ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ; 21 ಮಂದಿ ಸಜೀವ ದಹನ, 28 ನಾಪತ್ತೆ
ಜನವರಿ 26 ರಂದು ಕೋಲ್ಕತ್ತಾ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಕ್ಕೆ ಏರಿದ್ದು, ಸುಟ್ಟುಹೋದ ಕಟ್ಟಡಗಳಿಂದ ಇನ್ನೂ 13 ಶವಗಳು ಪತ್ತೆಯಾಗಿವೆ, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಕೊಲ್ಕತ್ತಾ: ಜನವರಿ 26 ರಂದು ಕೋಲ್ಕತ್ತಾ (Kolkata Fire Accident) ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಕ್ಕೆ ಏರಿದ್ದು, ಸುಟ್ಟುಹೋದ ಕಟ್ಟಡಗಳಿಂದ ಇನ್ನೂ 13 ಶವಗಳು ಪತ್ತೆಯಾಗಿವೆ, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಆನಂದಪುರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಎರಡು ಗೋದಾಮುಗಳು ಮತ್ತು ಮೊಮೊ ಕಂಪನಿಯ ಒಂದು ಉತ್ಪಾದನಾ ಘಟಕ ಸುಟ್ಟು ಭಸ್ಮವಾಯಿತು.
ಘಟನೆಯ ಸ್ವರೂಪ ಮತ್ತು ಹಾನಿಯ ಪ್ರಮಾಣವನ್ನು ಗಮನಿಸಿದರೆ, ಸಾವು ನೋವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಬಿಜೆಪಿ ನಾಯಕರ ಪ್ರಸ್ತಾವಿತ ಭೇಟಿಗೆ ಮುಂಚಿತವಾಗಿ, ಬುಧವಾರ ಮಧ್ಯರಾತ್ರಿಯಿಂದ ಆ ಪ್ರದೇಶದಲ್ಲಿ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.
ಪತ್ತೆಯಾಗಿರುವ 21 ದೇಹಗಳು ಅಥವಾ ದೇಹದ ಭಾಗಗಳ ಡಿಎನ್‌ಎ ಮ್ಯಾಪಿಂಗ್ ಗುರುವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿಯ ತೀವ್ರತೆ ಮತ್ತು ಹಾನಿಯ ಪ್ರಮಾಣ ಗಮನಿಸಿದ್ರೆ, ಸಾವಿನೋವು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ದಿನೇದಿನೆ ಖಾಸಗಿ ಬಸ್‌ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಡಿ.25ರಂದು ಚಿತ್ರದುರ್ಗದ ಬಳಿ ಖಾಸಗಿ ಸ್ಲೀಪರ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿಯಾಗಿ, ಬೆಂಕಿ ಹೊತ್ತಿ ಉರಿದಿತ್ತು. ಈ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದರು. ಆ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಇನ್ನೊಂದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. . ಶಿವಮೊಗ್ಗದ ಹೊಸನಗರದ ನಿಟ್ಟೂರಿನಿಂದ ಜ.27ರಂದು ಬೆಂಗಳೂರಿಗೆ ಬರುತ್ತಿತ್ತು. ಆದರೆ ಹೊಸನಗರ ಬಳಿಯೇ ಬೆಂಕಿ ಕಾಣಿಸಿಕೊಂಡಿತ್ತು. ಈ ಬಸ್‌ನಲ್ಲಿ 36 ಪ್ರಯಾಣಿಕರು ಇದ್ದರು. ರಾತ್ರಿ 10.30ರ ಸುಮಾರಿಗೆ ಮೊದಲು ಚಾಲಕ ಕುಳಿತುಕೊಳ್ಳುವ ಜಾಗದಲ್ಲಿ ಹೊಗೆ ಕಾಣಿಸಿಕೊಂಡಿತು.
ಅದನ್ನ ನೋಡಿ ಡ್ರೈವರ್ ಗಾಬರಿಯಾಗಿ ಬಸ್ ಮೇಲೆ ನಿಯಂತ್ರಣ ಕಳೆದುಕೊಂಡರು. ಹೀಗಾಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ನಿಂತಿತು. ನಂತರ ಬಸ್ ನೋಡನೋಡುತ್ತಿದ್ದಂತೆ ಧಗಧಗನೇ ಹೊತ್ತಿ ಉರಿದಿದೆ. ಆ ಸಮಯದಲ್ಲಿ ಪ್ರಯಾಣಿಕರು ಇನ್ನೂ ನಿದ್ದೆಗೆ ಜಾರಿರಲಿಲ್ಲ. ಹೀಗಾಗಿ ಎಲ್ಲರೂ ಕೂಡಲೇ ಬಸ್‌ನಿಂದ ಹೊರಗೆ ಓಡಿದ್ದಾರೆ. ಎ