Chikkaballapur News: ಚಿಕ್ಕಪೈಲಗುರ್ಕಿ ಕುರುಬರಹಳ್ಳಿ ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆ
ಎರಡೂ ಗ್ರಾಮಗಳ ಜನತೆಯಲ್ಲಿ ಕಾಣಿಸಿಕೊಂಡಿರುವ ಅನಾರೋಗ್ಯ ಸಮಸ್ಯೆಗೆ ಗ್ರಾಮ ಪಂಚಾ ಯಿತಿ ಸರಬರಾಜು ಮಾಡುತ್ತಿರುವ ನೀರೇ ಮೂಲವಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ಬಂದಿದೆ.ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಸ್ಯೆ ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆಯೊಂದಿಗೆ ಮನೆ ಮನೆ ಸರ್ವೆ ನಡೆಸಿದ್ದಾರೆ.


ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕು ದೊಡ್ಡ ಪೈಲಗುರ್ಕಿ ಗ್ರಾಮ ಪಂಚಾಯಿತಿ ಯಿಂದ ಚಿಕ್ಕಪೈಲಗುರ್ಕಿ ಹಾಗೂ ಹೆಚ್. ಕುರುಬಹಳ್ಳಿ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ.ಈ ನೀರು ಪೈಪ್ ಬದಲಾವಣೆಯಿಂದ ಕಲುಷಿತ ಗೊಂಡಿದ್ದು ಇದೇ ನೀರು ಸೇವಿ ಸಿದ ಪರಿಣಾಮ ಎರಡೂ ಗ್ರಾಮಗಳ ಜನರ ಆರೋಗ್ಯ ಹದಗೆಡುತ್ತಿದ್ದು 40ಕ್ಕೂ ಹೆಚ್ಚು ಮಂದಿಯಲ್ಲಿ ಮೈಕೋನೋವು, ವಾಂತಿ ಬೇದಿ, ಜ್ವರ ಪ್ರಾರಂಭವಾಗಿದೆ. ಕಳೆದ ಒಂದು ವಾರದಿಂದ ಈ ಸಮಸ್ಯೆ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹೆಚ್.ಕುರುಬರಹಳ್ಳಿ ಗ್ರಾಮದ 67 ವರ್ಷದ ವೃದ್ಧ ಸಿದ್ದಪ್ಪ ಎಂಬುವರು ಶನಿವಾರ ಮೃತಪಟ್ಟಿರುವುದು ಎರಡೂ ಗ್ರಾಮಗಳ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.
ಇದನ್ನೂ ಓದಿ: Tumkur (Chikkanayakanahalli): ಬೆಂಕಿ ಅನಾಹುತ: 16 ಗುಡಿಸಲು ಭಸ್ಮ
ಎರಡೂ ಗ್ರಾಮಗಳ ಜನತೆಯಲ್ಲಿ ಕಾಣಿಸಿಕೊಂಡಿರುವ ಅನಾರೋಗ್ಯ ಸಮಸ್ಯೆಗೆ ಗ್ರಾಮ ಪಂಚಾಯಿತಿ ಸರಬರಾಜು ಮಾಡುತ್ತಿರುವ ನೀರೇ ಮೂಲವಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ಬಂದಿದೆ.ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಗಳು ಮತ್ತು ಸಿಬ್ಬಂದಿ ಸಮಸ್ಯೆ ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಯೊಂದಿಗೆ ಮನೆ ಮನೆ ಸರ್ವೆ ನಡೆಸಿದ್ದಾರೆ.
ಈವೇಳೆ ವಾಂತಿ ಬೇದಿ ಮೈಕೈ ನೋವಿನಿಂದ ನರಳುತ್ತಿರುವವರ ಮಲ ಮೂತ್ರ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ. ಇದರೊಂದಿಗೆ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರನ್ನೂ ಪ್ರಯೋಗಾಲಯಕ್ಕೆ ಕಳಿಸಿದ್ದು ವರದಿ ಇನ್ನಷ್ಟೇ ಬರಬೇಕಿದೆ ಎನ್ನುವುದು ಆರೋಗ್ಯ ಇಲಾಖೆ ಸಿಬ್ಬಂದಿಯ ಮಾತು.
ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಕುರುಬರಹಳ್ಳಿ ಗ್ರಾಮದಲ್ಲಿ ಮೃತಪಟ್ಟಿರುವ ವೃದ್ಧನ ಸಾವಿಗೆ ಸಾಂಕ್ರಾಮಿಕ ರೋಗಬಾದೆ ಕಾರಣವಲ್ಲ.ಬದಲಿಗೆ ಆತ ಮಧ್ಯಪಾನ ಮಾಡುತ್ತಿದ್ದ,ಅದರಿಂದಲೇ ಸಾವಾ ಗಿರಬಹುದು ಎಂಬ ಮಾಹಿತಿಯಿದೆ ಎನ್ನುವ ಮೂಲಕ ಗ್ರಾಮಸ್ಥರ ಆರೋಪವನ್ನು ನಿರಾಕರಿಸಿದ್ದಾರೆ.
ಈಬಗ್ಗೆ ವಿಶ್ವವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರು ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ ಅವರನ್ನು ವಿಚಾರಿಸಲಾಗಿ ಒಂದು ವಾರದಿಂದ ಎರಡೂ ಗ್ರಾಮಗಳ ಕೆಲವರಲ್ಲಿ ವಾಂತಿ ಬೇದಿ ಕಾಣಿಸಿಕೊಂಡಿದೆ.ಇವರೆಲ್ಲಾ ಅವರಿಗೆ ಅನುಕೂಲ ಇರುವ ಆಸ್ಪತ್ರೆಗಳಿಗೆ ತೆರಳಿ ತೋರಿಸಿಕೊಂಡಿದ್ದಾgವೀ ಪೈಕಿ ಯಾರೂ ಕೂಡ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ದಾಖಲಾಗಿಲ್ಲ.ಸುಮಾರು ೨೦ ಮಂದಿಯಲ್ಲಿ ವಾಂತಿ ಬೇದಿ ಕಾಣಿಸಿಕೊಂಡಿದೆ. ಆದರೆ ಹೆಚ್.ಕುರುಬರಹಳ್ಳಿ ಗ್ರಾಮದ ಸಿದ್ಧಪ್ಪ ಎಂಬ ವ್ಯಕ್ತಿ ಶನಿವಾರ ಮೃತಪಟ್ಟಿರುವ ಬಗ್ಗೆ ಮಾಹಿತಿಯಿದೆ.ಇವರು ಮದ್ಯಪಾನ ಸೇವಿಸುತ್ತಿದ್ದರೆಂಬ ಬಗ್ಗೆ ಅವರ ಕುಟುಂದವರೇ ಹೇಳುತ್ತಾರೆ.ಇದರ ಅಡ್ಡಪರಿಣಾಮದಿಂದ ಮೃತಪಟ್ಟಿರಬಹುದು.ವೈದ್ಯಕೀಯ ವರದಿ ಬಂದ ನಂತರ ಸಾವಿಗೆ ನಿಖರ ಮಾಹಿತಿ ತಿಳಿಯಲಿದೆ ಎನ್ನುತ್ತಾರೆ.
ಬೇದಿಗೆ ಆರಂಭವಾಗಿರುವುದರಿAದ ಗ್ರಾಮಸ್ಥರು ಸ್ವಚ್ಛಾಹಾರಕ್ಕೆ ಒತ್ತು ನೀಡಬೇಕು. ಬಿಸಿಲಿನಲ್ಲಿ ತಿರುಗಬಾರದು.ಕರಿದ ಪದಾರ್ಥಗಳು,ತೆರದಿಟ್ಟ ಹಣ್ಣುಗಳು ತಿನ್ನಬಾರದು ಕುದಿಸಿ ಆರಿಸಿದ ನೀರನ್ನು ಕುಡಿಯಿರಿ ಎಂಬ ಬಗ್ಗೆ ಜಗೃತಿ ಮೂಡಿಸಲಾಗುತ್ತಿದೆ. ನಿಯಮಿ ತವಾಗಿ ಆರೋಗ್ಯ ತಪಾಸಣೆ ಕೂಡ ಮಾಡಲಾಗುತ್ತಿದೆ ಎನ್ನುವುದು ಆರೋಗ್ಯ ಇಲಾಖೆಯ ಮಾಹಿತಿ.
ಒಟ್ಟಾರೆ ಸಿದ್ದಪ್ಪ ಅವರ ಸಾವು ಗ್ರಾಮಸ್ಥರಲ್ಲಿ ಭೀತಿಗೆ ಕಾರಣವಾಗಿರುವುದಂತೂ ಸತ್ಯ. ಮುಂದೆ ಈ ಸಮಸ್ಯೆಯನ್ನು ಜಿಲ್ಲಾಡಳಿತ ಹೇಗೆ ನಿಭಾಯಿಸುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.