#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

PM Modi-Trump Meet: ಟ್ರಂಪ್‌ ಜೊತೆಗೆ ಔತಣಕೂಟದಲ್ಲಿ ಭಾಗಿಯಾಗಲಿರುವ ಮೋದಿ- ಸಂಜೆ ಉಭಯ ನಾಯಕರ ಜಂಟಿ ಸುದ್ದಿಗೋಷ್ಠಿ

ನರೇಂದ್ರ ಮೋದಿ ಇಂದು(ಫೆ.13) ಅಮೆರಿಕಕ್ಕೆ ಭೇಟಿ ನೀಡಿದ್ದು, ಇಂದು ಸಂಜೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದು, ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಸುದ್ದಿಗೋಷ್ಠಿಯ ನಂತರ ಟ್ರಂಪ್ ಮೋದಿ ಅವರಿಗೆ ಔತಣಕೂಟವನ್ನು ಆಯೋಜಿಸಿದ್ದಾರೆ.

ಮೋದಿಗಾಗಿ ಔತಣಕೂಟ ಆಯೋಜಿಸಿದ ಡೊನಾಲ್ಡ್‌ ಟ್ರಂಪ್!

ಡೊನಾಲ್ಡ್‌ ಟ್ರಂಪ್‌ ಜೊತೆಗೆ ಪ್ರಧಾನಿ ಮೋದಿ

Profile Deekshith Nair Feb 13, 2025 2:16 PM

ವಾಷಿಂಗ್ಟನ್: ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಷಿಂಗ್ಟನ್‌ನ(Washington) ಡಿಸಿಗೆ ಬಂದಿಳಿದಿದ್ದು, ಅಲ್ಲಿ ಅವರಿಗೆ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತ ದೊರೆತಿದೆ. ಫ್ರಾನ್ಸ್‌(France) ಪ್ರವಾಸ ಮುಗಿಸಿ ನೇರವಾಗಿ ಅಮೆರಿಕಕ್ಕೆ ಬಂದಿಳಿದಿರುವ ಮೋದಿ, ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(PM Modi-Trump Meet) ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಇದಾದ ಬಳಿಕ ಉಭಯ ನಾಯಕರು ಸಂಜೆ 5 ಗಂಟೆಗೆ ಸರಿಯಾಗಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಟ್ರಂಪ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದು, ಸುದ್ದಿಗೋ‍ಷ್ಠಿಯ ನಂತರ ಅವರು ಟ್ರಂಪ್‌ ಆಯೋಜಿಸಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.

ಮೋದಿ ಅವರು ಫ್ರಾನ್ಸ್‌ನಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಭಾಗಿಯಾಗಿ ಸಹ ಅಧ್ಯಕ್ಷತೆ ವಹಿಸಿದ್ದರು. ಸಭೆಯ ನಂತರ ಮಾರ್ಸೆಲ್ಸ್‌ಗೆ ಭೇಟಿ ನೀಡಿ ಮಹಾ ಯುದ್ಧಗಳಲ್ಲಿ ಮಡಿದ ಭಾರತೀಯ ಸೈನಿಕರ ಸ್ಮಾರಕಗಳಿಗೆ ಗೌರವ ಸಲ್ಲಿಸಿದರು. ಫ್ರಾನ್ಸ್‌ ನಾಯಕರೊಂದಿಗೆ ಚರ್ಚೆ ನಡೆಸಿ ಅಲ್ಲಿಂದ ನೇರವಾಗಿ ಅಮೆರಿಕಗೆ ಬಂದಿರುವ ಮೋದಿ ಟ್ರಂಪ್‌ ಅವರನ್ನು ಭೇಟಿಯಾಗಲಿದ್ದಾರೆ.



ಮೋದಿ ಕಾರ್ಯಕ್ರಮದ ವೇಳಾಪಟ್ಟಿ

  • ಇಂದು ಸಂಜೆ 4 ಗಂಟೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ
  • ಸಂಜೆ 5 ಗಂಟೆಯಿಂದ 5.40ರವರೆಗೆ ಇಬ್ಬರೂ ನಾಯಕರ ಜಂಟಿ ಪತ್ರಿಕಾಗೋಷ್ಠಿ
  • ಸಂಜೆ 5.40 ಗಂಟೆಗೆ ಔತಣಕೂಟದಲ್ಲಿ ಭಾಗಿ

ಡಿಎನ್‌ಐ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಜೊತೆ ಮೋದಿ ಮಾತುಕತೆ

ಅಮೆರಿಕಕ್ಕೆ ತೆರಳಿರುವ ಪ್ರಧಾನಿ ಎರಡು ದಿನ ಅಲ್ಲಿಯೇ ಇರಲಿದ್ದಾರೆ. ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ (ಡಿಎನ್‌ಐ) ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಭಾರತ–ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೋದಿ ಅಮೆರಿಕ ಅಧ್ಯಕ್ಷರ ಅತಿಥಿ ಗೃಹ ಬ್ಲೇರ್‌ ಹೌಸ್‌ನಲ್ಲಿ ತಂಗಿದ್ದಾರೆ. ಅಮೆರಿಕ ಭೇಟಿ ಹಾಗೂ ತುಳಸಿ ಗಬ್ಬಾರ್ಡ್ ಅವರ ಭೇಟಿಯಾದ ಕ್ಷಣದ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಲಸಿ ಗಬ್ಬಾರ್ಡ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಭಾರತ-ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Modi Meets JD Vance: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಪ್ರಧಾನಿ ಮೋದಿ

ಸಂಜೆ ಟ್ರಂಪ್‌ ಅವರನ್ನು ಮೋದಿ ಭೇಟಿಯಾಗಲಿದ್ದಾರೆ. ಎರಡೂ ದೇಶಕ್ಕೂ ಈ ಭೇಟಿ ಮಹತ್ವದಾಗಿದ್ದು, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಪರಿಸ್ಥಿತಿಯ ಕುರಿತು ಚರ್ಚೆಗಳ ಜೊತೆಗೆ ಹಲವಾರು ದ್ವಿಪಕ್ಷೀಯ ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದೆ. ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ತಂತ್ರಜ್ಞಾನ ಮತ್ತು ವಲಸೆ ಮುಂತಾದ ಕ್ಷೇತ್ರಗಳಲ್ಲಿ ಭಾರತ- ಅಮೆರಿಕದ ಸಹಕಾರ ಹೆಚ್ಚಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಬಹುದು ಎಂದು ಹೇಳಲಾಗಿದೆ.