ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಂಗೇರಿ ವಿಭಾಗದ 220/66/11 ಕೆ.ವಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜ.30ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಸಾಂದರ್ಭಿಕ ಚಿತ್ರ. -

Profile
Siddalinga Swamy Jan 29, 2026 7:58 PM

ಬೆಂಗಳೂರು, ಜ.29: ಕೆಪಿಟಿಸಿಎಲ್ ವತಿಯಿಂದ (KPTCL) ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಂಗೇರಿ ವಿಭಾಗದ 220/66/11 ಕೆ.ವಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜ.30ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: F-4 HLTC, F-9 ಬೋಲಾರೆ, F-3 ವೇದವಿಜ್ಞಾನ, F-2 ಕಗ್ಲಿಪುರ, F-7 ಅವಸರಾಳ, F12 -ಕಂಕಾರ್ಡ್-1, F13 ಸ್ಟೇಷನ್ ಆಕ್ಸಿಲರಿ-2, F-5 PGCIL, F-8 ಸೋಮನಹಳ್ಳಿ, F-1 ಹಾರೋಹಳ್ಳಿ, F-10 ಶಾಂತಿದಾಮ-F-10 ಶಾಂತಿದಾಮ-1 FX6 ಸ್ಟೇಷನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್‌ ಸಮಸ್ಯೆಗಳಿಗೆ 1912 ಅಥವಾ ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿಗೆ ದೂರು ದಾಖಲಿಸಿ: ಬೆಸ್ಕಾಂ

ಬೆಂಗಳೂರು: ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಸಂಬಂಧಿತ ಕುಂದು ಕೊರತೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912 ಹಾಗೂ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳಿಗೆ (BESCOM Helpline) ದೂರು ದಾಖಲಿಸಲು ಬೆಸ್ಕಾಂ (BESCOM) ಮನವಿ ಮಾಡಿದೆ. ರೈತರ ಹೊಲ-ಗದ್ದೆಗಳಲ್ಲಿರುವ ವಿದ್ಯುತ್‌ ಪರಿವರ್ತಕಗಳು ವಿಫಲತೆ ಹೊಂದಿದಾಗ ಹಾಗೂ ವಿದ್ಯುತ್‌ ಸಂಬಂಧಿತ ದೂರುಗಳಿದ್ದಲ್ಲಿ ತಕ್ಷಣ 1912 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಲು ಬೆಸ್ಕಾಂ ತಿಳಿಸಿದೆ.

ಒಂದು ವೇಳೆ 1912 ಸಹಾಯವಾಣಿ ಸಂಖ್ಯೆ ಲಭ್ಯವಾಗದಿದ್ದಲ್ಲಿ ರೈತರು ತಮ್ಮ ಜಿಲ್ಲೆಗೆ ಸಂಬಂಧಿಸಿದ ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ದಾಖಲಿಸಬಹುದಾಗಿದೆ. ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಪೂರ್ವ ಹಾಗು ಪಶ್ಚಿಮ ವೃತ್ತಗಳಿಗೆ 4 ವಾಟ್ಸ್‌ ಆ್ಯಪ್‌ ಸಹಾಯವಾಣಿ ಸಂಖ್ಯೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಗಳ ಬೆಸ್ಕಾಂ ವೃತ್ತಗಳಿಗೆ ತಲಾ ಒಂದು ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳ ವಿವರ

ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014.

ಕೋಲಾರ ಜಿಲ್ಲೆ: 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ : 8277884019, ಚಿತ್ರದುರ್ಗ ಜಿಲ್ಲೆ : 8277884020, ದಾವಣಗರೆ ಜಿಲ್ಲೆ: 8277884021

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಸಿವಿಲ್ ಸೇವಾ ಹುದ್ದೆಗಳ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ವಿದ್ಯುತ್ ಸಮಸ್ಯೆಗಳ ಕುರಿತು ರೈತರು ಹಾಗೂ ಸಾರ್ವಜನಿಕರು ದೂರುಗಳನ್ನು ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912 ಗಾಗಲಿ ಅಥವಾ ಸಂದೇಶಗಳನ್ನು ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ʼವಾಟ್ಸ್‌ ಆ್ಯಪ್‌ʼ ಸಂಖ್ಯೆಗಳಿಗಾಗಲಿ ಕಳುಹಿಸಿದ ಕೂಡಲೇ, 1912 ಸಹಾಯವಾಣಿ ಕೇಂದ್ರದ ಗ್ರಾಹಕ ಸೇವಾ ಪ್ರತಿನಿಧಿಗಳು ದೂರುಗಳನ್ನು ಅಥವಾ ಸಂದೇಶಗಳನ್ನು ಸಂಬಂಧಿಸಿದ ಬೆಸ್ಕಾಂ ಉಪ ವಿಭಾಗಗಳಿಗೆ ರವಾನಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.