ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆಗಳಲ್ಲಿ ಈಜಿ ಇತಿಹಾಸ ಬರೆದ ಬೆಂಗಳೂರಿನ ದಂಪತಿ
Swimming Challenge: ಶ್ರೀಲಂಕಾದಿಂದ ಭಾರತದವರೆಗಿನ ರಾಮಸೇತು ಮಾರ್ಗವಾಗಿ ಈಜುವ ಮೂಲಕ ಬೆಂಗಳೂರಿನ ದಂಪತಿ ಹೊಸ ಇತಿಹಾಸ ಬರೆದಿದ್ದಾರೆ. ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಸಾಧನೆ ಮಾಡಿದವರು. ಇವರು ಹಿಂದೂ ಮಹಾಸಾಗರದಲ್ಲಿ ಸುಮಾರು 32 ಕಿಲೋ ಮೀಟರ್ ದೂರ ಕ್ರಮಿಸಿದ್ದಾರೆ.
ಈಜಿ ಇತಿಹಾಸ ನಿರ್ಮಿಸಿದ ಬೆಂಗಳೂರಿನ ದಂಪತಿ -
ಬೆಂಗಳೂರು, ಮೇ 7: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಈ ಯುವ ದಂಪತಿಯ ಸಾಧನೆ ಕರ್ನಾಟವೇ ಹೆಮ್ಮೆ ಪಡುವಂತಹದ್ದು. ಶ್ರೀಲಂಕಾದಿಂದ ಭಾರತದವರೆಗಿನ ರಾಮಸೇತು (Ram Setu) ಮಾರ್ಗವಾಗಿ ಈಜುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಸಾಧನೆ ಮಾಡಿದವರು. ಇವರು ಹಿಂದೂ ಮಹಾಸಾಗರದ ಮೂಲಕ ಸುಮಾರು 32 ಕಿಲೋ ಮೀಟರ್ ದೂರ ಕ್ರಮಿಸಿದ್ದಾರೆ.
ಸವಾಲನ್ನು ಮುಗಿಸಿದ ನಂತರ, ದಂಪತಿ ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅನೇಕರು ಈ ಸಾಧನೆಯನ್ನು ಸ್ಫೂರ್ತಿದಾಯಕ ಎಂದು ಕರೆದಿದ್ದಾರೆ. ದಂಪತಿಯ ಈ ಗೆಲುವು ಕೇವಲ ದೈಹಿಕ ಸಾಮರ್ಥ್ಯದ ಪ್ರದರ್ಶನ ಮಾತ್ರವಲ್ಲ, ಅದು ಅವರ ಮಾನಸಿಕ ದೃಢತೆ ಮತ್ತು ಪರಸ್ಪರರ ಮೇಲಿರುವ ನಂಬಿಕೆಗೆ ಸಂದ ಜಯ ಎಂದು ಅನೇಕರು ಶ್ಲಾಘಿಸಿದರು.
ಇಲ್ಲಿದೆ ಪೋಸ್ಟ್:
ತಮ್ಮ ಸಾಧನೆಯನ್ನು ದಂಪತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ʼʼನಾವಂದುಕೊಂಡಿದ್ದನ್ನು ಸಾಧಿಸಿದ್ದೇವೆ. ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆ 45 ನಿಮಿಷಗಳಲ್ಲಿ ಈಜಿದ್ದೇವೆ. ನೀರಿನಲ್ಲಿ ಕಠಿಣ ದಿನಗಳ ನಡುವೆಯೂ ನಾವಂದುಕೊಂಡಿದನ್ನು ಮಾಡಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.
15 ರೂ. ಬಾಳೆಹಣ್ಣಿಗೆ 1,515 ರೂ ಪಾವತಿ: ಹಣ ವಾಪಸ್ ಪಾವತಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ!
ಅವರ ಈ ಪೋಸ್ಟ್ ತ್ವರಿತವಾಗಿ ಎಲ್ಲರ ಗಮನ ಸೆಳೆಯಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಈ ಅಪೂರ್ವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ʼʼಹ್ಯಾಟ್ಸ್‌ಆಫ್ʼʼ ಎಂದು ಒಬ್ಬರು ಬರೆದಿದ್ದರೆ, ಮತ್ತೊಬ್ಬರು ʼʼಅದ್ಭುತʼʼ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ಇದನ್ನು ಹೆಮ್ಮೆಯ ಕ್ಷಣ ಎಂದು ಕರೆದಿದ್ದಾರೆ. ದಂಪ ತಮ್ಮ ಪ್ರಯತ್ನದ ಮೂಲಕ ಇತರರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈಜನ್ನು ಮಣಿಪಾಲ್ ಆಸ್ಪತ್ರೆಗಳ ಸಹಕಾರದೊಂದಿಗೆ ಕೈಗೊಳ್ಳಲಾಯಿತು. ಇದು ಕೇವಲ ಸಾಹಸ ಮಾತ್ರವಲ್ಲದೆ, ದೈಹಿಕ ಕ್ಷಮತೆ ಮತ್ತು ಸಂಕಲ್ಪದ ಮಹತ್ತರ ಸಂದೇಶವನ್ನೂ ಸಾರಿದೆ. ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿಯವರೆಗೆ ಅವರು ನಡೆಸಿದ ಈ ಪಯಣ ಅತ್ಯಂತ ಸವಾಲಿನದ್ದಾಗಿತ್ತು. ಐತಿಹಾಸಿಕ ರಾಮಸೇತು ವ್ಯಾಪ್ತಿಯಲ್ಲಿ ಬರುವ ಈ ಮಾರ್ಗವು ಸಮುದ್ರದ ಪ್ರವಾಹ ಮತ್ತು ಅಲೆಗಳ ಏರಿಳಿತಕ್ಕೆ ಹೆಸರುವಾಸಿ.