ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌ಐರನ್‌ಮ್ಯಾನ್ ಕ್ರೀಡಾಕೂಟದ ಎಲ್ಲ ಸ್ಫರ್ಧೆ ಕೇವಲ 14 ತಾಸು 3.0 ನಿಮಿಷಗಳಲ್ಲಿ ಪೂರ್ಣ: ಮಲೇಷ್ಯಾದಲ್ಲಿ ಪಿಎಸ್‌ʼಐ ಸಂಗಮೇಶ್‌ ಐರನ್‌ ಮ್ಯಾನ್

ಕರ್ತವ್ಯದ ಒತ್ತಡದ ನಡುವೆಯೂ ಐರನ್‌ಮ್ಯಾನ್ ಮಲೇಷ್ಯಾದ ಕ್ರೀಡಾಕೂಟದಲ್ಲಿ ಕೊಲ್ಹಾರದ ಯುವ ಸಾಹಸಿ, ಪಿಎಸ್‌ಐ ಸಂಗಮೇಶ ಅನಿ ದಾಖಲೆ ನಿರ್ಮಿಸಿ ಬಸವನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಬೆಳಗಾವಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಗಮೇಶ ಅನಿ ಅವರು ಮಲೇಷ್ಯಾದ ಲಂಕಾವಿಯಲ್ಲಿ ಈಜು, ಓಟ, ಸೈಕ್ಲಿಂಗ್‌ಒಳಗೊಂಡ ಐರನ್‌ಮ್ಯಾನ್ ಕಠಿಣ ಸ್ಪರ್ಧೆಯನ್ನು ಕೇವಲ 14 ಗಂಟೆ 30 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಐರನ್‌ಮ್ಯಾನ್ ಪಟ್ಟ ಗಳಿಸಿದ್ದಾರೆ.

ಮಲೇಷ್ಯಾದಲ್ಲಿ ಪಿಎಸ್‌ʼಐ ಸಂಗಮೇಶ್‌ ಐರನ್‌ ಮ್ಯಾನ್

ಮೆಲೇಷ್ಯಾದ ಐರನ್‌ಮ್ಯಾನ್ ಸ್ಪರ್ಧೆಯಲ್ಲಿ ಸೈಕ್ಲಿಂಗ್ ಮಾಡುತ್ತಿರುವ ಪಿಎಸ್‌ಐ ಸಂಗಮೇಶ್. -

Profile
Ashok Nayak Nov 29, 2026 12:21 PM

ಮಂಜು ಕಲಾಲ ವಿಜಯಪುರ

ಕರ್ತವ್ಯದ ಒತ್ತಡದ ನಡುವೆಯೂ ಐರನ್‌ಮ್ಯಾನ್ ಮಲೇಷ್ಯಾದ ಕ್ರೀಡಾಕೂಟದಲ್ಲಿ ಕೊಲ್ಹಾರದ ಯುವ ಸಾಹಸಿ, ಪಿಎಸ್‌ಐ ಸಂಗಮೇಶ ಅನಿ ದಾಖಲೆ ನಿರ್ಮಿಸಿ ಬಸವನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಬೆಳಗಾವಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಗಮೇಶ ಅನಿ ಅವರು ಮಲೇಷ್ಯಾದ ಲಂಕಾವಿಯಲ್ಲಿ ಈಜು, ಓಟ, ಸೈಕ್ಲಿಂಗ್‌ಒಳಗೊಂಡ ಐರನ್‌ಮ್ಯಾನ್ ಕಠಿಣ ಸ್ಪರ್ಧೆಯನ್ನು ಕೇವಲ 14 ಗಂಟೆ 30 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಐರನ್‌ಮ್ಯಾನ್ ಪಟ್ಟ ಗಳಿಸಿದ್ದಾರೆ.

ಪೊಲೀಸ್ ಇಲಾಖೆಯ ಒತ್ತಡದ ಕರ್ತವ್ಯದ ನಡುವೆಯೂ ಸಂಗಮೇಶ ಅವರು ತಮ್ಮ ತರಬೇತಿ ಯನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ಸಮಯದ ಸದ್ಬಳಕೆ, ಕಠಿಣ ಅಭ್ಯಾಸ ಮತ್ತು ಸಾಧಿಸುವ ಛಲವನ್ನು ಜೀವನದ ಭಾಗವಾಗಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಕೃಷ್ಣಾ ನದಿಯ ದಡದ ಕೊಲ್ಹಾರದಲ್ಲಿ ಜನಿಸಿದ ಸಂಗಮೇಶ ಅನಿ ಅವರ ಈ ಸಾಧನೆ ಸ್ಥಳೀಯರು ಹಾಗೂ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿ. ಲಿಂಗಯ್ಯ ಸ್ಮರಣಾರ್ಥ ನಿರ್ಮಿಸಿರುವ ಶ್ರೀ ಯೋಗಿ ನಾರಾಯಣ ನೂತನ ಬಸ್ ನಿಲ್ದಾಣ ಉದ್ಘಾಟನೆ

