ಪ್ರೇಮಿಗಳ ಋತು: ಜಾಗತಿಕವಾಗಿ 60 ದಶಲಕ್ಷಕ್ಕಿಂತ ಹೆಚ್ಚು ಗುಲಾಬಿ ಸಾಗಣೆ ಮಾಡಿದ KIA
ಅಂತಾರಾಷ್ಟ್ರೀಯ ರಫ್ತು ಸ್ಥಿರವಾಗಿದ್ದು, ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ರವಾನಿಸಲಾಗಿದೆ. ಈ ಪೈಕಿ ಸಿಂಗಾಪುರ (SIN) ಪ್ರಮುಖ ವಿದೇಶಿ ತಾಣವಾಗಿ ಹೊರ ಹೊಮ್ಮಿದೆ. ನಂತರದ ಸ್ಥಾನಗಳಲ್ಲಿ ಕೌಲಾಲಂಪುರ್ (KUL), ಅಬುಧಾಬಿ (AUH), ನ್ಯೂಯಾರ್ಕ್ (JFK) ಮತ್ತು ಕುವೈತ್ (KWI) ನಗರಗಳಿವೆ.
-
ವರ್ಷದಿಂದ ವರ್ಷಕ್ಕೆ ಶೇ. 64 ರಷ್ಟು ಟನ್‌ಗಳ ಬೆಳವಣಿಗೆ
ಬೆಂಗಳೂರು: ಪ್ರೇಮಿಗಳ ದಿನದ ಸಂದರ್ಭದಲ್ಲಿ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಉಂಟಾದ ಭಾರಿ ಬೇಡಿಕೆಯಿಂದಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಸುಮಾರು 60 ದಶ ಲಕ್ಷ ಗುಲಾಬಿ ಹೂವುಗಳನ್ನು ರವಾನಿಸಿದೆ.
2,700 ಮೆಟ್ರಿಕ್ ಟನ್‌ಗಿಂತಲೂ ಅಧಿಕ ತೂಕದ ಈ ಹೂವುಗಳ ರಫ್ತು, ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ ಶೇ. 38 ರಷ್ಟು ಮತ್ತು ಒಟ್ಟು ತೂಕದಲ್ಲಿ ಶೇ. 64 ರಷ್ಟು ಬೆಳವಣಿಗೆಯನ್ನು ಕಂಡಿದೆ. ಈ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸತತ ಐದನೇ ವರ್ಷವೂ ಕೊಳೆಯುವ ಉತ್ಪನ್ನಗಳ ರಫ್ತಿನಲ್ಲಿ ಭಾರತದ ಮುಂಚೂಣಿ ವಿಮಾನ ನಿಲ್ದಾಣ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ.
ಅಂತಾರಾಷ್ಟ್ರೀಯ ರಫ್ತು ಸ್ಥಿರವಾಗಿದ್ದು, ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ರವಾನಿಸಲಾಗಿದೆ. ಈ ಪೈಕಿ ಸಿಂಗಾಪುರ (SIN) ಪ್ರಮುಖ ವಿದೇಶಿ ತಾಣವಾಗಿ ಹೊರ ಹೊಮ್ಮಿದೆ.
ಇದನ್ನೂ ಓದಿ: KIA: ಗ್ರಾಹಕರ ಹಿತಕ್ಕೆ ಪ್ರಥಮ ಆದ್ಯತೆ' ನೀಡುವ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲು ಮ್ಯೂ ಸಿಗ್ಮಾ ಜೊತೆ ಸಹಭಾಗಿತ್ವ
ನಂತರದ ಸ್ಥಾನಗಳಲ್ಲಿ ಕೌಲಾಲಂಪುರ್ (KUL), ಅಬುಧಾಬಿ (AUH), ನ್ಯೂಯಾರ್ಕ್ (JFK) ಮತ್ತು ಕುವೈತ್ (KWI) ನಗರಗಳಿವೆ. ಈ ಋತುವಿನಲ್ಲಿ ಲಾಸ್ ಏಂಜಲೀಸ್ (LAX), ಲಂಡನ್ ಗ್ಯಾಟ್ವಿಕ್ (LGW), ಡಲ್ಲಾಸ್ ಫೋರ್ಟ್ ವರ್ತ್ (DFW), ಟೊರೊಂಟೊ (YYZ) ಮತ್ತು ಒರ್ಲ್ಯಾಂಡೊ (MCO) ಸೇರಿದಂತೆ ಹೊಸ ಅಂತಾರಾಷ್ಟ್ರೀಯ ತಾಣಗಳಿಗೆ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ.
ಹಾಗೆಯೇ, ಈ ಬಾರಿ ದೇಶೀಯ ಮಾರುಕಟ್ಟೆಯಲ್ಲಿ 2,402 ಮೆಟ್ರಿಕ್ ಟನ್ ಗುಲಾಬಿಗಳನ್ನು ಸಾಗಿಸಲಾಗಿದ್ದು, ಒಟ್ಟು ತೂಕದಲ್ಲಿ ಕಳೆದ ವರ್ಷಕ್ಕಿಂತ ಶೇ. 79 ರಷ್ಟು ಗಮನಾರ್ಹ ಏರಿಕೆ ಕಂಡುಬಂದಿದೆ. ದೆಹಲಿ (DEL) ಮತ್ತು ಕೋಲ್ಕತ್ತಾ (CCU) ನಗರಗಳು ಎಂದಿನಂತೆ ಹೆಚ್ಚಿನ ಬೇಡಿಕೆಯನ್ನು ಕಾಯ್ದುಕೊಂಡರೆ, ಗುವಾಹಟಿ (GAU), ಮುಂಬೈ (BOM) ಮತ್ತು ಜೈಪುರ (JAI) ನಗರಗಳಿಂದಲೂ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ವಿಶೇಷವೆಂದರೆ, ಕೋಲ್ಕತ್ತಾ (CCU), ಮುಂಬೈ (BOM), ಚಂಡೀಗಢ (IXC) ಮತ್ತು ಲಕ್ನೋ (LKO) ನಗರಗಳು ಕಳೆದ ಋತುವಿಗೆ ಹೋಲಿಸಿದರೆ ಶೇ. 150 ಕ್ಕೂ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ವಿಸ್ತೃತ ಕಾರ್ಗೋ ಮೂಲಸೌಕರ್ಯವು ಈ ವೇಗಕ್ಕೆ ಮತ್ತಷ್ಟು ಬೆಂಬಲ ನೀಡುತ್ತಿದ್ದು, ಹೂವುಗಳ ತಾಜಾತನ, ವೇಗ ಮತ್ತು ನಿಖರವಾದ ತಾಪಮಾನವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸುತ್ತದೆ. ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಅತ್ಯಾ ಧುನಿಕ 'ಕೋಲ್ಡ್ ಚೈನ್' ಸೌಲಭ್ಯಗಳು ಪ್ರತಿಯೊಂದು ರವಾನೆಯನ್ನೂ ಸುರಕ್ಷಿತವಾಗಿಡು ತ್ತವೆ. ಅಲ್ಲದೆ, ತಾಪಮಾನದಲ್ಲಿ ಉಂಟಾಗುವ ಏರಿಳಿತಗಳನ್ನು ಮೊದಲೇ ಗುರುತಿಸಿ ನಿರ್ವಹಿಸುವ ಮೂಲಕ, ಉತ್ಪನ್ನಗಳ ಶೇಖರಣೆ, ನಿರ್ವಹಣೆ ಮತ್ತು ಸಾಗಣೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ.
ಈ ಸೌಲಭ್ಯಗಳು ಸರಕು ಸಾಗಣೆಯ ಪ್ರಮುಖ ಪ್ರವೇಶದ್ವಾರವಾಗಿ ಕೆಂಪೇಗೌಡ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಬೇಡಿಕೆಯ ಸಮಯದಲ್ಲಿ ಅತ್ಯಮೂಲ್ಯವಾದ ಸರಕು ಗಳ ಸಾಗಣೆಗೆ ಪೂರಕವಾಗಿವೆ. ದಕ್ಷತೆ, ಭದ್ರತೆ ಮತ್ತು ಕಾರ್ಯಾಚರಣೆಯ ವೇಗವನ್ನು ಹೆಚ್ಚಿಸುವ ಮೂಲಕ, ಜಾಗತಿಕವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ವಿಮಾನ ನಿಲ್ದಾಣವು ಸನ್ನದ್ಧವಾಗಿದೆ. ಜೊತೆಗೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಶ್ವಾಸಾರ್ಹವಾದ ಹಾಗೂ ಸುಗಮವಾದ ಸಂಪರ್ಕವನ್ನು ಇದು ಖಚಿತಪಡಿಸುತ್ತದೆ.