ರೋಗನಿರೋಧಕ ಶಕ್ತಿ, ಒತ್ತಡ ನಿವಾರಣೆಗೆ ರಾಮಬಾಣ ಈ ಗಿಡಮೂಲಿಕೆಗಳು!
Health Tips: ಭಾರತೀಯ ಸಂಸ್ಕೃತಿಯಲ್ಲಿ ಗಿಡಮೂಲಿಕೆಗಳಿಗೆ ಹಿಂದಿನಿಂದಲೂ ಪ್ರಾಮುಖ್ಯತೆ ಇದೆ.ಇವುಗಳು ಅಡುಗೆಯ ರುಚಿ ಹೆಚ್ಚು ಮಾಡುವುದಲ್ಲದೆ ವೈದ್ಯಕೀಯವಾಗಿ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು,ಜೀರ್ಣಕ್ರಿಯೆ ಯನ್ನು ಸುಧಾರಿಸಲು, ಉರಿಯೂತವನ್ನು ಕಡಿಮೆ ಮಾಡುವ ಹಾಗೂ ಚಯಾಪಚಯವನ್ನು ಸಮತೋಲನಗೊಳಿಸುವ ಆರೋಗ್ಯವನ್ನು ಬೆಂಬಲಿಸುತ್ತವೆ.
ಇಂಟರ್ ನೆಟ್ ಚಿತ್ರ -
ನವದೆಹಲಿ,ಸೆ.1: ಭಾರತೀಯ ಸಂಸ್ಕೃತಿಯಲ್ಲಿ ಗಿಡಮೂಲಿಕೆಗಳಿಗೆ ಹಿಂದಿನಿಂದಲೂ ಪ್ರಾಮುಖ್ಯತೆ ಇದೆ.ಇವುಗಳು ಅಡುಗೆಯ ರುಚಿ ಹೆಚ್ಚು ಮಾಡುವುದಲ್ಲದೆ ವೈದ್ಯಕೀಯವಾಗಿ (Health Tips) ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ಉರಿಯೂತವನ್ನು ಕಡಿಮೆ ಮಾಡುವ ಹಾಗೂ ಚಯಾಪಚಯವನ್ನು ಸಮತೋಲನಗೊಳಿಸುವ ಆರೋಗ್ಯವನ್ನು ಬೆಂಬಲಿಸುತ್ತವೆ. ಆಂಟಿ ಆಕ್ಸಿಡೆಂಟ್‌ಗಳು, ಜೀವಸತ್ವಗಳು, ಖನಿಜಂಶಗಳು ಹಾಗೂ ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿರುವ ಈ ಗಿಡಮೂಲಿಕೆಗಳು ಹಲವು ರೋಗಗಳಿಗೆ ರಾಮಬಾಣವಾಗಿದೆ. ಹಾಗಾಗಿ ದಿನ ನಿತ್ಯದ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಈ ಗಿಡಮೂಲಿಕೆ ಸೇವನೆ ಮಾಡಲು ತಜ್ಞರು ಸಲಹೆ ನೀಡಿದ್ದಾರೆ.
ತುಳಸಿ:
ತುಳಸಿಯನ್ನು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಗಿಡ ಎಂದು ಪೂಜಿಸಲಾಗುತ್ತದೆ. ಧಾರ್ಮಿಕ ವಾಗಿ ಪೂಜಿಸುವುದಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಇದರ ಮಹತ್ವ ಹೆಚ್ಚಿನದ್ದಾಗಿದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು, ಶ್ವಾಸಕೋಶದ ಆರೋಗ್ಯವನ್ನು ಬೆಂಬಲಿಸುವುದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮತ್ತು ಒತ್ತಡವನ್ನು ಕಡಿಮೆ ಮಾಡುವುದು ಸೇರಿದಂತೆ ಇವುಗಳ ಲಾಭ ಅಗಾಧವಾಗಿದೆ. ತಾಜಾ ಎಲೆಗಳನ್ನು ಅಗಿಯುವುದು, ತುಳಸಿ ಚಹಾವನ್ನು ತಯಾರಿಸುವುದು ಅಥವಾ ನೀರಿಗೆ ತುಳಸಿ ರಸ ಹಾಕಿ ಸೇವನೆ ಮಾಡಬಹುದು.
ಅಮೃತಬಳ್ಳಿ:
ಆಯುರ್ವೇದದಲ್ಲಿ ಅಮೃತಬಳ್ಳಿಗೆ ವಿಶೇಷವಾದ ಸ್ಥಾನ ಮಾನವಿದೆ. ವೈದ್ಯಕೀಯವಾಗಿಯೂ ಇದರ ಲಾಭ ಬಹಳಷ್ಟಿದೆ. ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಇದು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 1–2 ಟೀ ಚಮಚ ಇದರ ರಸವನ್ನು ಕುಡಿಯಿರಿ ಅಥವಾ ಖಾಲಿ ಹೊಟ್ಟೆಯಲ್ಲಿ ಇದರ ಮಾತ್ರೆಯನ್ನು ತೆಗೆದುಕೊಳ್ಳಬಹುದು.
Health Tips: ಆಯಾಸವೇ? ದೈಹಿಕ, ಮಾನಸಿಕ ಚೈತನ್ಯಕ್ಕೆ ಕಪ್ಪು ಎಳ್ಳು ಸೇವಿಸಿ
ನುಗ್ಗೆ ಎಲೆ:
ನುಗ್ಗೆ ಎಲೆಗಳು ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ, ಇದನ್ನು "ಪೌಷ್ಠಿಕಾಂಶದ ಗಣಿ" ಎಂದೆ ಕರೆಯಲಾಗುತ್ತದೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಿ ಇದು ಮಧುಮೇಹ ಮತ್ತು ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.1 ಟೀ ಚಮಚ ನುಗ್ಗೆ ಪುಡಿಯನ್ನು ಸ್ಮೂಥಿ ಅಥವಾ ಉಗುರುಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯಬಹುದು.
ಅಶ್ವಗಂಧ:
"ಆಯುರ್ವೇದದ ಅಡಾಪ್ಟೋಜೆನ್" ಎಂದು ಕರೆಯಲ್ಪಡುವ ಅಶ್ವಗಂಧವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಹಾರ್ಮೋನ್ ಸಮತೋಲನ ಗೊಳಿಸಿ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. 1 ಟೀಚಮಚ ಪುಡಿಗೆ ಬೆಚ್ಚಗಿನ ಹಾಲು ಅಥವಾ ನೀರಿಗೆ ಜೇನುತುಪ್ಪ ಸೇರಿಸಿ ಸೇವಿಸಿ.
ಅರಿಶಿನ:
ಅರಶಿನ ಉರಿಯೂತ, ಉತ್ಕರ್ಷಣ ನಿರೋಧಕ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹವನ್ನು ರಕ್ಷಣೆ ಮಾಡುತ್ತದೆ. ಇದರಲ್ಲಿರುವ ಸಂಯುಕ್ತವಾದ ಕರ್ಕ್ಯುಮಿನ್, ಉರಿಯೂತವನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಹೃದಯ ರಕ್ತನಾಳದ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿಗೆ ಒಂದು ಟೀಚಮಚ ಸೇರಿಸಿ ಅಥವಾ ಅಡುಗೆಯಲ್ಲಿ ಅರಿಶಿನವನ್ನು ಬಳಸಿ.