Bhau Gang: 5 ಕೋಟಿ ರೂ. ಕೊಡಿ...ಇಲ್ಲದಿದ್ದರೆ ಶೂಟ್ ಮಾಡ್ತೇವೆ... ಖ್ಯಾತ ಯೂಟ್ಯೂಬರ್‌ಗೆ ಭಾವು ಗ್ಯಾಂಗ್‌ನಿಂದ ಬೆದರಿಕೆ
ಹೆಸರಾಂತ ಯೂಟ್ಯೂಬ್ ಸೌರವ್ ಜೋಶಿ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಯಿಂದ ಕೊಲೆ ಬೆದರಿಕೆ ಮತ್ತು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮತ್ತೇ ಜೋಶಿಯನ್ನು ಗುರಿಯಾಗಿಸಿಕೊಂಡಿರುವ ಯಾರೋ ಕಿಡಿಗೇಡಿಗಳು ಇಮೇಲ್ ಮೂಲಕ 5 ಕೋಟಿ ರೂ. ಗೆ ಬೆದರಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಗುಂಡಿಕ್ಕುವ ಎಚ್ಚರಿಕೆ ನೀಡಿದ್ದಾನೆ. ಸೆಪ್ಟೆಂಬರ್ 15ರಂದು ಇಮೇಲ್ ಮೂಲಕ ‘ಛೋಟಾ ಡಾನ್’ ನೇತೃತ್ವದ ಗ್ಯಾಂಗ್ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿ ಈ ರೀತಿ ಜೀವ ಬೆದರಿಕೆ ಮೇಲ್ ಮಾಡಿದ್ದು, ಜೋಶಿ ಅವರು ತಕ್ಷಣ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೌರವ್ ಜೋಶಿ -

ಹಲ್ದ್ವಾನಿ: ಉತ್ತರಾಖಂಡ್‌ನ (Uttarakhand) ಹಲ್ದ್ವಾನಿಯ ಜನಪ್ರಿಯ ಯೂಟ್ಯೂಬರ್ (YouTuber) ಮತ್ತು ಕಂಟೆಂಟ್ ಕ್ರಿಯೇಟರ್ ಸೌರವ್ ಜೋಶಿ (Sourav Joshi) ಅವರಿಗೆ ‘ಭಾವು ಗ್ಯಾಂಗ್’ ಹೆಸರಿನಲ್ಲಿ 5 ಕೋಟಿ ರೂ. ಬೆದರಿಕೆ (Threat) ಇಮೇಲ್ ಬಂದಿದೆ. ಸೆಪ್ಟೆಂಬರ್ 15ರಂದು ಇಮೇಲ್ ಮೂಲಕ ‘ಛೋಟಾ ಡಾನ್’ ನೇತೃತ್ವದ ಗ್ಯಾಂಗ್ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿ, ಹಣ ನೀಡದಿದ್ದರೆ ಗುಂಡಿಕ್ಕುವ ಎಚ್ಚರಿಕೆ ನೀಡಿದ್ದಾನೆ. ಜೋಶಿ ಅವರು ತಕ್ಷಣ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಮೇಲ್‌ನಲ್ಲಿ, “ನೀನು 5 ಕೋಟಿ ರೂ. ನೀಡದಿದ್ದರೆ ಗುಂಡಿಕ್ಕುತ್ತೇನೆ” ಎಂದು ಧಮ್ಕಿ ಹಾಕಲಾಗಿದ್ದು, ಜೋಶಿ ಅವರ ಹಲ್ದ್ವಾನಿ ರಾಂಪುರ್ ರಸ್ತೆಯ ಒಲಿವಿಯಾ ಕಾಲೊನಿಯಲ್ಲಿರುವ ಮನೆಯ ವಿಳಾಸವನ್ನು ಉಲ್ಲೇಖಿಸಲಾಗಿದೆ. ಸೌರವ್ ಜೋಶಿ, ತನ್ನ ‘ಸೌರವ್ ಜೋಶಿ ವ್ಲಾಗ್ಸ್’ ಚಾನಲ್ ಮೂಲಕ 29 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಈ ಧಮ್ಕಿಯಿಂದ ಆತನ ಕುಟುಂಬದವರು ಆತಂಕಗೊಂಡಿದ್ದು, ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಸಿಟಿ ಎಸ್‌ಪಿ ಪ್ರಕಾಶ್ ಚಂದ್ರ, “ಈ ದೂರನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸೈಬರ್ ತಜ್ಞರು ಇಮೇಲ್ ಮೂಲವನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ಡಿಜಿಟಲ್ ಟ್ರ್ಯಾಕ್‌ಗಳನ್ನು ಅನ್ವೇಷಿಸುತ್ತಿದ್ದಾರೆ. ಕೇಂದ್ರೀಯ ಏಜೆನ್ಸಿಗಳೊಂದಿಗೆ ಸಮನ್ವಯದಲ್ಲಿದ್ದೇವೆ, ಏಕೆಂದರೆ ವಿದೇಶಿ ಸಂಬಂಧವಿರಬಹುದು” ಎಂದಿದ್ದಾರೆ. ಇಮೇಲ್‌ನ ಮೂಲವನ್ನು ಗುರುತಿಸಲು ಸೈಬರ್ ಕ್ರೈಮ್ ತಂಡಗಳು ಚುರುಕುಗೊಂಡಿವೆ.
ಈ ಸುದ್ದಿಯನ್ನೂ ಓದಿ: Kantara: Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಹಾಡುಗಳು ಇನ್ನೂ ಯಾಕೆ ರಿಲೀಸ್ ಆಗಿಲ್ಲ: ಈ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ನವೆಂಬರ್ 2024ರಲ್ಲಿ ಜೋಶಿ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 2 ಕೋಟಿ ರೂ. ಬೆದರಿಕೆ ಬಂದಿತ್ತು. ‘ಕರಣ್ ಬಿಷ್ಣೋಯ್’ ಎಂದು ಸಹಿ ಮಾಡಿದ ಪತ್ರದಲ್ಲಿ, “5 ದಿನಗಳಲ್ಲಿ ಹಣ ನೀಡದಿದ್ದರೆ ಒಬ್ಬೊಬ್ಬರಾಗಿ ನಿನ್ನ ಕುಟುಂಬವನ್ನು ಕೊಂದುಹಾಕುತ್ತೇನೆ” ಎಂದು ಬೆದರಿಕೆ ಹಾಕಲಾಗಿತ್ತು. ಉತ್ತರಪ್ರದೇಶದ ಬುದೌನ್‌ನ 19 ವರ್ಷದ ಅರುಣ್ ಕುಮಾರ್ ಎಂಬ ಯುವಕ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿತ್ತು. ಮೊಹಾಲಿ ಹೋಟೆಲ್‌ನ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆರೋಪಿ ಉದ್ಯೋಗ ಕಳೆದುಕೊಂಡ ನಂತರ ಈ ಕೃತ್ಯಕ್ಕೆ ಎಸಗಿದ್ದ.
ಸೌರವ್ ಜೋಶಿ ಅವರ ಚಾನಲ್‌ನಲ್ಲಿ ಲೈಫ್‌ಸ್ಟೈಲ್ ವ್ಲಾಗ್‌ಗಳು ಮತ್ತು ಸಂಬಂಧಿತ ವಿಡಿಯೋಗಳಿಂದ ಅವರು ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಈ ಬೆದರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಜನಪ್ರಿಯ ವ್ಯಕ್ತಿಗಳ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟಿಸಿದೆ. ಜೋಶಿ ಅವರು ತಮ್ಮ ವಿಡಿಯೋಗಳಲ್ಲಿ ಈ ಘಟನೆಯ ಬಗ್ಗೆ ಮಾತನಾಡಿ, ಪೊಲೀಸರ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ.