆಡಿಸಿದೆ.
ನಿಯಮಗಳನ್ನು ರೂಪಿಸುವಾಗ ಸರಿಯಾದ ಭವಿಷ್ಯದ ಚಿಂತನೆ ಇಲ್ಲದೆ ರೂಪಿಸಿರುವುದರ ಪರಿಣಾಮ ಇದು. ಹಾಗಾಗಿ ಸರಕಾರ ಒಂದು ಮಧ್ಯಂತರ ಕ್ರಮಕ್ಕೆ ಮುಂದಾಗಬೇಕಿದೆ. ಈ ಖಾತಾ ಬಗೆ ಹರಿಯದಿರುವ ಆಸ್ತಿಗಳ ನೋಂದಣಿಗೆ ಒಂದು ಮಾರ್ಗ ಸೂಚಿಯನ್ನು ರೂಪಿಸಬೇಕಿದೆ. ಈ ಕ್ರಮದಿಂದ ಸರಕಾರಕ್ಕೂ ಆದಾಯ ಬರುತ್ತದಲ್ಲ!
ಆ ದೃಷ್ಟಿಯಿಂದ ಆದರೂ ಒಂದು ಸರಿಯಾದ ಕ್ರಮಕ್ಕೆ ಜನ ಎದುರು ನೋಡುತ್ತಿದ್ದಾರೆ. ಒಂದು ಮಧ್ಯಂತರ ಕ್ರಮದ ಮೂಲಕ ಬಾಕಿ ಇರುವ ಆಸ್ತಿ ನೋಂದಣಿಗಳಿಗೆ ಪರಿಹಾರ ರೂಪಿಸಿ ಎಲ್ಲರಿಗೂ ಒಂದು ನೆಮ್ಮದಿಯನ್ನು ಸರಕಾರ ನೀಡಬೇಕಿದೆ.
ಇದನ್ನೂ ಓದಿ: Roopa Gururaj Column: ನಿರ್ವಿಕಾರಯೋಗ- ಸಮಸ್ಯೆ ಸಮಾಧಾನ !