ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಸಿದವರಿಗೆ ಅನ್ನವೇ ದೇವರ ಸೇವೆ; ಎಪಿಎಂಸಿ ಅನ್ನಸಂತರ್ಪಣೆ ಮೂರನೇ ವರ್ಷಕ್ಕೆ ರೈತರು, ಕೂಲಿ ಕಾರ್ಮಿಕರು, ಹಮಾಲರಿಗೆ ನಿರಂತರ ಉಚಿತ ಊಟ

ಮಾರುಕಟ್ಟೆಗೆ ಬರುವ ರೈತರಿಗೆ ಕೆಲವೊಮ್ಮೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ.ಕನಿಷ್ಠ ಊಟಕ್ಕೂ ಹಣವಿಲ್ಲದ ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ. ಕೂಲಿ ಕಾರ್ಮಿಕರು ಮತ್ತು ಹಮಾಲರು ಕೂಡ ತಮ್ಮ ಸಂಪಾದನೆಯಲ್ಲಿ ಊಟಕ್ಕೆ ಖರ್ಚು ಮಾಡುವಷ್ಟು ಆರ್ಥಿಕ ಶಕ್ತಿ ಹೊಂದಿರದ ಸಂದರ್ಭ ಗಳಿವೆ. ಎಲ್ಲರ ಕಷ್ಟವನ್ನು ಅರಿತು ಹಸಿದವರಿಗೆ ಅನ್ನ ನೀಡುವ ಪುಣ್ಯದ ಕಾರ್ಯವನ್ನು ಆರಂಭಿ ಸಿರುವ ಯಲುವಳ್ಳಿ ಎನ್.ರಮೇಶ್ ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ

ಹಮಾಲರಿಗೆ ನಿರಂತರ ಉಚಿತ ಊಟ; ಭಾವುಕರಾದ ಯಲುವಳ್ಳಿ ಎನ್. ರಮೇಶ್

-

Profile
Ashok Nayak Jul 19, 2026 8:34 PM

ಚಿಕ್ಕಬಳ್ಳಾಪುರ: ನಗರದ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರು, ಕೂಲಿ ಕಾರ್ಮಿಕರು ಹಾಗೂ ಹಮಾಲಿಗಳಿಗೆ ಕಳೆದ ಎರಡು ವರ್ಷಗಳಿಂದ ವಾರದಲ್ಲಿ ಎರಡು ದಿನ ಉಚಿತ ಅನ್ನಸಂತರ್ಪಣೆ ನಡೆಸುತ್ತಿರುವ ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಯಲುವಳ್ಳಿ ಎನ್.ರಮೇಶ್ ಅವರ ಸೇವಾ ಯಜ್ಞ ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. 

ಈ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆಯಲ್ಲಿ ಸ್ವತಃ ಭಾಗವಹಿಸಿದ ರಮೇಶ್, "ಹಸಿದವರಿಗೆ ಅನ್ನ ನೀಡುವ ಪುಣ್ಯದ ಕಾರ್ಯಕ್ಕೆ ದೇವರು ನನ್ನನ್ನು ಆಯ್ಕೆ ಮಾಡಿರುವುದೇ ನನ್ನ ಬದುಕಿನ ದೊಡ್ಡ ಭಾಗ್ಯ" ಎಂದು ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ತಂದೆಯ ಮಾನವೀಯ ಮೌಲ್ಯಗಳೇ ಈ ಸೇವೆಗೆ ಪ್ರೇರಣೆಯಾಗಿದ್ದು, ಈ ಅನ್ನದಾಸೋಹ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Chikkaballapur News: ಅಂಬೇಡ್ಕರ್ ಸೇವಾ ಸಮಿತಿ, ಕರ್ನಾಟಕ ಅಂಬೇಡ್ಕರ್ ಸೇನೆ ಪ್ರತಿಭಟನೆ; ಜಿಲ್ಲಾಡಳಿತಕ್ಕೆ ಮನವಿ

