Weight Loss Tips: ತೂಕ ಇಳಿಸಿಕೊಳ್ಳಬೇಕೇ? ದಿನನಿತ್ಯ ಒಂದು ಕಪ್ ಮೊಸರು ಸೇವಿಸಿ!
ನೈಸರ್ಗಿಕ ವಿಧಾನದಿಂದಲೂ ತೂಕ ಇಳಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅದರಲ್ಲೂ ತೂಕ ಇಳಿಕೆಗೆ ಮೊಸರು ಬಹಳಷ್ಟು ಪರಿಣಾಮಕಾರಿಯಾಗಿದ್ದು ಮೊಸರಿನಲ್ಲಿ ಕಂಡು ಬರುವ ಪೋಷಕಾಂಶಗಳು ತೂಕ ಇಳಿಕೆಗೆ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಮೊಸರಿನಲ್ಲಿ ಇರುವ ಪ್ರೋಟೀನ್ ತೂಕ ನಷ್ಟಕ್ಕೆ ಸಹಕಾರಿಯಾಗಿದ್ದು ತೂಕ ಇಳಿಸಿಕೊಳ್ಳಬೇಕು ಎಂದು ಇದ್ದವರು ದಿನ ನಿತ್ಯ ಅಗತ್ಯಕ್ಕೆ ಅನುಗುಣವಾಗಿ ಮೊಸರು ಸೇವನೆ ಮಾಡಬಹುದು.

curd weight loss

ನವದೆಹಲಿ: ಅನಾರೋಗ್ಯಕರ ಆಹಾರ ಪದ್ದತಿಯಿಂದ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು(Weight Loss Tips) ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದು ಎಷ್ಟೇ ಪ್ರಯತ್ನಿಸಿದರೂ ತೂಕ ಕಮ್ಮಿಯಾಗುತ್ತಿಲ್ಲ ಎಂದು ಜಿಮ್, ಡಯೆಟ್ ಮಾಡುವವರು ಇದ್ದಾರೆ. ಆದರೆ ನೈಸರ್ಗಿಕ ವಿಧಾನದಿಂದಲೂ ತೂಕ ಇಳಿಸಿ ಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅದರಲ್ಲೂ ತೂಕ ಇಳಿಕೆಗೆ ಮೊಸರು ಬಹಳಷ್ಟು ಪರಿಣಾಮಕಾರಿಯಾಗಿದ್ದು ಮೊಸರಿನಲ್ಲಿ ಕಂಡು ಬರುವ ಪೋಷಕಾಂಶಗಳು ತೂಕ ಇಳಿಕೆಗೆ ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಮೊಸರಿನಲ್ಲಿ ಇರುವ ಪ್ರೋಟೀನ್ ತೂಕ ನಷ್ಟಕ್ಕೆ ಸಹಕಾರಿಯಾಗಿದ್ದು ತೂಕ ಇಳಿಸಿಕೊಳ್ಳಬೇಕು ಎಂದು ಇದ್ದವರು ದಿನ ನಿತ್ಯ ಅಗತ್ಯಕ್ಕೆ ಅನುಗುಣವಾಗಿ ಮೊಸರು ಸೇವನೆ ಮಾಡಬಹುದು.
ಮೊಸರು ಪ್ರೋಬಯಾಟಿಕ್ ಗುಣಗಳನ್ನು ಹೊಂದಿದೆ:
ಮೊಸರು ಪ್ರೋಬಯಾಟಿಕ್ ಮತ್ತು ಪ್ರೋಟೀನ್‌ನಂತಹ ಅದ್ಭುತ ಪೋಷಕಾಂಶಗಳನ್ನು ಹೊಂದಿದ್ದು ಇದು ತೂಕ ನಷ್ಟಕ್ಕೆ ಬಹಳಷ್ಟು ಪರಿಣಾಮಕಾರಿಯಾಗಿದೆ. ಅದರ ಜೊತೆ ಇದು ಕಡಿಮೆ ಕ್ಯಾಲೋರಿಗಳನ್ನು ಸಹ ಹೊಂದಿದ್ದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಮೊಸರು ಉತ್ತಮ ಆಹಾರ ಪದಾರ್ಥ ವಾಗಿದೆ. ಇದು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು, ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರೋಬಯಾಟಿಕ್ ಗಳನ್ನು ಒಳಗೊಂಡಿದೆ, ಇವೆಲ್ಲವೂ ಕೂಡ ನಿಮ್ಮ ತೂಕವನ್ನು ಕಮ್ಮಿ ಮಾಡಲು ಸಹಾಯ ಮಾಡಲಿದೆ.
