BBK 12: ಗಿಲ್ಲಿ ನಟ ಆಯ್ತು, ಈಗ ಅಶ್ವಿನಿ ಗೌಡ ಸರದಿ; 'ಬಿಗ್ ಬಾಸ್' ಮನೆಗೆ ಬಂದ ಅತಿಥಿಗಳ ಮೇಲೆಯೇ ರಾಂಗ್ ಆದ ರಾಜಮಾತೆ!
Bigg Boss Kannada 12 Ashwini Gowda: 'ಬಿಗ್ ಬಾಸ್ ಪ್ಯಾಲೇಸ್' ಟಾಸ್ಕ್‌ನಲ್ಲಿ ಅತಿಥಿ ಚೈತ್ರಾ ಕುಂದಾಪುರ, ಮನೆಯ ಸಿಬ್ಬಂದಿಗಳೆಲ್ಲರೂ "ನಮ್ಮ ತಲೆಯಲ್ಲಿ ಬುದ್ಧಿ ಇಲ್ಲ" ಎಂದು ಒಪ್ಪಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರೆ, ಅಶ್ವಿನಿ ಗೌಡ ಇದನ್ನು ವಿರೋಧಿಸಿದರು. ಅಶ್ವಿನಿ ಅವರ ನಡೆಯಿಂದ ಅತಿಥಿಗಳು ಅಸಮಾಧಾನಗೊಂಡಿದ್ದು, ಈ ವಿವಾದ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.
-
ಬಿಗ್ ಬಾಸ್ ಮನೆಯೊಳಗೆ ಅತಿಥಿಗಳಾಗಿ ಬಂದಿರುವ ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಅವರ ಬಳಿ ಗಿಲ್ಲಿ ನಟ ನಡೆದುಕೊಂಡ ರೀತಿ ಈಗ ದೊಡ್ಡ ಸಮಸ್ಯೆಯನ್ನು ತಂದೊಡ್ಡಿತ್ತು. ಇದೀಗ ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದಾರೆ. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ಚೈತ್ರಾ ಕುಂದಾಪುರ ಬಿಬಿ ಪ್ಯಾಲೇಸ್‌ನ ಸಿಬ್ಬಂದಿಗಳಿಗೆ ಉತ್ತರವನ್ನು ಕೇಳುತ್ತಲೇ ಇದ್ದರು.
ಈ ಮಧ್ಯೆ ಕಾವ್ಯಗೂ ಕೇಳಿದಾಗ, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿದರು. ಅದನ್ನೇ ಪಾಯಿಂಟ್ ಔಟ್ ಮಾಡಿದ ಚೈತ್ರಾ, ಮನೆಯೊಳಗೆ ಇರುವ ಎಲ್ಲರೂ ಈ ಮಾತನ್ನು ರಿಪೀಟ್ ಮಾಡಬೇಕು. ಆಗಲೇ ತಿಂಡಿ ತಿನ್ನುವುದಾಗಿ ಹೇಳಿದರು.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಸಾಲಾಗಿ ಬಂದು ಬುದ್ಧಿ ಇಲ್ಲ ಎಂದ ಸ್ಪರ್ಧಿಗಳು
ನಂತರ ಕಾವ್ಯ ಅವರು ಮನೆಯ ಸಿಬ್ಬಂದಿಗಳಿಗೆ ಈ ಮಾತನ್ನು ಹೇಳಿದಾಗ, ಅಭಿಷೇಕ್, ಸೂರಜ್, ಗಿಲ್ಲಿ ನಟ ಎಲ್ಲರೂ ಬಂದು ಚೈತ್ರಾ ಅವರ ಬಳಿ ಬಂದು, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ನಮ್ಮ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳುತ್ತಾ ಹೋದರು. ಆದರೆ ಅಶ್ವಿನಿ ಗೌಡ ಅವರು ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ನಾನು ಕ್ಷಮೆ ಕೇಳುತ್ತೇನೆ ವಿನಃ ಬುದ್ದಿ ಇಲ್ಲ ಎಂದೆಲ್ಲಾ ಹೇಳುವುದಿಲ್ಲ ಎಂದು ನೇರವಾಗಿ ಹೇಳಿದರು.
BBK 12: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ-ಅಶ್ವಿನಿ ನಡುವೆ ವಾರ್: ಮೂಕವಿಸ್ಮಿತರಾದ ಮನೆಮಂದಿ
ಮನವೊಲಿಸಲು ಪ್ರಯತ್ನಿಸಿದ ಅಭಿ
ನಂತರ ಚೈತ್ರಾ ಕುಂದಾಪುರ ಅವರ ಬಳಿ ಹೋದ ಅಶ್ವಿನಿ, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇಲ್ಲ. ಕ್ಷಮೆ ಇರಲಿ" ಎಂದರು. ಆದರೆ ಚೈತ್ರಾ ಕುಂದಾಪುರ ಮಾತ್ರ, "ನಮ್ಮ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿ ಅಂತ ಪಟ್ಟು ಹಿಡಿದರು. ಆದರೆ ಅಶ್ವಿನಿ ಗೌಡ ಅವರು ಒಪ್ಪಲಿಲ್ಲ. ಬಳಿಕ ಅಶ್ವಿನಿ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ಶುರುವಾಯಿತು. ಅಶ್ವಿನಿ ಗೌಡ, "ತಲೆಯಲ್ಲಿ ಬುದ್ದಿ ಇಲ್ಲ ಎಂದು ನೀವು ಬೇಕಾದರೆ ಕೇಳಿ, ನನ್ನ ಯಾರು ಕನ್ವಿನ್ಸ್ ಮಾಡೋದಕ್ಕೆ ಪ್ರಯತ್ನಪಡಬೇಡಿ" ಎಂದು ವಾರ್ನಿಂಗ್ ಕೊಟ್ಟರು.
ರಾಂಗ್ ಆದ ರಾಜಮಾತೆ
ಆದರೆ, ಕಾವ್ಯ ಹಾಗೂ ಇನ್ನಿತರರು ಅಶ್ವಿನಿಯನ್ನು ಕನ್ವಿನ್ಸ್ ಮಾಡಲು ಮುಂದಾಗುತ್ತಲೇ ಇದ್ದರು. ಈ ಮೊದಲು ಬಂದ ಅತಿಥಿಗಳನ್ನು ಗಿಲ್ಲಿ ನಟ ಸಿಕ್ಕಾಪಟ್ಟೆ ಕಾಡಿದ್ದರು. ಆ ಬಳಿಕ ಅಶ್ವಿನಿ ಗೌಡ ಅವರು ಹಠ ಹಿಡಿದು ಕುಂತರು. "ನನಗೆ ಬುದ್ದಿ ಇಲ್ವಾ? ನಾನ್ಯಾಕೆ ಕೇಳಬೇಕು? ನಾನಿಲ್ಲಿ ವೆಯ್ಟರ್.. ಹಾಗಾದರೆ ನನಗೆ ಬೆಲೆ ಇಲ್ಲವೇ? ನನಗೆ ಈ ಥರ ಹೇಳುವುದಕ್ಕೆ ಇಷ್ಟವಿಲ್ಲ" ಎಂದು ಅಶ್ವಿನಿ ಪ್ರಶ್ನೆ ಮಾಡಿದರು. ಯಾವಾಗ ಅಶ್ವಿನಿ ರಾಂಗ್ ಆಗಿದ್ದರೆ ಎಂಬುದು ಚೈತ್ರಾ ಕುಂದಾಪುರಗೆ ಇನ್ನಷ್ಟು ಕಿರಿ ಕಿರಿ ಆಯಿತು. ಅಲ್ಲದೆ, ಅತಿಥಿಗಳೆಲ್ಲಾ ಅಶ್ವಿನಿ ಮೇಲೆ ತಿರುಗಿಬಿದ್ದರು.
ಅತಿಥಿಗಳೆಲ್ಲಾ ಸೇರಿ ಅಶ್ವಿನಿ ಗೌಡ ಅವರು "ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಬೇಕು ಪಟ್ಟು ಹಿಡಿದರು. ಇದರ ಮಧ್ಯೆ ಅತಿಥಿಗಳ ಬಳಿ ಕ್ಷಮೆ ಕೇಳಿಸುವುದಾಗಿ ಕಮಿಟ್ ಆಗಿದ್ದ ಕಾವ್ಯ ಮೇಲೂ ಅಶ್ವಿನಿ ಗೌಡ ಅವರು ರಾಂಗ್ ಆದರು. ಬುಧವಾರದ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಅವರು ಅತಿಥಿಗಳ ಬಳಿ "ನನ್ನ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿಲ್ಲ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕು.