Scholarship Scheme: ಪ್ರತಿ ವಿದ್ಯಾರ್ಥಿಗೆ 5000 ; ಜೂ.27ರಂದು ವಿದ್ಯಾರ್ಥಿವೇತನ ವಿತರಣೆ : ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್ ಫೌಂಡೇಶನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜೂ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದಂದು ಸಂಜೆ 4 ಗಂಟೆಗೆ ಹೂ ಮಾರುಕಟ್ಟೆಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ 'ಜ್ಞಾನಸುಧಾ' ಹೆಸರಿನಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಮುಂದಾಗಿರುವ ಸಂಸದ ಡಾ.ಕೆ.ಸುಧಾಕರ್, 'ಜ್ಞಾನಸುಧಾ' ಹೆಸರಿನ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಣೆ ಮಾಡಿದರು -
ಚಿಕ್ಕಬಳ್ಳಾಪು : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಮುಂದಾಗಿರುವ ಸಂಸದ ಡಾ.ಕೆ.ಸುಧಾಕರ್(MP Dr K Sudhakar), 'ಜ್ಞಾನಸುಧಾ' ಹೆಸರಿನಲ್ಲಿ 5 ಸಾವಿರ ನಗದು ವಿದ್ಯಾರ್ಥಿವೇತನ ಯೋಜನೆ(Scholarship Scheme)ಯನ್ನು ಘೋಷಣೆ ಮಾಡಿದ್ದಾರೆ.
ಡಾ.ಕೆ.ಸುಧಾಕರ್ ಫೌಂಡೇಶನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜೂ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದಂದು ಸಂಜೆ 4 ಗಂಟೆಗೆ ಹೂ ಮಾರುಕಟ್ಟೆಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ 'ಜ್ಞಾನಸುಧಾ' ಹೆಸರಿನಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: MP Dr K Sudhakar: ಚಿಕ್ಕಬಳ್ಳಾಪುರದಲ್ಲಿ ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಈಗ ಸರ್ಕಾರಿ ಕಾಲೇಜುಗಳಲ್ಲೂ ಶುಲ್ಕ ಅಧಿಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶುಲ್ಕ ನೀಡುವುದು ಸೂಕ್ತ ಎಂದು ಕೆಲವರು ಸಲಹೆ ನೀಡಿದ್ದಾರೆ. ಅದಕ್ಕಾಗಿ 'ಜ್ಞಾನಸುಧಾ' ಹೆಸರಿನ ವಿದ್ಯಾಥಿವೇತನ ನೀಡಲು ತೀರ್ಮಾನಿಸಲಾಗಿದೆ ಎಂದರು.
ಈವರೆಗೆ 9 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಜೂ.20ರಂದು ಕೊನೆಯ ದಿನಾಂಕ ವಾಗಿದ್ದು, ಆ ಬಳಿಕ ಅರ್ಹರನ್ನು ಗುರುತಿಸಲಾಗುತ್ತದೆ. ಪಿಯುಸಿ, ಪದವಿ, ಸ್ನಾತಕೋತ್ತರ, ವಿದ್ಯಾರ್ಥಿಗಳಿಗೆ ತಲಾ 5000 ರೂ. ನೀಡಲಾಗುವುದು. ಇದೇ ದಿನ ಜನಪ್ರಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಈ ನೆರವನ್ನು ಸದ್ಬಳಕೆ ಮಾಡಬೇಕು. ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆಯಬೇಕು. ಈ ಭಾಗದ ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆಯಲು ಈ ವಿದ್ಯಾರ್ಥಿವೇತನ ಸಹಾಯ ವಾಗುತ್ತದೆ ಎಂದರು.
ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಕ್ರಮಗಳು
ನಾನು ರಾಜಕೀಯಕ್ಕೆ ಬರುವ ಮೊದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನಾನು ಹೆಚ್ಚು ಒತ್ತು ನೀಡಿದ್ದೇನೆ. ಯಾವುದೇ ಧರ್ಮ, ಜಾತಿಗಳ ತಾರತಮ್ಯವಿಲ್ಲದೆ ಅನುಕೂಲ ಕಲ್ಪಿಸಿಕೊಡುತ್ತಿದ್ದೇನೆ. ಯಾರು ನನಗೆ ಮತ ನೀಡಿದ್ದಾರೆ ಎಂದು ನೋಡದೆಯೇ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. 2008ರಿಂದ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಬಸ್‌ಪಾಸ್ ಮೊದಲಾದ ಸೌಲಭ್ಯ ನೀಡಲಾಗಿದೆ. ನಾನು ಶಾಸಕನಾಗಿದ್ದಾಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 3000 ಮಹಿಳಾ ಸಂಘಗಳ ರಚನೆ, 300 ಕೋಟಿ ರೂ. ಬಡ್ಡಿ ರಹಿತ ಸಾಲ ವಿತರಣೆ ಮಾಡಲಾಗಿದೆ. ಗ್ರಾಮೀಣ ಮಹಿಳೆಯರಿಗೆ ಕ್ರೀಡೆಗಳಿಗೆ ಸ್ಪೂರ್ತಿ ನೀಡಲಾಗಿದೆ. ಡಾ.ಕೆ.ಸುಧಾಕರ್ ಫೌಂಡೇಶನ್ ಹಾಗೂ ಸಾಯಿಕೃಷ್ಣ ಚಾರಿಟೆ ಬಲ್ ಟ್ರಸ್ಟ್ ವತಿಯಿಂದ ಕುಕ್ಕರ್, ಮಿಕ್ಸರ್, ರೆಫ್ರಿಜರೇಟರ್, ಟಿವಿ ನೀಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ನೀಡಿ ದಂತೆಯೇ, ಕ್ಷೇತ್ರದಲ್ಲಿ 75 ಸಾವಿರ ಕುಟುಂಬಕ್ಕೆ ಅಡುಗೆ ಸ್ಟೌವ್ ನೀಡಲಾಗಿದೆ. ಕೋವಿಡ್ ಸಮಯ ದಲ್ಲಿ ಆಶಾ ಕಾರ್ಯಕರ್ತೆಯರಿಗೆ ಫೌಂಡೇಶನ್‌ನಿಂದ ಪ್ರತಿ ತಿಂಗಳು 2 ವರ್ಷಗಳವರೆಗೆ 5000 ರೂ. ನೀಡಲಾಗಿತ್ತು. 75 ಸಾವಿರ ಕುಟುಂಬಕ್ಕೆ ೨ ವರ್ಷಗಳ ಕಾಲ ದಿನಸಿ ಕಿಟ್ ನೀಡಲಾಗಿತ್ತು. ಚಿಕ್ಕಬಳ್ಳಾ ಪುರ ಜಿಲ್ಲೆಯ ಜನರಿಗೆ ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಹಾಸಿಗೆ ಮೀಸಲಿಡ ಲಾಗಿತ್ತು. ಅದೇ ಸಮಯದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಅದು ಜಗತ್ತಿನ ಅತಿ ದೊಡ್ಡ ಆರೋಗ್ಯ ಶಿಬಿರ ಎಂದು ಹೆಸರಾಗಿತ್ತು. ಬಳಿಕ ಕೂಡ 2 ಸಾವಿರ ರೋಗಿಗಳಿಗೆ ಮುಂದು ವರಿದ ಚಿಕಿತ್ಸೆ ನೀಡಿ ಅದಕ್ಕೆ ಬೇಕಾದ ಆರ್ಥಿಕ ನೆರವು ನೀಡಲಾಗಿತ್ತು ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ
ಜಿಲ್ಲೆಯಲ್ಲಿ ಧಾರ್ಮಿಕ ಪರಂಪರೆ ಕಾಪಾಡಲು ಓಂ ಶಕ್ತಿ ಸಂಘಗಳಿಗೆ ನೆರವು, ಗಣೇಶ ಮೂರ್ತಿ ಖರೀದಿಗೆ ಸಹಾಯ, ಮುಸ್ಲಿನರಿಗೆ ರಮ್‌ಜಾನ್ ಕಿಟ್, ಕ್ರೈಸ್ತರಿಗೆ ಕ್ರಿಸ್‌ಮಸ್ ಕಿಟ್ ನೀಡಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಫೌಂಡೇಶನ್‌ನಿಂದಲೇ 60 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಿದ್ದು, ಗ್ರಾಮೀಣ ಜನರು ನೀರು ಸೇವಿಸುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡುತ್ತೇನೆ ಎಂದರು.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು, ಮಂಚೇನಹಳ್ಳಿ ತಾಲೂಕು ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಸಂಸದನಾದ ಬಳಿಕ ತಲಾ 65 ಲಕ್ಷ ರೂ. ವೆಚ್ಚದ 23 ಆರೋಗ್ಯ ಮಂದಿರಗಳನ್ನು ಜಿಲ್ಲೆಗೆ ತಂದಿದ್ದೇನೆ ಎಂದು ತಿಳಿಸಿದರು.