ಮೊಸರಿನಲ್ಲಿ ಕ್ಯಾಲೋರಿ ಕಡಿಮೆ:
ಹೆಚ್ಚು ಕ್ಯಾಲೊರಿ ಇರುವ ಆಹಾರಗಳನ್ನು ಸೇವಿಸಿದರೆ, ತೂಕ ಹೆಚ್ಚಾ ಗಲಿದೆ.ಆದರೆ ಕಡಿಮೆ ಕ್ಯಾಲೊರಿ ಇರುವ ಆಹಾರವ್ನು ಸೇವಿಸಿದರೆ ತೂಕ ವನ್ನು ಕಡಿಮೆ ಮಾಡಿಕೊಳ್ಳಬಹುದು. 100 ಗ್ರಾಂ ಮೊಸರಿನಲ್ಲಿ 98 ರಷ್ಟು ಕ್ಯಾಲೊರಿಗಳು ಇರಲಿದ್ದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:
ಮೊಸರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲಿದ್ದು ಇದು ಆಹಾರವನ್ನು ಶಕ್ತಿಯನ್ನಾಗಿ ಬದಲಾಯಿಸುತ್ತದೆ. ಮೊಸರು ಕ್ಯಾಲ್ಸಿಯಂ ಅನ್ನು ಹೆಚ್ಚಾಗಿ ಹೊಂದಿರಲಿದ್ದು ನಿಮ್ಮ ದೇಹದಾದ್ಯಂತ ಹೆಚ್ಚು ಕ್ಯಾಲೊರಿಗಳು ಸಂಗ್ರಹ ಆಗಿದ್ದರೆ ಇದು ತೆಗೆದು ಹಾಕಲು ಸಹಕಾರಿ ಯಾಗಲಿದೆ.
ಹೈಡ್ರೇಟಿಂಗ್ ಮತ್ತು ರಿಫ್ರೆಶ್:
ಹೆಚ್ಚು ನೀರು ಇರುವ ಆಹಾರಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಅದರ ಜೊತೆ ಹಸಿವನ್ನು ಕಡಿಮೆ ಮಾಡುತ್ತದೆ. ಮೊಸರು ನೀರಿನ ಅಂಶ ಒಳಗೊಂಡಿರುವುದರಿಂದ ಮತ್ತು ಕಡಿಮೆ ಕ್ಯಾಲೋರಿ ಗಳನ್ನು ಹೊಂದಿರಿವುದರಿಂದ ನಿಮ್ಮ ತೂಕ ನಷ್ಟ ಆಹಾರದಲ್ಲಿ ಸೇರಿಸಬಹುದು. ಇದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡು ತ್ತದೆ ಮತ್ತು ಸರಿಯಾದ ಚಯಾಪಚಯ ಕ್ರಿಯೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
ಮೊಸರಿನಲ್ಲಿ ಪ್ರೋಟೀನ್ ಅಂಶ ಸಮೃದ್ಧವಾಗಿದೆ:
ಮೊಸರಿನಲ್ಲಿ ಫ್ರೋಟೀನ್ ಹೆಚ್ಚಾಗಿದ್ದು ಇದು 1 ಔನ್ಸ್ ಮೊಸರು 12 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಮೊಸರು ನಿಮ್ಮ ಹೊಟ್ಟೆ ಯನ್ನು ದೀರ್ಘ ಕಾಲದವರೆಗೆ ತುಂಬಲು ಸಹಾಯ ಮಾಡಲಿದ್ದು , ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಟ್ಟು ಇದು ನಿಮ್ಮ ಹೊಟ್ಟೆಯಿಂದ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ಮೊಸರನ್ನು ಸೇರಿಸುವ ಕೆಲವು ವಿಧಾನಗಳು ಇಲ್ಲಿವೆ:
ಹಣ್ಣುಗಳೊಂದಿಗೆ ಮೊಸರು: ಬೆರ್ರಿ ಹಣ್ಣುಗಳು, ಸೇಬು ಅಥವಾ ಬಾಳೆಹಣ್ಣುಗಳಂತಹ ಕೆಲವು ತಾಜಾ ಹಣ್ಣುಗಳನ್ನು ಮೊಸರಿನ ಜೊತೆ ಸೇವಿಸಬಹುದು. ಇವು ಫೈಬರ್, ಜೀವ ಸತ್ವಗಳು ಮತ್ತು ಉತ್ಕರ್ಷಣ ನಿರೋಧಕ ಗಳನ್ನು ಒದಗಿಸಲಿದ್ದು ತೂಕ ಇಳಿಕೆಗೂ ಪರಿಣಾಮ ಕಾರಿಯಾಗಿದೆ.
