ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Volleyball: ಮೇಲೂರಿನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಸಂಭ್ರಮ: ಸರ್ಜಾಪುರ ಜೈಭೀಮ್ ತಂಡಕ್ಕೆ ಚಾಂಪಿಯನ್ ಪಟ್ಟ

ಎರಡು ದಿನಗಳ ಕಾಲ ನಡೆದ ರೋಚಕ ಪಂದ್ಯಾವಳಿಯಲ್ಲಿ ಸರ್ಜಾಪುರ ಜೈಭೀಮ್ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ ₹1 ಲಕ್ಷ ನಗದು ಬಹುಮಾನವನ್ನು ತನ್ನ ದಾಗಿಸಿ ಕೊಂಡಿತು. ಹಾಸನ ತಂಡ ದ್ವಿತೀಯ ಸ್ಥಾನ ಪಡೆದು ₹75 ಸಾವಿರ, ಮೇಲೂರು ರಿಪಬ್ಲಿಕ್ ತಂಡ ತೃತೀಯ ಸ್ಥಾನ ಪಡೆದು ₹50 ಸಾವಿರ ಹಾಗೂ ರೆಡ್ಡಿ ತಂಡ ನಾಲ್ಕನೇ ಸ್ಥಾನ ಪಡೆದು ₹25 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡವು.

ಸರ್ಜಾಪುರ ಜೈಭೀಮ್ ತಂಡಕ್ಕೆ ಚಾಂಪಿಯನ್ ಪಟ್ಟ

-

Profile
Ashok Nayak May 12, 2026 10:25 PM

ಶಿಡ್ಲಘಟ್ಟ: ತಾಲೂಕಿನ ಮೇಲೂರು ಗ್ರಾಮದಲ್ಲಿ ಜೈ ಕರ್ನಾಟಕ ವಾಲೀಬಾಲ್(Volleyball) ಸಂಸ್ಥೆ ವತಿಯಿಂದ ಹಾಗೂ ಗ್ರಾಮದ ಹಿರಿಯರು–ಕಿರಿಯರ ಸ್ಮರಣಾರ್ಥ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಶಾಸಕ ಬಿ.ಎನ್. ರವಿಕುಮಾರ್ ಅವರ ಸಹಭಾಗಿತ್ವದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ ಹಲವು ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿ ಗಳ ಗಮನ ಸೆಳೆದವು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಇದೇ ವೇಳೆ, ಗ್ರಾಮದ ಹಿರಿಯ ವಾಲೀಬಾಲ್ ಆಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಹಿರಿಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಇದನ್ನೂ ಓದಿ: IPL 2026: ಮುಂಬೈ ಇಂಡಿಯನ್ಸ್‌ಗೆ ನೂತನ ನಾಯಕನನ್ನು ಸೂಚಿಸಿದ ಸಂಜಯ್‌ ಮಾಂಜ್ರೇಕರ್‌!

ಎರಡು ದಿನಗಳ ಕಾಲ ನಡೆದ ರೋಚಕ ಪಂದ್ಯಾವಳಿಯಲ್ಲಿ ಸರ್ಜಾಪುರ ಜೈಭೀಮ್ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ ₹1 ಲಕ್ಷ ನಗದು ಬಹುಮಾನವನ್ನು ತನ್ನ ದಾಗಿಸಿಕೊಂಡಿತು. ಹಾಸನ ತಂಡ ದ್ವಿತೀಯ ಸ್ಥಾನ ಪಡೆದು ₹75 ಸಾವಿರ, ಮೇಲೂರು ರಿಪಬ್ಲಿಕ್ ತಂಡ ತೃತೀಯ ಸ್ಥಾನ ಪಡೆದು ₹50 ಸಾವಿರ ಹಾಗೂ ರೆಡ್ಡಿ ತಂಡ ನಾಲ್ಕನೇ ಸ್ಥಾನ ಪಡೆದು ₹25 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡವು. ವಿಜೇತ ತಂಡ ಗಳ ನಾಯಕರಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.

ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರಿಗೆ ಯಾವುದೇ ತೊಂದರೆ ಯಾಗದಂತೆ ಸಮರ್ಪಕ ಬೆಳಕು, ಕುಳಿತುಕೊಳ್ಳುವ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಗಳನ್ನು ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಗಂಗಾದೇವಿ ಟ್ರಸ್ಟ್ ಧರ್ಮದರ್ಶಿ ರಾಮಕೃಷ್ಣಪ್ಪ, ಜೈ ಕರ್ನಾಟಕ ವಾಲೀಬಾಲ್ ಸಂಸ್ಥೆಯ ಅಧ್ಯಕ್ಷ ಸಿ.ಎನ್. ಸೋರೆಗೌಡ, ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ. ಉಮೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಎಸ್.ಎನ್. ಪಾರ್ಥಸಾರಥಿ, ಡಿ. ಮುನಿಶಾಮಯ್ಯ, ಗಿರೀಶ್ ನಾಯಕ್, ರಾಜು, ಪ್ರದೀಪ್ ಜೋಗಿ, ಟಿ. ವಿಜಯಕುಮಾರ್, ಆರ್. ಚಂದ್ರೇಗೌಡ, ತಿಮ್ಮರಾಜು, ಅಣ್ಣಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಹಾಜರಿದ್ದರು.