ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂವಿಧಾನದ ಸೌಂದರ್ಯ ಅದರ ಸಮರ್ಪಕ ಅನುಷ್ಠಾನದಲ್ಲಿದೆ: ಪ್ರಧಾನ ಜಿಲ್ಲಾ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ

೧೯೪೯ ನವೆಂಬರ್ ೨೬ರಂದು ಭಾರತ ದೇಶವು ಸಂವಿಧಾನವನ್ನು ಅಂಗೀಕರಿಸುತ್ತದೆ. ದೇಶದಲ್ಲಿ ಈ ಸಂವಿಧಾನ ೧೯೫೦ ಜನವರಿ ೨೬ ರಂದು ಜಾರಿಗೆ ಬರುತ್ತದೆ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ಸರಕಾರವು ೨೦೧೫ರಲ್ಲಿ ಸಂವಿಧಾನ ದಿನಾಚರಣೆಯನ್ನು ಸಾರ್ವಜಕವಾಗಿ ಆಚರಿಸಲು ಘೋಷಿಸಿತು.

ಸಂವಿಧಾನದ ಸೌಂದರ್ಯ ಅದರ ಸಮರ್ಪಕ ಅನುಷ್ಠಾನದಲ್ಲಿದೆ

ಸಂವಿಧಾನವು ಎಷ್ಟೇ ಚೆನ್ನಾಗಿರಲಿ, ಕೆಟ್ಟದ್ದೇ ಆಗಿರಲಿ ಇದನ್ನು ಜಾರಿ ಮಾಡುವ ಸ್ಥಾನದಲ್ಲಿರುವವರು ಉತ್ತಮರಿದ್ದಲ್ಲಿ ಅದರ ಸೌಂದರ್ಯ ಸಹಜವಾಗಿ ಹೆಚ್ಚಾಗಲಿದೆ,ಉದ್ದೇಶ ಈಡೇರಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮೇಲಿಂಗೇಗೌಡ ತಿಳಿಸಿದರು. -

Ashok Nayak
Ashok Nayak Nov 27, 2025 12:17 AM

ಚಿಕ್ಕಬಳ್ಳಾಪುರ: ಸಂವಿಧಾನವು ಎಷ್ಟೇ ಚೆನ್ನಾಗಿರಲಿ, ಕೆಟ್ಟದ್ದೇ ಆಗಿರಲಿ ಇದನ್ನು ಜಾರಿ ಮಾಡುವ ಸ್ಥಾನದಲ್ಲಿರುವವರು ಉತ್ತಮರಿದ್ದಲ್ಲಿ ಅದರ ಸೌಂದರ್ಯ ಸಹಜವಾಗಿ ಹೆಚ್ಚಾಗ ಲಿದೆ ಉದ್ದೇಶ ಈಡೇರಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ. ರಾಮೇಲಿಂಗೇಗೌಡ (Principal District and Sessions Judge T.P. Ramalinge gowda)ತಿಳಿಸಿದರು.

ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಕಾಲೇಜು ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

೧೯೪೯ ನವೆಂಬರ್ ೨೬ರಂದು ಭಾರತ ದೇಶವು ಸಂವಿಧಾನವನ್ನು ಅಂಗೀಕರಿಸುತ್ತದೆ. ದೇಶದಲ್ಲಿ ಈ ಸಂವಿಧಾನ ೧೯೫೦ ಜನವರಿ ೨೬ ರಂದು ಜಾರಿಗೆ ಬರುತ್ತದೆ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ಸರಕಾರವು ೨೦೧೫ರಲ್ಲಿ ಸಂವಿಧಾನ ದಿನಾಚರಣೆಯನ್ನು ಸಾರ್ವಜಕವಾಗಿ ಆಚರಿಸಲು ಘೋಷಿಸಿತು. ಹೀಗಾಗಿ ಇಂದು ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ೧೦ ವರ್ಷದ ದಿನಾಚರಣೆಯನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ: Chikkaballapur News: ದೇಶದ ಎಲ್ಲರಿಗೂ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ: ಡೀನ್ ಡಾ.ಎಂ.ಎಲ್.ಮಂಜುನಾಥ್

