ನ.27ರಂದು ನೂತನ ಪತ್ರಕರ್ತ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ನಗರದ ಪತ್ರಕರ್ತರ ಭವನದಲ್ಲಿ ನವೆಂಬರ್ 27ರಂದು ಗುರುವಾರ ಬೆಳಗ್ಗೆ 10:30 ಕ್ಕೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ 2025 -2028 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಸಂಘದ ರಾಜ್ಯಾಧ್ಯಕ್ಷ *ಶಿವಾನಂದ ತಗಡೂರು* ರವರು ಕಾರ್ಯ ಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
-
ಚಿಕ್ಕಬಳ್ಳಾಪುರ: ನಗರದ ಪತ್ರಕರ್ತರ ಭವನದಲ್ಲಿ ನವೆಂಬರ್ 27ರಂದು ಗುರುವಾರ ಬೆಳಗ್ಗೆ 10:30 ಕ್ಕೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(District Working Journalists Association)ದ 2025 -2028 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಸಂಘದ ರಾಜ್ಯಾಧ್ಯಕ್ಷ *ಶಿವಾನಂದ ತಗಡೂರು* ರವರು ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎಂ.ಜಯರಾಮ್ ವಹಿಸಲಿದ್ದಾರೆ.
ಇದನ್ನೂ ಓದಿ: Chikkaballapur News: ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ: ಡೀನ್ ಡಾ.ಎಂ.ಎಲ್.ಮಂಜುನಾಥ್
ಮುಖ್ಯ ಅತಿಥಿಗಳಾಗಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಸಿ.ಬಾಲ ಕೃಷ್ಣ ರಾಜ್ಯ ಸಮಿತಿ ನಿಕಟ ಪೂರ್ವ ಸದಸ್ಯ ಎನ್.ವೆಂಕಟೇಶ್, ಹಿರಿಯ ಪತ್ರಕರ್ತರಾದ ಎನ್.ರವಿಕುಮಾರ್ ಭಾಗವಹಿಸಲಿದ್ದಾರೆ
ಜಿಲ್ಲಾ ವಾರ್ತಾ ಅಧಿಕಾರಿ ಎಂ ಜುಂಜಣ್ಣ ಸಂಘದ ನೂತನ ಅಧ್ಯಕ್ಷ ವಿ.ರವಿಕುಮಾರ್ ಉಪಸ್ಥಿತಿ ಇರಲಿದ್ದಾರೆ. ಸಂಘದ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಸೋ.ಸು ನಾಗೇಂದ್ರ ನಾಥ್ ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ ತಿಳಿಸಿದ್ದಾರೆ.