ಎಪಿಎಂಸಿ ಮಾರುಕಟ್ಟೆಯ ಬಳಿಕ ಹೂವಿನ ಮಾರುಕಟ್ಟೆಯಲ್ಲಿಯೂ ಅನ್ನಸಂತರ್ಪಣೆ ಆರಂಭಿ ಸಿದ್ದು, ಸಮಾಜದ ಸ್ಥಿತಿವಂತರು ಕೈಜೋಡಿಸಿದರೆ ವಾರದ ಎಲ್ಲ ದಿನಗಳಲ್ಲೂ ಹಸಿದವರಿಗೆ ಅನ್ನ ನೀಡುವ ಕನಸು ನನಸಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಎಪಿಎಂಸಿ ಮಾರುಕಟ್ಟೆಯ ಹಿರಿಯ ವರ್ತಕ ಕಣಜೇನಹಳ್ಳಿ ಕೆ.ವಿ. ಸುರೇಶ್ ಮಾತನಾಡಿ, ಮಾರುಕಟ್ಟೆಗೆ ಬರುವ ರೈತರಿಗೆ ಕೆಲವೊಮ್ಮೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ಕನಿಷ್ಠ ಊಟಕ್ಕೂ ಹಣವಿಲ್ಲದ ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ. ಕೂಲಿ ಕಾರ್ಮಿಕರು ಮತ್ತು ಹಮಾಲರು ಕೂಡ ತಮ್ಮ ಸಂಪಾದನೆಯಲ್ಲಿ ಊಟಕ್ಕೆ ಖರ್ಚು ಮಾಡುವಷ್ಟು ಆರ್ಥಿಕ ಶಕ್ತಿ ಹೊಂದಿರದ ಸಂದರ್ಭ ಗಳಿವೆ. ಎಲ್ಲರ ಕಷ್ಟವನ್ನು ಅರಿತು ಹಸಿದವರಿಗೆ ಅನ್ನ ನೀಡುವ ಪುಣ್ಯದ ಕಾರ್ಯವನ್ನು ಆರಂಭಿ ಸಿರುವ ಯಲುವಳ್ಳಿ ಎನ್.ರಮೇಶ್ ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ ಎಂದರು.

699429 (1) ಒಕ

ಎರಡು ವರ್ಷಗಳ ಹಿಂದೆ ವಾರದಲ್ಲಿ ಎರಡು ದಿನ ಅನ್ನಸಂತರ್ಪಣೆ ನಡೆಸಲು ಸಾಧ್ಯವಾಗುವು ದಿಲ್ಲ, ಈ ಕಾರ್ಯಕ್ರಮ ನಿಂತುಹೋಗುತ್ತದೆ ಎಂದು ಕೆಲವರು ಮಾತನಾಡಿದ್ದರು. ಆದರೆ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಅನ್ನಸಂತರ್ಪಣೆ ಕಾರ್ಯಕ್ರಮವೇ ಅದಕ್ಕೆ ಉತ್ತರ ನೀಡಿದೆ.ಮುಂದಿನ ದಿನಗಳಲ್ಲಿಯೂ ರಮೇಶ್ ಅವರ ಕುಟುಂಬ ಸದಸ್ಯರು ಈ ಕಾರ್ಯಕ್ರಮ ಮುಂದುವರಿಸಲಿದ್ದಾರೆ ಎಂದು ತಿಳಿಸಿದರು.

ಎನ್ ರಮೇಶ್ ಅವರ ಸೊಸೆ ಹೇಮಲತಾ ಜನಾರ್ದನ್ ಮಾತನಾಡಿ, ಹಸಿದವರಿಗೆ ಅನ್ನ ನೀಡಬೇಕು, ಕೈಲಾದಷ್ಟು ಜನರಿಗೆ ಸಹಾಯ ಹಸ್ತ ಚಾಚಬೇಕು ಹಾಗೂ ಮನೆ ಬಾಗಿಲಿಗೆ ಬರುವ ಬಡವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂಬುದು ರಮೇಶ್ ಅಣ್ಣನವರ ವಿಚಾರಧಾರೆ. ಅವರು ತೋರಿಸಿರುವ ಈ ದಾರಿಯನ್ನು ನಾವು ಎಂದಿಗೂ ಬಿಡುವುದಿಲ್ಲ.ಅವರ ಜನಪರ ಕಾರ್ಯ ಗಳಿಂದ ದೊರೆಯುತ್ತಿರುವ ಜನಮೆಚ್ಚುಗೆ ಮತ್ತು ಗೌರವ ನಮಗೆ ಸದಾ ಸ್ಫೂರ್ತಿಯಾಗಿದೆ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ಯಲುವಳ್ಳಿ ಜನಾರ್ದನ್ ಸೇರಿದಂತೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.