ಈ ದಿನದ ನೆಪದಲ್ಲಿ ಭವ್ಯ ಭಾರತದ ಕನಸನ್ನು ಕಂಡು ಆ ಕನಸಿಗೆ ಅಕ್ಷರ ರೂಪಕೊಟ್ಟ ಸಂವಿಧಾನ ಬರೆದ ಮಹನೀಯರ ಕೊಡುಗೆಯನ್ನು ಸ್ಮರಣೆ ಮಾಡುವುದು ಕೂಡ ಇದರ ಉದ್ದೇಶವಾಗಿದೆ. ೧೯೪೭ಕ್ಕೂ ಮೊದಲು ೩೦೦ ವರ್ಷಗಳಿಗಳಿಗೂ ಹೆಚ್ಚು ಕಾಲ ನಾವು ಪರಕೀಯರ ಆಡಳಿತದಲ್ಲಿ ಇದ್ದೆವು. ಇದನ್ನು ವಿರೋಧಿಸಿ ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ದೇಶದಲ್ಲಿ ಅನೇಕ ಕ್ರಾಂತಿಗಳು ಆಗಿದ್ದರ ಫಲವಾಗಿ ಸ್ವಾತಂತ್ರö್ಯ ಲಭಿಸಿತು. ಮುಂದೇನು ಅಂದಾಗ ೧೯೪೬ರಲ್ಲಿ ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲಾಯಿತು. ಅದರ ಮೊದಲ ಅಧ್ಯಕ್ಷರಾಗಿ ಸಚ್ಚಿದಾನಂದ ಸಿನ್ಹ, ನಂತರ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ ಎಂದರು.

ಉಡುಪಿಯ ಸರ್.ಬಿ.ಎನ್. ರಾವ್ ಅವರನ್ನು ಸಂವಿಧಾನ ಸಭೆಯ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳುತ್ತಾರೆ. ಅವರು ತಮ್ಮ ಅಪಾರ ಪಾಂಡಿತ್ಯದ ಮೂಲಕ ಸಂವಿಧಾನದ ಕರಡನ್ನು ತಯಾರು ಮಾಡಿ ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂದೆ ಮಂಡಿಸುತ್ತಾರೆ. ಹೀಗೆ ೨ ವರ್ಷ ೧೧ ತಿಂಗಳು ೧೮ ದಿವಸಗಳ ಕಾಲ ಸಂವಿಧಾನ ರಚನಾ ಸಭೆಯಲ್ಲಿ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ಅನೇಕ ಮಹನೀಯರು ತಮ್ಮ ಅನುಭವಗಳನ್ನು ಹಂಚಿಕೊಂಡು ಅದರ ಮೇಲೆ ಸುಧೀರ್ಘವಾದ ಚರ್ಚೆಗಳನ್ನು ಮಾಡಿ ಅಂತಿಮವಾಗಿ ೧೯೪೬ ನವೆಂಬರ್ ೪ರಂದು ಸಂವಿಧಾನವನ್ನು ಸಭೆಯ ಮುಂದೆ ಅಂಬೇಡ್ಕರ್ ಮಂಡಿಸುತ್ತಾರೆ. ಆನಂತರ ಸುಧೀರ್ಘ ಚರ್ಚೆ ನಡೆದು ಹಲವಾರು ತಿದ್ದುಪಡಿ ತಂದು ಅಂತಿಮವಾಗಿ ನವೆಂಬರ್೨೬ ೧೯೪೬ರಂದು ಭಾರತ ದೇಶವು ಸಂವಿಧಾನವನ್ನು ಅಂಗೀಕರಿಸಿಕೊಳ್ಳುತ್ತದೆ.ಅದರ ಸವಿನೆನಪಿಗೆ ನಾವಿಂದು ಕಾರ್ಯಕ್ರಮ ಹಮ್ಮಿಕೊಂಡಿ ದ್ದೇವೆ ಎಂದರು.

