ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಶಿಡ್ಲಘಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚ

ನಗರ ಹೊರವಲಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಉಪನೋಂದಣಾಧಿಕಾರಿಗಳ ಕಚೇರಿಯನ್ನು ಲಂಚ ಮುಕ್ತಗೊಳಿಸಲು  ಕೂಡಲೇ ಉಪ ಅಧಿಕಾರಿಯನ್ನು ನೋಂದಣಾಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ಮನವಿ ಪತ್ರ ನೀಡಿ ಒತ್ತಾಯಿಸಿದರು

Chikkaballapur News: ಉಪ ನೋಂದಣಾಧಿಕಾರಿ ಅಮಾನತ್ತಿಗೆ ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಶಿಡ್ಲಘಟ್ಟ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಲಂಚ ಪ್ರಕರಣ ಉಪ ನೋಂದಣಾಧಿಕಾರಿ ಸೇರಿ ಮತ್ತಿತರರ ಅಮಾನತ್ತಿಗೆ ಆಗ್ರಹಿಸಿ ರೈತ ಸಂಘದಿAದ ಜಿಲ್ಲಾದಿಕಾರಿ ಪಿ.ಎನ್.ರವೀಂದ್ರಗೆ ಮನವಿ ಸಲ್ಲಿಸಿದರು.

Profile Ashok Nayak Jan 25, 2025 7:52 PM

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿಗೆ ಹಾಗೂ, ಇಸಿ ಪತ್ರ, ಹಳೇ ಕ್ರಯ ಪತ್ರಗಳು ಪಡೆಯಲು ಸಾರ್ವಜನಿಕರಿಂದ ಭಾರೀ ಪ್ರಮಾಣದ ಲಂಚ ಪಡೆಯುತ್ತಿರುವ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟರುವ ಉಪ ನೋಂದಣಾಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಿ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಉಪನೋಂದಣಾಧಿಕಾರಿಗಳ ಕಚೇರಿಯನ್ನು ಲಂಚಮುಕ್ತಗೊಳಿಸಲು  ಕೂಡಲೇ ಉಪ ಅಧಿಕಾರಿಯನ್ನು ನೋಂದಣಾಧಿಕಾರಿಯನ್ನು ಅಮಾ ನತ್ತು ಮಾಡಬೇಕು ಎಂದು ಮನವಿ ಪತ್ರ ನೀಡಿ ಒತ್ತಾಯಿಸಿದರು.

ಇದನ್ನೂ ಓದಿ: Chikkaballapur News: ಜ.21 ರಂದು ಗುಲಾಬಿ ಆಂದೋಲನ ಹಾಗೂ ಇತರ ಸುದ್ದಿಗಳು

ಶಿಡ್ಲಘಟ್ಟ ತಾಲ್ಲೂಕು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಸ್ತುತ ಟಿ.ಕೆ. ಕಮಲಾಕ್ಷಿ ಅವರು ಪ್ರಭಾರ ಉಪನೋಂಧಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಪ್ರತಿ ದಸ್ತಾ ವೇಜುಗಳ ನೋಂಧಣಿಗೆ ಲಂಚದ ಹಣ ನಿಗಧಿ ಮಾಡಿದ್ದು,ಇದಕ್ಕಾಗಿಯೇ ಕಛೇರಿಯಲ್ಲಿ ಅನಧಿಕೃತ ರಾದ ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡು ಲಂಚದ ಹಣ ವಸೂಲಿ ಮಾಡುತ್ತಿರುವುದು ಮಾಧ್ಯ ಮಗಳಲ್ಲಿ ಸುದ್ದಿ' ವರದಿಯಾಗಿರುತ್ತದೆ.

ಜೊತೆಗೆ ಹಳೇ ಕ್ರಯ ಪತ್ರದ ನಕಲು, ಹಳೇ ಇ.ಸಿ, ಸೇರಿದಂತೆ ಪ್ರತಿಯೊಂದು ದಸ್ತಾವೇಜಿಗೆ ಇಂತಿಷ್ಟು ಹಣ ನಿಗಧಿ ಮಾಡಿಕೊಂಡು ಯಾರ ಭಯವಿಲ್ಲದೆ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಕಚೇರಿಯಲ್ಲಿ ಮಂಜುನಾಥ ಮತ್ತು ಮೂರ್ತಿ ಎಂಬ ಇಬ್ಬರು ಅನಧಿಕೃತ ವ್ಯಕ್ತಿಗಳು ಕಛೇರಿಯಲ್ಲಿಯೇ ಬೀಡು ಬಿಟ್ಟಿದ್ದು ಪ್ರತಿ ನಿತ್ಯ ಕಾನೂನು ಬಾಹಿರವಾಗಿ ಇವರು ಕೆಲಸ ಮಾಡುತ್ತಿದ್ದಾರೆ.

