'Burude' fight: ಬಿಜೆಪಿ-ಕಾಂಗ್ರೆಸ್ ನಡುವೆ 'ಬುರುಡೆ' ಜಗಳ
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಆರೋಪ ಪ್ರಕರಣ ಸಂಬಂಧ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಯಲ್ಲಿ ಪ್ರಸ್ತಾಪವಾದ ಹೆಸರುಗಳು ಹಾಗೂ ಕೋಟಿ ಕೋಟಿ ಹಣ ಬಳಕೆಯ ವಿಚಾರ ಸಂಬಂಧ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಸರಕಾರ ಹೇಳಿದ್ದರೆ, ಎಸ್‌ಐಟಿ ತನಿಖಾ ವರದಿ ಬಹಿರಂಗಪಡಿಸಲಿ ಎಂದು ಬಿಜೆಪಿ ಪ್ರತಿ ಸವಾಲು ಎಸೆದಿದೆ.
-
ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ: ಪ್ರಿಯಾಂಕ್
ಎಸ್‌ಐಟಿ ವರದಿ ಬಹಿರಂಗಪಡಿಸಿ: ಬಿಜೆಪಿ
ಬೆಂಗಳೂರು: ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಆರೋಪ ಪ್ರಕರಣ ಸಂಬಂಧ ಹೈಕೋ ರ್ಟ್‌ಗೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಯಲ್ಲಿ ಪ್ರಸ್ತಾಪವಾದ ಹೆಸರುಗಳು ಹಾಗೂ ಕೋಟಿ ಕೋಟಿ ಹಣ ಬಳಕೆಯ ವಿಚಾರ ಸಂಬಂಧ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಸರಕಾರ ಹೇಳಿದ್ದರೆ, ಎಸ್‌ಐಟಿ ತನಿಖಾ ವರದಿ ಬಹಿರಂಗಪಡಿಸಲಿ ಎಂದು ಬಿಜೆಪಿ ಪ್ರತಿ ಸವಾಲು ಎಸೆದಿದೆ.
ಪ್ರಕರಣದ ಪ್ರಮುಖ ಆರೋಪಿಯಾದ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿರುವುದು ಕುತೂಹಲ ಕೆರಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನಯ್ಯ ಮಾಡಿರುವ ಆರೋಪಗಳು ಮತ್ತು ಆತನ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಆತ ಎಷ್ಟು ಸತ್ಯ ಹೇಳುತ್ತಿದ್ದಾನೆ ಅಥವಾ ಎಷ್ಟು ಸುಳ್ಳು ಹೇಳುತ್ತಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ. ಕಾನೂನುಬದ್ಧವಾಗಿಯೇ ತನಿಖೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Burude Gang: ನೋಟಿಸ್ʼಗೆ ಮುನ್ನವೇ ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್
ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮತ್ತು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಮಾಹಿತಿ ಪ್ರಕಾರ ಸುಮಾರು 200 ಕೋಟಿ ರು. ಷಡ್ಯಂತ್ರದ ಆರೋಪ ಕೇಳಿಬಂದಿದೆ. ಈ ಬಗ್ಗೆ ನಿಖರತೆ ಇಲ್ಲಎಂದು ಪ್ರಿಯಾಂಕ್ ಹೇಳಿದರು.
ಎಸ್‌ಐಟಿಗೆ ಕೋರ್ಟ್ ಪ್ರಶ್ನೆ: ಪ್ರಕರಣದ ಸದ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ವಿಶೇಷ ತನಿಖಾ ದಳಕ್ಕೆ ನ್ಯಾಯಾಲಯವು ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ. ಎಸ್‌ಐಟಿ ಮುಖ್ಯಸ್ಥರು ಆ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ನ್ಯಾಯಾಲಯಕ್ಕೇ ಉತ್ತರ ನೀಡಲಿzರೆ. ಇದು ಅತ್ಯಂತ ಸೂಕ್ಷ್ಮಹಾಗೂ ಕಾನೂನು ಪ್ರಕ್ರಿಯೆ ಆಗಿರುವುದ ರಿಂದ ಇದನ್ನು ನಾವು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಅಧಿಕೃತವಾಗಿ ಉತ್ತರ ಸಲ್ಲಿಕೆಯಾದ ಬಳಿಕವೇ ಸರಕಾರ ಮತ್ತು ತನಿಖಾ ಸಂಸ್ಥೆ ಈ ಬಗ್ಗೆ ಮುಂದಿನ ಮಾಹಿತಿ ನೀಡಲಿದೆ ಎಂದು ತಿಳಿಸಿದರು.
ಹೆಸರು ಪ್ರಸ್ತಾಪವಾದ ತಕ್ಷಣ ಕ್ರಿಮಿನಲ್‌ಗಳಲ್ಲ: ನಟ ಪ್ರಕಾಶ್ ರಾಜ್ ಹೆಸರು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಆರೋಪ ಮಾಡುತ್ತಿರುವ ವ್ಯಕ್ತಿ (ಚಿನ್ನಯ್ಯ), ಈ ಹಿಂದೆ ಮತ್ತು ಈಗ ಬೇರೆ ಬೇರೆ ಹೇಳಿಕೆ ನೀಡುತ್ತಾ ಬಂದಿzನೆ. ಹೀಗಾಗಿ ಆತನ ಹಿಂದಿನ ಹಾಗೂ ಈಗಿನ ಹೇಳಿಕೆ ಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಕೇವಲ ಒಂದು ಅರ್ಜಿಯಲ್ಲಿ ಯಾರದ್ದೇ ಹೆಸರು ಪ್ರಸ್ತಾಪವಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.