ಸAವಿಧಾನವನ್ನು ಅಂಗೀಕರಿಸುವ ಮೂಲಕ ನಮ್ಮ ದೇಶವನ್ನು ಸರ್ವಸ್ವತಂತ್ರ ಸಾರ್ವಭೌಮ ಗಣತಂತ್ರವನ್ನಾಗಿ ರೂಪಿಸಲಾಗಿದೆ. ಸಂವಿಧಾನದ ಕರಡನ್ನು ಸಂಸತ್‌ನಲ್ಲಿ ಮಂಡಿಸಿದ ಅಂಬೇಡ್ಕರ್ ಈ ಸಂವಿಧಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಮ್ಮ ಸುಧೀರ್ಘ ಭಾಷಣದಲ್ಲಿ ದೇಶದ ಜನತೆಗೆ ಹೇಳುತ್ತಾರೆ. ಏನು ಹೇಳಿದ್ದಾರೆ ಎಂದರೆ ಸಂವಿಧಾನ ಪರಿಣಾಮಕಾರಿಯಾಗಿ ಇದೆ ಅಥವಾ ಇಲ್ಲ,ಸಂವಿಧಾನ ಒಳ್ಳೆಯದೋ ಅಥವಾ ಕೆಟ್ಟದ್ದೋ ಅನ್ನೋದು ಪುಸ್ತಕದಿಂದ ಬರುವುದಿಲ್ಲ. ಆ ಸಂವಿಧಾನವನ್ನು ಅನುಷ್ಠಾನ ಗೊಳಿಸಲಿಕ್ಕೆ ಯಾರು ಅಧಿಕಾರಕ್ಕೆ ಬರುತ್ತಾರೋ ಅವರ ಸಾಮರ್ಥ್ಯದ ಮೇಲೆ ನಿರ್ಧಾರ ವಾಗುತ್ತದೆ. ಸಂವಿಧಾನ ಜಾರಿಗೊಳಿಸುವವರು ನಿಷ್ಪçಯೋಜಕರಾದರೆ ಎಂತಹ ಒಳ್ಳೆಯ ಸಂವಿಧಾನ ಇದ್ದರೂ ಅದರಿಂದ ಏನೂ ಕೂಡ ಪ್ರಯೋಜನ ಆಗುವುದಿಲ್ಲ ಎನ್ನುತ್ತಾರೆ ಎಂದರು.

ಸಂವಿಧಾನದ ಆಶಯ ಈಡೇರಬೇಕಾದರೆ ಯುವಶಕ್ತಿಯೇ ದೇಶದ ಆಸ್ತಿಯಾಗಬೇಕಿದೆ. ವಯಸ್ಕ ಮತದಾನ ಪದ್ದತಿಯ ಮೂಲಕ ಮತ ಚಲಾಯಿಸುವ ವೇಳೆ ಯೋಗ್ಯರನ್ನು ಅಧಿಕಾರಕ್ಕೆ ತಂದರೆ ನಾವು ನೀವು ಭಾರತದ ಸಂವಿಧಾನ ಉಳಿಯಲಿದೆ. ಅಮೆರಿಕಾ ದೇಶವು ಅತ್ಯಂತ ಪ್ರಾಚೀನ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರವಾಗಿದ್ದರೂ ಕೂಡ ವಿಶ್ವದಲ್ಲಿಯೇ ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವವುಳ್ಳ ಗಣತಂತ್ರ ದೇಶದ ಮಾದರಿ ಭಾರತದಲ್ಲಿದೆ. ಇಂತಹ ಸಂವಿಧಾನದ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರೆ ನೀಡಿದರು.

ಇದೇ ವೇಳೆ, ವಿದ್ಯಾರ್ಥಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ. ರಾಮೇಲಿಂಗೇಗೌಡ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕೊಟ್ಟ ಭವ್ಯ ದಿವ್ಯ ಸಂವಿಧಾನದ ಅಡಿಯಲ್ಲಿ ದೇಶವು ಸುಭದ್ರವಾಗಿದೆ.

ಎಲ್ಲಾ ದೇಶವಾಸಿಗಳಿಗೆ ಗೌರವಯುತ ಬದುಕನ್ನು ನೀಡಿದೆ. ಆದರೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಕೂಡ ಪೂರ್ಣ ಪ್ರಮಾಣದಲ್ಲಿ ಸಂವಿಧಾನದ ಮೂಲೋದ್ಧೇಶಗಳು ಈಡೇರಿಲ್ಲ ಎಂಬ ಕೊರಗಿದೆ. ಏನೇ ಆಗಲಿ ಭಾರತದ ಪ್ರಜೆಗಳಾದ ನಾವು ಸಂವಿಧಾನದ ಆಶಯಗಳನ್ನು ಪಾಲಿಸುವ ಕೆಲಸ ಮಾಡೋಣ.ಸಂವಿಧಾನವನ್ನು ಗೌರವಿಸುವ ಮೂಲಕ ನಮ್ಮನ್ನು ನಾವು ಕಾಪಾಡಿಕೊಳ್ಳೋಣ ಎಂದರು.