ಸರ್ಕಾರಿ ಕಛೇರಿಯಲ್ಲಿ ಖಾಸಗಿ ವ್ಯೆಕ್ತಿಗಳು ಕುಳಿತು ರಾಜಾರೋಷವಾಗಿ ಕೆಲಸ ಮಾಡಲು ಯಾವ ಕಾನೂನಿನಲ್ಲಿ ಅವಕಾಶ ಇದೆ. ಪ್ರತಿ ದಸ್ತಾವೇಜು ನೋಂದಣಿಗೆ ಡಾಟಾ ಎಂಟ್ರಿ ಅಪರೇಟರ್‌ಗಳಿಗೂ ಕನಿಷ್ಟ 300-500 ರೂಗಳವರೆಗೆ ಹಣ ನಿಗಧಿ ಮಾಡಿಕೊಂಡಿದ್ದಾರೆ. ಪ್ರತಿ ದಸ್ತಾವೇಜಿಗೆ ಸೀಲ್ ಮೊಹರು ಹಾಕುವುದಕ್ಕೆ ಕನಿಷ್ಟ 200 ರಿಂದ 500 ನಿಗದಿ ಮಾಡಿಕೊಂಡಿದ್ದು, ಇನ್ನೂ ಪ್ರತಿ ದಸ್ತಾ ವೇಜಿಗೆ ಪ್ರಭಾರಿ ಉಪ ನೋಂದಣಾಧಿಕಾರಿ ಟಿ.ಕೆ.ಕಮಲಾಕ್ಷಿ ಅವರು ಮೂರ್ತಿ ಎಂಬವವರ ಮೂಲಕ ಹಣ ಸಂಗ್ರಹಿಸಿ, ಮನಸೋ ಇಚ್ಚೆಯಂತೆ ಲಂಚದ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.

ಪ್ರತಿ ನಿತ್ಯ ದಸ್ತಾವೇಜುಗಳ ನೋಂದಣಿಗೆ ಅನುಗುಣವಾಗಿ ಸರಾಸರಿ 1.5 ಲಕ್ಷ ದಿಂದ 2 ಲಕ್ಷದವರೆಗೆ ಲಂಚದ ವಹಿವಾಟು ನಡೆಸುತ್ತಿದ್ದಾರೆ. ಆದುದ್ದರಿಂದ ತಾವು ದಯವಿಟ್ಟು ಪ್ರಭಾರ ಉಪ ನೋಂದ ಣಾಧಿಕಾರಿ ಟಿ.ಕೆ.ಕಮಲಾಕ್ಷಿ ಅವರ ಅವಧಿಯಲ್ಲಿ ಭ್ರಷ್ಟಚಾರದ ಸುದ್ದಿ ವಿಡಿಯೋ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಕಛೇರಿಯಲ್ಲಿ ಅನಧಿಕೃತವಾಗಿ ಕೆಲಸ ಮಾಡುತ್ತಿರುವ ಮೂರ್ತಿ ಮತ್ತು ಮಂಜುನಾಥ ರವರ ಮೇಲೆ ಕ್ರಮ ಜರುಗಿಸಿ ಭ್ರಷ್ಟಾಚಾರಕ್ಕೆ ಕಡಿವಾಣ 'ಹಾಕಬೇಕೆಂದು ತಮ್ಮಲ್ಲಿ ಈ ಮೂಲಕ ರೈತ ಸಂಘ ಒತ್ತಾಯಿಸುತ್ತದೆ. ಸದರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ  ಕ್ರಮ ಕೈಗೊಳ್ಳದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ರೂಪಿಸಲಾಗುವುದು ಎಂದು ತಮ್ಮ ಗಮನಕ್ಕೆ ತರಬಯಸುತ್ತೇವೆ  ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಕಾರ್ಯದ್ಯಕ್ಷ  ಎಚ್.ಎನ್. ಕದೀರೇಗೌಡ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವೀನಚಾರ್ಯ, ಪ್ರಧಾನ ಕಾರ್ಯದರ್ಶಿ ಅರಿಕೆರೆ ಸಂತೋಷ್, ಉಪಾದ್ಯಕ್ಷ  ಡಿ.ವಿ,ನಾರಾಯಣಸ್ವಾಮಿ, ಪದಾಧಿಕಾರಿ ಗಳಾದ ವಸಂತ, ಮುನಿರಾಜ್, ಚಿಕ್ಕಪ್ಪಯ್ಯ, ಮತ್ತಿತರರು ಇದ್ದರು.