Sankranti Festival 2025: ಸಂಕ್ರಾಂತಿಯ ಎಳ್ಳು ಬೀರಲು ಬಂತು 3 ಬಗೆಯ ಪರಿಸರ ಸ್ನೇಹಿ ಮಣ್ಣಿನ ಕುಡಿಕೆಗಳು

ಸಂಕ್ರಾಂತಿ ಹಬ್ಬದಂದು (Sankranti Festival 2025) ಎಳ್ಳು ಬೀರುವ ಪರಿಸರ ಸ್ನೇಹಿಗಳಿಗೆಂದೇ ಮಾರುಕಟ್ಟೆಯಲ್ಲಿ ಇದೀಗ ಬಣ್ಣಬಣ್ಣದ ಕಲರ್‌ಫುಲ್ ಪುಟ್ಟ ಮಣ್ಣಿನ ಕುಡಿಕೆಗಳು ಬಂದಿವೆ. ಅವುಗಳಲ್ಲಿ 3 ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವು ಯಾವುವು? ಇಲ್ಲಿದೆ ವರದಿ.

image-a9c81395-02ae-4f9e-a1c7-8f4e6889f12e.jpg
Profile Vishwavani News January 12, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು ಸಂಕ್ರಾಂತಿ ಹಬ್ಬದಂದು (Sankranti Festival 2025) ಎಳ್ಳು ಬೀರುವ ಪರಿಸರ ಸ್ನೇಹಿಗಳಿಗಾಗಿ, ಇಕೋ ಫ್ರೆಂಡ್ಲಿಯಾಗಿರುವ ಬಣ್ಣಬಣ್ಣದ ಮಣ್ಣಿನ ಡಿಸೈನರ್ ಕುಡಿಕೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಲೆಕ್ಕವಿಲ್ಲದಷ್ಟು ಕಲಾತ್ಮಕ ಡಿಸೈನ್‌ನಲ್ಲಿ ಲಗ್ಗೆ ಇಟ್ಟಿವೆ. image-a600e3f2-242f-432d-8ebf-ffe4b70aa9a3.jpg ಚಿತ್ರಗಳು: ಮಿಂಚು ಹೌದು, ಪ್ಲಾಸ್ಟಿಕ್ ಬಾಕ್ಸ್ ಬೇಡ! ಎನ್ನುವವರಿಗೆ ಈ ಬಗೆಬಗೆಯ ಮಣ್ಣಿನ ಪುಟ್ಟ ಪುಟ್ಟ ಡಿಸೈನರ್ ಮಡಿಕೆ-ಕುಡಿಕೆಗಳು ಅಪ್ಷನ್ ಆಗಿವೆ. ಈ ಮೊದಲು ಪೊಂಗಲ್ ಆಚರಿಸುವವರು ಮಾತ್ರ ಇವುಗಳನ್ನು ಡೆಕೋರೇಷನ್‌ಗಾಗಿ ಕೊಳ್ಳುತ್ತಿದ್ದರು. ಇದೀಗ ಸಂಕ್ರಾಂತಿ ಹಬ್ಬದಂದು ಎಳ್ಳನ್ನು ಹಾಕಿಕೊಡಲು ಇವನ್ನು ಬಳಸಲಾರಂಭಿಸಿರುವುದು ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರಾದ ರಾಜೇಶ್. ಅವರ ಪ್ರಕಾರ, ಇದರಿಂದ ದೇಸಿ ಹಬ್ಬಕ್ಕೆ ಸಾಥ್ ನೀಡಿದಂತಾಗುವುದಲ್ಲದೇ, ಕುಂಬಾರರಿಗೂ ಒಂದಿಷ್ಟು ಕೆಲಸ ಹೆಚ್ಚಿಗೆ ದೊರೆತಂತಾಗುತ್ತದೆ ಎನ್ನುತ್ತಾರೆ. image-99cd8440-9585-4647-a515-3dfa5b395666.jpg ಬಣ್ಣ ಬಣ್ಣದ ಮಣ್ಣಿನ ಕುಡಿಕೆಗಳು ನಾನಾ ವರ್ಣಗಳಲ್ಲಿ ದೊರೆಯುವ ಇವುಗಳಲ್ಲಿ, ಸಂಕ್ರಾಂತಿಯಂದು ಎಳ್ಳನ್ನು ತುಂಬಿಸಿ ಕೊಡಬಹುದಾಗಿದೆ. ಬಾಕ್ಸ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಇವು ದೊರೆಯುತ್ತಿವೆ. image-905657a9-3db6-4f4e-b11c-8d0b659600e2.jpg ರಂಗೋಲಿ & ಮಂಡಲ ಆರ್ಟ್ ಚಿತ್ತಾರದ ಕುಡಿಕೆಗಳು ಇನ್ನು, ಸಾದಾ ಮಣ್ಣಿನ ಕುಡಿಕೆಗಳು ಬೇಡ! ಎನ್ನುವವರಿಗೆಂದೇ, ಈ ಕುಡಿಕೆಗಳ ಮೇಲೆ ಹೊರಗೆ ಬಣ್ಣದಿಂದ ರಂಗೋಲಿಯಂತಹ ಚಿತ್ತಾರಗಳನ್ನು ಮೂಡಿಸಿದವು ದೊರೆಯುತ್ತಿವೆ. ಟೈನಿ ಮಂಡಲ ಆರ್ಟ್‌ನಂತಹ ಚಿತ್ತಾರಗಳು ಕೂಡ ಎಲ್ಲರನ್ನು ಸೆಳೆಯುತ್ತಿವೆ. ಈ ಸುದ್ದಿಯನ್ನೂ ಓದಿ | Bengaluru International Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕನ್ನಡ, ಭಾರತೀಯ, ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳ ಆಹ್ವಾನ ಆಕರ್ಷಕ ಡಿಸೈನ್ ಮಾಡಿದ ಮಣ್ಣಿನ ಕುಡಿಕೆ ಸಾದಾ ಕುಂದನ್, ಪರ್ಲ್, ಬೀಡ್ಸ್ ಹೀಗೆ ನಾನಾ ಲೇಸ್‌ನಿಂದ ಮಾಡಿದ ಡಿಸೈನ್‌ಗಳು ಈ ಕುಡಿಕೆಗಳನ್ನು ಮತ್ತಷ್ಟು ಸುಂದರಗೊಳಿಸಿವೆ. ಮನೆಯೊಳಗಿನ ಹಬ್ಬದ ಅಲಂಕಾರದಲ್ಲೂ ಇವು ಉಪಯೋಗವಾಗುತ್ತಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಪರಿಸರ ಪ್ರೇಮಿಗಳು ಇವನ್ನು ಹೆಚ್ಚಾಗಿ ಕೊಳ್ಳುತ್ತಾರೆ ಎನ್ನುತ್ತಾರೆ. ಅಲ್ಲದೇ ಇದು ಅಲಂಕಾರದಲ್ಲಿ ಟ್ರೆಡಿಷನಲ್ ಲುಕ್ ನೀಡುತ್ತದೆ ಎನ್ನುತ್ತಾರೆ. (ಲೇಖಕಿ: ಫ್ಯಾಷನ್ ಪತ್ರಕರ್ತೆ)
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