ವಿಶೇಷ ಉಪನ್ಯಾಸ ನೀಡಿದ ಟಿ.ಎಸ್.ವಿಜಯಶಂಕರ್ ಮಾತನಾಡಿ, ಭಾರತೀಯ ಸಂವಿ ಧಾನದ ಪುಸ್ತಕದ ಮೇಲೆ ೨೮೪ ಮಂದಿ ತಜ್ಞರ ಸಹಿಯಿದೆ. ಸಾಕಷ್ಟು ಮಂದಿ ಬರೆದಿದ್ದರೂ ಕರಡು ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ಪರಿಷ್ಕರಣೆಗೆ ಒಳಗಾಗಿದೆ.ಏನೇ ಆಗಲಿ ಭಾರತೀಯ ಸಂವಿಧಾನ ಶ್ರೇಷ್ಟ ಸಂವಿಧಾನವಾಗಿದೆ. ಪ್ರತಿಯೊಬ್ಬ ಭಾರತೀಯರೂ ಕೂಡೆ ಇದರ ಆಶಯಗಳನ್ನು ತಿಳಿದಿರಬೇಕು.ಎಲ್ಲಾ ಕಾನೂನುಗಳ ಮೂಲ ಸಂವಿಧಾನವೇ ಆಗಿದೆ ಎಂದರು.

೧೩ ದೇಶಗಳ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡು ಈ ನೆಲಕ್ಕೆ ಒಪ್ಪುವ ಉತ್ತಮ ಅಂಶಗಳನ್ನು ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಸಂವಿಧಾನದ ಪೀಠಿಕೆ ಯನ್ನು ಸಂಪೂರ್ಣವಾಗಿ ಓದಿ ಅದರಂತೆ ನಡೆದುಕೊಳ್ಳಬೇಕು. ಅಂಬೇಡ್ಕರ್ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಒಡೆಯುವ ಕೆಲಸವನ್ನು ಎಂದೂ ಕೂಡ ಮಾಡಲಿಲ್ಲ. ಮೂಲಭೂತ ಹಕ್ಕುಗಳಂತೆ ಕರ್ತವ್ಯಗಳನ್ನು ಪಾಲಿಸೋಣ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ತೃತೀಯ ಬಿ.ಎ. ದೀಪಿಕ, ಗೌತಮಿ,ಎರಡನೇ ವರ್ಷದ ಮೌನಿಕ,ಎರಡನೇ ವರ್ಷದ ಬಿ.ಎ. ವಿದ್ಯಾರ್ಥಿ ಶೈಲ ಮತ್ತಿತರ ವಿದ್ಯಾರ್ಥಿಗಳು ಸಂವಿಧಾನ ಆಶಯಗಳು ವಿಶೇಷವಾಗಿ ಸಮಾನತೆ, ಧಾರ್ಮಿಕ ಸ್ವಾತಂತ್ರö್ಯ,ಕಡ್ಡಾಯ ಶಿಕ್ಷಣದ ಬಗ್ಗೆ ನಡೆದ ಸಂವಾಧದಲ್ಲಿ ಭಾಗವಹಿಸಿ ಬಿಸಿಬಿಸಿ ಚರ್ಚೆಗೆ ಕಾರಣವಾದರು.ಜಾತಿರಹಿತ ಸಮಾಜ ನಿರ್ಮಾಣ, ಶಾಲಾ ಕಾಲೇಜು ಶುಲ್ಕದಲ್ಲಿ ತಾರತಮ್ಯ ನಿವಾರಣೆ ಬಗ್ಗೆ ಸಭೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಕಾರ್ಯಕ್ರಮದಲ್ಲಿಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶಿಲ್ಪ.ಬಿ.ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಎಂ.ಲತಾಕುಮಾರಿ, ಬಿ.ಶಾರದ, ಎಸ್.ವಿ. ಕಾಂತರಾಜ್, ಎಸ್.ಶ್ರೀಧರ್, ಹೆಚ್.ಕೆ.ಉಮೇಶ, ಎಂ.ಭಾರತಿ, ಪ್ರೇಮಕುಮಾರ್, ಮಾನಸ ಶೇಖರ್, ಎಂ.ಶೃತಿ, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್, ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಪ್ರೊಫೆಸರ್ ರಾಮಕೃಷ್ಣ, ಹರೀಶ್, ಮೋಹನ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶಾರದ, ಗ್ರಂಥಪಾಲಕ ಸಂತೋಷ್,ವ್ಯವಸ್ಥಾಪಕ ಸುಬ್ರಹ್ಮಣಿ ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.