ಕರ್ತವ್ಯ ಮತ್ತು ವೈಯಕ್ತಿಕ ಕನಸುಗಳ ನಡುವೆ ಸಮತೋಲನ ಸಾಧಿಸಿ ಗುರಿ ಮುಟ್ಟಿರುವ ಅವರು ಯುವಜನತೆಗೆ ಆರೋಗ್ಯ, ಕ್ರೀಡೆ, ಶಿಸ್ತು ಮತ್ತು ಪರಿಶ್ರಮದ ಮಹತ್ವವನ್ನು ಸಾರಿದ್ದಾರೆ. ಕೊಲ್ಹಾರದ ಈ ಸಾಹಸಿ ಪುತ್ರನ ಸಾಧನೆ ಬಸವನಾಡಿನ ಹೆಮ್ಮೆಯಾಗಿದ್ದು, ಇನ್ನಷ್ಟು ಯುವಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ. ಸಂಗಮೇಶ ಅನಿ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

ಹೇಗೆ ಐರನ್‌ಮ್ಯಾನ್?

ಐರನ್‌ಮ್ಯಾನ್ ಸ್ಪರ್ಧೆಯು ಮೆಲೇಷ್ಯಾದಲ್ಲಿ ನಡೆಯುವ ಅಪರೂಪದ ಕ್ರೀಡಾಕೂಟ. ಸೈಕ್ಲಿಂಗ್, ಓಟ, ಸಮುದ್ರ ಈಜು ಸೇರಿ ಹಲವು ಸ್ಪರ್ಧೆಗಳಲ್ಲಿ ಏಕಕಾಲಕ್ಕೆ ಒಬ್ಬ ಅಥ್ಲೀಟ್ ಪಾಲ್ಗೊಳ್ಳುವ ಕ್ರೀಡಾ ಹಬ್ಬ. ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪಿಎಸ್‌ಐ ಸಂಗಮೇಶ ಅನಿ 3.8 ಕಿ. ಮೀ ಅರಬ್ಬಿ ಸಮುದ್ರದಲ್ಲಿ ಈಜು, ಬಳಿಕ 180 ಕಿ.ಮೀ. ಸೈಕ್ಲಿಂಗ್ ಹಾಗೂ 42.2 ಕಿ.ಮೀ. ಮ್ಯಾರಥಾನ್ ಓಟ ಮಾಡಿದ್ದಾರೆ. ಕೇವಲ 14 ಗಂಟೆ ೩೦ ನಿಮಿಷಗಳಲ್ಲಿ ಸರ್ಧೆಯ ಎಲ್ಲ ಸವಾಲುಗಳನ್ನು ಪೂರೈಸಿ 226 ಕಿ.ಮೀ.ದೂರವನ್ನು ಕ್ರಮಿಸಬೇಸಿ ಸಾಧನೆ ಮಾಡಿದ್ದಾರೆ. ಕಠಿಣ ಸವಾಲನ್ನು ಯಶಸ್ವಿಯಾಗಿ ಎದುರಿಸಿ ಗುರಿ ತಲುಪಿರುವುದು ಅವರ ಅಸಾಧಾರಣ ದೈಹಿಕ ಸಾಮರ್ಥ್ಯ, ಶಿಸ್ತು, ಸಂಕಲ್ಪ ಹಾಗೂ ನಿರಂತರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

PSI Sangamesh 2

ಕುಟುಂಬಸ್ಥರು, ಹಿರಿಯ ಅಧಿಕಾರಿಗಳ ಸಾಥ್

ಆರಂಭದಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ದೈಹಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡು ಉತ್ತಮ ಫಿಟ್ನೆಸ್ ಹೊಂದಿದ್ದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಸಾಧನೆ ಮಾಡಿರುವವರು ಯಾರೂ ಇರಲಿಲ್ಲ ಎಂಬ ಹಿನ್ನೆಲೆಯಲ್ಲಿ, ಕಳೆದ ಒಂದೂವರೆ ವರ್ಷದಿಂದ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿದ್ದೆ. ನನ್ನ ಈ ಸಾಧನೆಗೆ ತಂದೆ-ತಾಯಿ, ಬೆಳಗಾವಿ ನಗರ ಪೊಲೀಸ್ ಅಧಿಕಾರಿಗಳು ಹಾಗೂ ಶಾಸಕ ರಾಜು ಶೇಟ್ ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರ ಪ್ರೋತ್ಸಾಹ, ಸಹಕಾರ ಮತ್ತು ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪಿಎಸ್‌ಐ ಸಂಗಮೇಶ ಅನಿ ಹೇಳಿದರು.