ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಂಡಿನ ಸದ್ದಿಗೆ ಬೆದರಿದ ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮನಬಂದಂತೆ ಏರ್ ಗನ್‌ನಿಂದ ಶೂಟೌಟ್ ಮಾಡಿದ ಟೆಕ್ಕಿ

Techie Opens Fire: ಬೆಂಗಳೂರಿನ ಅಪಾರ್ಟ್‌ಮೆಂಟ್ ಒಳಗೆ ಭದ್ರತಾ ಸಿಬ್ಬಂದಿ ಮತ್ತು ವಾಹನಗಳ ಮೇಲೆ ಏರ್ ಗನ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 40 ವರ್ಷದ ಐಟಿ ಉದ್ಯೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ವೇಳೆ ಅನುರಾಗ್ ತಿವಾರಿ ಕುಡಿದ ಅಮಲಿನಲ್ಲಿದ್ದ. ನಂತರ ಬಾಲ್ಕನಿಗೆ ಹೋಗಿ ಏರ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಗುಂಡಿನ ಸದ್ದಿಗೆ ಬೆದರಿದ ಸಿಲಿಕಾನ್ ಸಿಟಿ ಬೆಂಗಳೂರು

ಮನಬಂದಂತೆ ಗುಂಡು ಹಾರಿಸಿದ ಬೆಂಗಳೂರಿನ ಟೆಕ್ಕಿ ಮತ್ತು ಸಾಂದರ್ಭಿಕ ಚಿತ್ರ -

Priyanka P
Priyanka P Aug 6, 2026 6:25 PM

ಬೆಂಗಳೂರು, ಆ. 6: ಅಪಾರ್ಟ್‌ಮೆಂಟ್ ಒಳಗೆ ಭದ್ರತಾ ಸಿಬ್ಬಂದಿ ಮತ್ತು ವಾಹನಗಳ ಮೇಲೆ ಏರ್‌ ಗನ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 40 ವರ್ಷದ ಐಟಿ ಉದ್ಯೋಗಿಯನ್ನು (Techie Opens Fire) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ (Bengaluru) ಹೊರವಲಯದ ಆನೇಕಲ್‌ನ ಬಂದಾಪುರ ಬಳಿಯ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಉತ್ತರ ಪ್ರದೇಶದ ಲಖನೌ ಮೂಲದ ಅನುರಾಗ್ ತಿವಾರಿ ಎಂದು ಗುರುತಿಸಲಾಗಿದೆ. ಈತ ಎಂಟು ತಿಂಗಳಿನಿಂದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ.

ಘಟನೆ ವೇಳೆ ತಿವಾರಿ ವಿಪರೀತ ಕುಡಿದ ಅಮಲಿನಲ್ಲಿದ್ದ. ತನ್ನ ಅಪಾರ್ಟ್‌ಮೆಂಟ್‌ ಒಳಗೆ ಫೋನ್‌ನಲ್ಲಿ ಮಾತನಾಡುತ್ತಾ ಕೂಗುತ್ತಿದ್ದ. ನಂತರ ಅವನು ಬಾಲ್ಕನಿಗೆ ಹೋಗಿ ಏರ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಲ್ಲಿಸಿದ್ದ ಕಾರ್‌ಗಳ ಮೇಲೆ ಪೆಲೆಟ್‌ ಗುಂಡು ಹಾರಿದವು. ಗುಂಡಿನ ಸದ್ದು ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಂತರ ಅನುರಾಗ್ ತಿವಾರಿ ಅವರ ಮೇಲೆಯೂ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮತ್ತೊಂದು ಶೂಟೌಟ್; ಬೋಂಡಿ ಬೀಚ್ ದಾಳಿಯ ಶೋಕಾಚರಣೆಯಂದೇ ಗುಂಡಿನ ದಾಳಿ

ಸೂರ್ಯ ನಗರ ಪೊಲೀಸರು ಅಪಾರ್ಟ್‌ಮೆಂಟ್ ತಲುಪಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಸುಮಾರು 45 ನಿಮಿಷಗಳ ಕಾಲ ಗುಂಡಿನ ದಾಳಿ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬಳಸಲಾದ ಏರ್ ಗನ್ ಮತ್ತು ಪೆಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಹರಿಯಾಣದಲ್ಲಿ ಸ್ಕಾರ್ಪಿಯೋ ಸವಾರನ ಮೇಲೆ ಗುಂಡಿನ ದಾಳಿ

ಅಪರಿಚಿತ ದುಷ್ಕರ್ಮಿಗಳು ಸ್ಕಾರ್ಪಿಯೋ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಅಪರಾಧ ಮಾಡಿದ ನಂತರ, ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿ ಆ ಪ್ರದೇಶದಾದ್ಯಂತ ಭೀತಿಯನ್ನುಂಟುಮಾಡಿತು. ಘಟನೆಯಲ್ಲಿ ಸ್ಕಾರ್ಪಿಯೋದಲ್ಲಿದ್ದ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರೋಹ್ಟಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.