ಸ್ಮೂಥಿಗಳು: ರುಚಿಕರವಾದ ಸ್ಮೂತಿಯನ್ನು ಮಾಡಲು ನಿಮ್ಮ ನೆಚ್ಚಿನ ಹಣ್ಣು ಮತ್ತು ಪಾಲಕ್ ಅಥವಾ ಕೇಲ್‌ನೊಂದಿಗೆ ಮೊಸರನ್ನು ಮಿಶ್ರಣ ಮಾಡಿ ಸೇವಿ ಸಬಹುದು. ಇದು ಉತ್ತಮ ಉಪಹಾರ ಅಥವಾ ವ್ಯಾಯಾಮದ ನಂತರದ ಸೇವಿಸುವ ಉತ್ತಮ ವಿಧಾನ ವಾಗಿದೆ.
ಸಲಾಡ್ : ಹೆಚ್ಚಿನ ಕ್ಯಾಲೋರಿ ಮೇಯನೇಸ್ ಬದಲಿಗೆ ಮೊಸರನ್ನು ಆಧಾರವಾಗಿ ಬಳಸಿ.ನಿಮ್ಮ ಮೊಸರಿಗೆ ಜೀರಿಗೆ, ಅರಿಶಿನ ಅಥವಾ ದಾಲ್ಚಿನ್ನಿಯಂತಹ ಮಸಾಲೆಗಳನ್ನು ಸೇರಿಸಿಯು ಸೇವಿಸಬಹುದು.ಈ ಮಸಾಲೆಗಳು ಸುವಾ ಸನೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಚಯಾಪಚಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ.
ಇದನ್ನು ಓದಿ: Health Tips: ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಆಹಾರ ತ್ಯಜಿಸಿ!
ಅಡುಗೆಯಲ್ಲಿ ಮೊಸರು: ಮಾಂಸ ಅಥವಾ ತೋಫುಗಳಿಗೆ ಮೊಸರನ್ನು ಮ್ಯಾರಿನೇಡ್ ಆಗಿ ಬಳಸಿ. ಇದು ಪ್ರೋಟೀನ್ ಅನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಕಡಿಮೆ ಮಾಡಲಿದೆ.
ಸ್ನ್ಯಾಕ್ಸ್ ಅಥವಾ ಉಪಹಾರವಾಗಿ ಬಳಸಿ: ಮೊಸರನ್ನು ಉಪಹರವಾಗಿ ಸೇವಿಸೋದರಿಂದ ತೂಕ ಇಳಿಕೆಯಾಗುತ್ತದೆ. ಇದನ್ನು , ಸೀಡ್ಸ್, ನಟ್ಸ್, ಚಿಯಾ ಬೀಜಗಳ ಜೊತೆ ತಿನ್ನುವುದರಿಂದ ದೇಹಕ್ಕೆ ಫೈಬರ್, ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗುತ್ತವೆ.